Kerala Transgender: ಮಹಿಳಾ ದಿನಾಚರಣೆ ದಿನವೇ ಮಗುವಿಗೆ ನಾಮಕರಣ ಮಾಡಿದ ದೇಶದ ಮೊದಲ ತೃತೀಯ ಲಿಂಗಿ ದಂಪತಿ!

ದೇಶದಲ್ಲೇ ಮೊದಲ ಬಾರಿಗೆ ಕೇರಳದ ತೃತೀಯಲಿಂಗಿ ದಂಪತಿಗಳು ಮಗುವಿನ ನಿರೀಕ್ಷೆಯಲ್ಲಿದ್ದ ವಿಚಾರ ಎಲ್ಲೆಡೆ ವೈರಲ್ ಆಗಿ ಟ್ರೆಂಡ್ ಆಗಿತ್ತು. ಇದೀಗ ಜನ್ಮ ನೀಡಿರುವ ತಮ್ಮ ಮಗುವಿಗೆ ಮಹಿಳಾ ದಿನಾಚರಣೆಯ ದಿನವೇ ನಾಮಕರಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

First published:

  • 16

    Kerala Transgender: ಮಹಿಳಾ ದಿನಾಚರಣೆ ದಿನವೇ ಮಗುವಿಗೆ ನಾಮಕರಣ ಮಾಡಿದ ದೇಶದ ಮೊದಲ ತೃತೀಯ ಲಿಂಗಿ ದಂಪತಿ!

    ದೇಶದೆಲ್ಲೆಡೆ ಸುದ್ದಿಯಾಗಿದ್ದ ಕೇರಳದ ಜಿಯಾ ಮತ್ತು ಜಹ್ಹಾದ್ ತೃತೀಯಲಿಂಗಿ ದಂಪತಿ ತಮ್ಮ ಮಗುವಿಗೆ ಮಹಿಳಾ ದಿನಾಚರಣೆ ದಿನವೇ ನಾಮಕರಣ ಮಾಡಿ ಮತ್ತೊಮ್ಮೆ ವಿಶೇಷ ಎನಿಸಿಕೊಂಡಿದ್ದಾರೆ.

    MORE
    GALLERIES

  • 26

    Kerala Transgender: ಮಹಿಳಾ ದಿನಾಚರಣೆ ದಿನವೇ ಮಗುವಿಗೆ ನಾಮಕರಣ ಮಾಡಿದ ದೇಶದ ಮೊದಲ ತೃತೀಯ ಲಿಂಗಿ ದಂಪತಿ!

    ದೇಶದಲ್ಲೇ ಮೊದಲ ಬಾರಿಗೆ ಕೇರಳದ ತೃತೀಯಲಿಂಗಿ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದ ವಿಚಾರ ಎಲ್ಲೆಡೆ ವೈರಲ್ ಆಗಿ ಟ್ರೆಂಡ್ ಆಗಿತ್ತು.  

    MORE
    GALLERIES

  • 36

    Kerala Transgender: ಮಹಿಳಾ ದಿನಾಚರಣೆ ದಿನವೇ ಮಗುವಿಗೆ ನಾಮಕರಣ ಮಾಡಿದ ದೇಶದ ಮೊದಲ ತೃತೀಯ ಲಿಂಗಿ ದಂಪತಿ!

    ಮಗುವಿಗೆ ಜನ್ಮ ನೀಡಿದ್ದ ಸಂದರ್ಭದಲ್ಲಿ ಮಗುವಿನ ಲಿಂಗ ಗುರುತನ್ನು ಬಹಿರಂಗಪಡಿಸಲು ಈ ತೃತೀಯ ಲಿಂಗಿ ದಂಪತಿ ನಿರಾಕರಿಸಿತ್ತು. ಆದರೆ ಇದೀಗ ದಂಪತಿ ಮಗುವಿಗೆ ಜಬಿಯಾ ಸಹದ್ ನಾಮಕರಣ ಮಾಡಿದ್ದಾರೆ. ಮಗುವಿಗೆ ಹಾಲಿನ ಬ್ಯಾಂಕ್ ಮೂಲಕ ಹಾಲು ಪಡೆದು ಸಾಕಲು ದಂಪತಿ ನಿರ್ಧರಿಸಿದ್ದಾರೆ. 

    MORE
    GALLERIES

  • 46

    Kerala Transgender: ಮಹಿಳಾ ದಿನಾಚರಣೆ ದಿನವೇ ಮಗುವಿಗೆ ನಾಮಕರಣ ಮಾಡಿದ ದೇಶದ ಮೊದಲ ತೃತೀಯ ಲಿಂಗಿ ದಂಪತಿ!

    ಜಿಯಾ ಓರ್ವ ನರ್ತಕಿಯಾಗಿದ್ದು ಜಹ್ಹಾದ್ ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.  ಈ ದಂಪತಿ ಮಗುವನ್ನು ಸ್ವತಃ ಪಡೆಯುವ ಮುನ್ನ ದಂಪತಿ ಮಗುವನ್ನು ದತ್ತು ಪಡೆಯಲು ಪ್ರಯತ್ನಿಸಿದ್ದರು. ಆದರೆ, ದಂಪತಿ ಟ್ರಾನ್ಸ್‌ಜೆಂಡರ್‌ ಆಗಿರುವ ಕಾರಣ ಕಾನೂನು ಪ್ರಕ್ರಿಯೆಯು ಸವಾಲಾಗಿತ್ತು. ಆ ನಂತರ ತಮ್ಮದೇ ಮಗುವನ್ನು ಪಡೆಯುವ ನಿರ್ಧಾರ ಮಾಡಿದ್ದರು

    MORE
    GALLERIES

  • 56

    Kerala Transgender: ಮಹಿಳಾ ದಿನಾಚರಣೆ ದಿನವೇ ಮಗುವಿಗೆ ನಾಮಕರಣ ಮಾಡಿದ ದೇಶದ ಮೊದಲ ತೃತೀಯ ಲಿಂಗಿ ದಂಪತಿ!

    ವರದಿಯ ಪ್ರಕಾರ ಮಗುವಿಗೆ ಜನ್ಮ ನೀಡಿರುವ ಜಹಾದ್ ಫಾಜಿಲ್ ಅವರನ್ನು ತಂದೆ ಎಂದು ಪರಿಗಣಿಸಿ ಜೊತೆಗೆ ತನ್ನನ್ನು ತಾಯಿ ಎಂದು ಪರಿಗಣಿಸಬೇಕೆಂದು ಸರ್ಕಾರಕ್ಕೆ ಜಿಯಾ ಮನವಿ ಮಾಡಿಕೊಂಡಿದ್ದಾರೆ. ಮಗು ಜನಿಸಿದ ತಕ್ಷಣ ಸಿಹಿ ಹಂಚಲು ಹೋದ ಸಂದರ್ಭದಲ್ಲಿ ಮೆಡಿಕಲ್ ಕಾಲೇಜು ಅಧೀಕ್ಷಕರಿಗೆ ಈ ಜೋಡಿ ದಾಖಲೆಗಳಲ್ಲಿ ಜಹಾದ್‌ನನ್ನು ತಂದೆ ಎಂದು ಸೇರಿಸುವ ಸಲುವಾಗಿ ಮನವಿ ಮಾಡಿದ್ದಾರೆ. ಆಸ್ಪತ್ರೆಯ ಅಧಿಕಾರಿಗಳು ಮತ್ತು ಆರೋಗ್ಯ ಸಚಿವರು ಈ ವಿಚಾರದಲ್ಲಿ ಬೆಂಬಲ ನೀಡುವ ಭರವಸೆಯನ್ನು ಜೋಡಿಗಳಿಬ್ಬರು ಇಟ್ಟುಕೊಂಡಿದ್ದಾರೆ.

    MORE
    GALLERIES

  • 66

    Kerala Transgender: ಮಹಿಳಾ ದಿನಾಚರಣೆ ದಿನವೇ ಮಗುವಿಗೆ ನಾಮಕರಣ ಮಾಡಿದ ದೇಶದ ಮೊದಲ ತೃತೀಯ ಲಿಂಗಿ ದಂಪತಿ!

    ಜಹ್ಹಾದ್ ಫಾಝಿಲ್ ಮಗುವಿಗೆ ಜನ್ಮ ನೀಡಿದ್ದರೂ ಸಹಿತ ಅವನೇ ತಂದೆಯಾಗಿರಬೇಕು ಎಂಬುದು ಅವರಿಬ್ಬರ ಆಸೆಯಾಗಿದೆ. ಒಂದು ವೇಳೆ ಅವಶ್ಯಕ ಎಂದೆನಿಸಿದರೆ ಕಾನೂನು ಹೋರಾಟಕ್ಕೂ ಕೂಡ ನಾವು ರೆಡಿ ಎಂದು ಜಿಯಾ ಖಾಸಗಿ ಮಾಧ್ಯಮವೊಂದರಲ್ಲಿ ಮಾಹಿತಿ ಕೊಟ್ಟಿದ್ದಾರೆ.

    MORE
    GALLERIES