Kerala Rains: ಪ್ರವಾಹದ ಹೊಡೆತಕ್ಕೆ ಕೇರಳ ತತ್ತರ; ಇನ್ನೂ 4 ದಿನ 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ
Kerala Floods: ಕೇರಳದಲ್ಲಿ ಒಂದು ವಾರದಿಂದ ಭಾರೀ ಮಳೆ ಸುರಿಯುತ್ತಿದೆ. ಬಹುತೇಕ ಕಡೆ ಭೂಕುಸಿತ ಉಂಟಾಗಿದ್ದು, ಪ್ರವಾಹದ ಹೊಡೆತಕ್ಕೆ ಮನೆಗಳೇ ಕೊಚ್ಚಿಕೊಂಡು ಹೋಗಿವೆ. ಈ ಹಿನ್ನೆಲೆಯಲ್ಲಿ ಆ. 11ರವರೆಗೆ ಇಡುಕ್ಕಿ, ಮಲಪ್ಪುರಂ, ವಯನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುನ್ನಾರ್ನಲ್ಲಿ ಇಂದು ಉಂಟಾದ ಭೂಕುಸಿತದಲ್ಲಿ ಐವರು ಸಾವನ್ನಪ್ಪಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಕೇರಳದಲ್ಲಿ ಒಂದು ವಾರದಿಂದ ಭಾರೀ ಮಳೆ ಸುರಿಯುತ್ತಿದೆ. ಪ್ರತಿವರ್ಷ ದೇವರನಾಡೆಂದೇ ಕರೆಯಲಾಗುವ ಕೇರಳದಲ್ಲಿ ಪ್ರವಾಹದಿಂದ ಲಕ್ಷಾಂತರ ಎಕರೆ ಜಾಗ, ಮನೆಗಳು ಕೊಚ್ಚಿಹೋಗುತ್ತವೆ. ನೂರಾರು ಜನರು ಸಾವನ್ನಪ್ಪುತ್ತಾರೆ.
2/ 34
ಈಗ ಮಳೆಯ ಆರ್ಭಟ ಹೆಚ್ಚಾಗುತ್ತಿದ್ದು, ಇಂದು ಮುನ್ನಾರ್ ಬಳಿ ನಡೆದ ಭೂಕುಸಿತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
3/ 34
ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಮುನ್ನಾರ್ ನ ರಾಜಮಲಾದಲ್ಲಿ ಇಂದು ಮುಂಜಾನೆ ಗುಡ್ಡ ಕುಸಿದಿದೆ. ಇದರ ಪರಿಣಾಮ ಹಲವರು ಮಣ್ಣಿನಡಿ ಸಿಲುಕಿದ್ದಾರೆ.
4/ 34
ಕೇರಳದ ಮುನ್ನಾರ್ ಬಳಿ ಮಳೆಯಿಂದಾಗಿ ಭಾರೀ ಭೂಕುಸಿತ ಉಂಟಾಗಿದ್ದು, ಐವರು ಸಾವನ್ನಪ್ಪಿದ್ದಾರೆ. ಈಗಾಗಲೇ ಮಣ್ಣಿನಡಿ ಸಿಲುಕಿದ್ದ 10ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದ್ದು, ಉಳಿದವರ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
5/ 34
ಮುನ್ನಾರ್ನಲ್ಲಿ ಉಂಟಾಗಿರುವ ಭೂಕುಸಿತದಲ್ಲಿ ಇನ್ನೂ 80ಕ್ಕೂ ಹೆಚ್ಚು ಜನರು ಸಿಲುಕಿರುವ ಸಾಧ್ಯತೆಯಿದೆ ಎನ್ನಲಾಗಿದೆ.
6/ 34
ಟೀ ಎಸ್ಟೇಟ್ಗಳಲ್ಲಿ ಕೆಲಸ ಮಾಡುತ್ತಿದ್ದವರು ಆ ಭಾಗದಲ್ಲಿ ವಾಸವಾಗಿದ್ದರು. ಮೂರು ದಿನಗಳಿಂದ ಕೇರಳದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಹಲವೆಡೆ ಪ್ರವಾಹದ ಪರಿಸ್ಥಿತಿ ಎದುರಾಗಿದೆ.
7/ 34
ನದಿಗಳು ಉಕ್ಕಿ ಹರಿಯುತ್ತಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲು ಕೂಡ ಸಾಧ್ಯವಾಗದಂತಾಗಿದೆ.
8/ 34
ರಸ್ತೆಗಳಲ್ಲಿ ಬಿದ್ದ ಮರ, ಮಣ್ಣನ್ನು ತೆರವುಗೊಳಿಸಿ, ಮಣ್ಣಿನಡಿ ಸಿಲುಕಿದವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ.
9/ 34
ಭೂಕುಸಿತಕ್ಕೆ ಕ್ವಾರ್ಟರ್ಸ್ ಮತ್ತು ಚರ್ಚ್ ಕಟ್ಟಡ ಧರೆಗುರುಳಿ ಸುಮಾರು 80 ಮಂದಿ ಸಿಕ್ಕಿಹಾಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
10/ 34
ಇಂದು ನಸುಕಿನ ಜಾವ ಈ ದುರಂತ ಸಂಭವಿಸಿದ್ದರಿಂದ ನಿದ್ರೆಯಲ್ಲಿದ್ದ ಜನರಿಗೆ ಬೆಟ್ಟ ಕುಸಿದು ಬೀಳುವಾಗ ಎದ್ದು ಓಡಿಹೋಗಿ ತಪ್ಪಿಸಿಕೊಳ್ಳಲು ಸಮಯ ಇರಲಿಲ್ಲ.
11/ 34
ಅಲ್ಲದೆ, ಭಾರೀ ಮಳೆಗೆ ಪ್ರವಾಹ ಉಂಟಾಗಿ ಪೆರಿಯವರ ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದ್ದರಿಂದ ರಕ್ಷಣಾ ಪಡೆಗಳಿಗೆ ಸ್ಥಳಕ್ಕೆ ಬೇಗನೆ ತಲುಪಲು ಕೂಡ ಸಾಧ್ಯವಾಗಿಲ್ಲ.
12/ 34
ಸದ್ಯ ಸ್ಥಳದಲ್ಲಿ ಅಗ್ನಿಶಾಮಕ ಮತ್ತು ರಕ್ಷಣಾ ಪಡೆ ಸಿಬ್ಬಂದಿ, ಎನ್ ಡಿಆರ್ ಎಫ್, ಕಂದಾಯ ಇಲಾಖೆ ಅಧಿಕಾರಿಗಳು, ಎಸ್ಟೇಟ್ ಕಾರ್ಮಿಕರು ಮತ್ತು ಪೊಲೀಸರು ಅವಶೇಷಗಳಡಿ ಸಿಲುಕಿರುವವರನ್ನು ಹೊರತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.
13/ 34
ಕೇರಳದಲ್ಲಿ ಭಾರೀ ಮಳೆಯಿಂದ ಎರ್ನಾಕುಲಂನಲ್ಲಿರುವ ಅಲುವ ಮಹದೇವ ದೇವಸ್ಥಾನ ಮುಳುಗಿದೆ.
14/ 34
ಇಡುಕ್ಕಿ ಜಿಲ್ಲೆಯಲ್ಲಿ 88 ಕುಟುಂಬಗಳನ್ನು ಪರಿಹಾರ ಕ್ಷೇತ್ರಗಳಿಗೆ ಶಿಫ್ಟ್ ಮಾಡಲಾಗಿದೆ.
15/ 34
ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣೆಗೆ ಹೊರಟಿರುವ ರಕ್ಷಣಾ ಸಿಬ್ಬಂದಿ
16/ 34
ಕೇರಳದ ಈ ವರ್ಷದ ಪ್ರವಾಹದ ಚಿತ್ರಣ
17/ 34
ಕೇರಳದ ಈ ವರ್ಷದ ಪ್ರವಾಹದ ಚಿತ್ರಣ
18/ 34
ಕೇರಳದ ಈ ವರ್ಷದ ಪ್ರವಾಹದ ಚಿತ್ರಣ
19/ 34
ಕೇರಳದ ಈ ವರ್ಷದ ಪ್ರವಾಹದ ಚಿತ್ರಣ
20/ 34
ಕೇರಳದಲ್ಲಿ ಭಾರೀ ಮಳೆಯಿಂದ ರಸ್ತೆಗಳಲ್ಲಿ ನಿಂತಿರುವ ನೀರು
21/ 34
ಮುನ್ನಾರ್ ಬಳಿ ಗುಡ್ಡ ಕುಸಿದ ಜಾಗ
22/ 34
ಕೇರಳದಲ್ಲಿ ಉಕ್ಕಿ ಹರಿಯುತ್ತಿರುವ ನದಿಗಳು
23/ 34
ಕೇರಳದ ಈ ವರ್ಷದ ಪ್ರವಾಹದ ಚಿತ್ರಣ
24/ 34
ಕೇರಳದ ಈ ವರ್ಷದ ಪ್ರವಾಹದ ಚಿತ್ರಣ. ಮಳೆ ನೀರಿನಲ್ಲಿ ಮುಳುಗಿರುವ ಕಾರುಗಳು