ಮೇ 6 ರಂದು ಚಾರ್ಲ್ಸ್ ಅವರಿಗೆ ಔಪಚಾರಿಕವಾಗಿ ಪಟ್ಟಾಭಿಷೇಕ ಮಾಡಲಾಯಿತು. ಎರಡು ಗಂಟೆಗಳ ಈ ಕಿರೀಟದಾರಣೆಯ ಸಾಂಪ್ರದಾಯ ಕಾರ್ಯಕ್ರಮದಲ್ಲಿ ಕ್ಯಾಂಟರ್ಬರಿಯ ಆರ್ಚ್ಬಿಷಪ್ ರಾಜನ ತಲೆಯ ಮೇಲೆ ಸೇಂಟ್ ಎಡ್ವರ್ಡ್ ಕಿರೀಟವನ್ನು ಇರಿಸಿದರು. ಕಿಂಗ್ ಚಾರ್ಲ್ಸ್ ನಂತರ, ಅವರ ಪತ್ನಿ ಕ್ಯಾಮಿಲ್ಲಾ ಕೂಡ ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ಬ್ರಿಟನ್ ರಾಣಿಯಾಗಿ ಪಟ್ಟಾಭಿಷಿಕ್ತಳಾದರು.
ವೆಸ್ಟ್‌ಮಿನಿಸ್ಟರ್ ಅಬ್ಬೆ 1066 ರಿಂದಲೂ ಪ್ರತಿ ಬ್ರಿಟನ್ ರಾಜರ ಪಟ್ಟಾಭಿಷೇಕ ನಡೆದ ಸ್ಥಳವಾಗಿದೆ. ವಿಲಿಯಂ ದಿ ಕಾಂಕರರ್ ಇಲ್ಲಿ ಮೊದಲ ಬ್ರಿಟನ್ ರಾಜನಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ಕಿಂಗ್ ಚಾರ್ಲ್ಸ್ III ಮತ್ತು ಅವರ ಪತ್ನಿ ರಾಣಿ ಕ್ಯಾಮಿಲ್ಲಾ ಈ ಭವ್ಯ ಸಂಪ್ರದಾಯವನ್ನು ಅನುಸರಿಸಿದರು. ಈ ಸಂದರ್ಭದಲ್ಲಿ, ಧಾರ್ಮಿಕ ಮುಖಂಡರು ಮತ್ತು ಹಿಂದೂ, ಸಿಖ್, ಮುಸ್ಲಿಂ, ಬೌದ್ಧ ಮತ್ತು ಯಹೂದಿ ಸಮುದಾಯಗಳ ಪ್ರತಿನಿಧಿಗಳು ಸಹ ಉಪಸ್ಥಿತರಿದ್ದರು.