Lesbian couple: ಕೇರಳದ ಮುಸ್ಲಿಂ ಲೆಸ್ಬಿಯನ್ ಜೋಡಿ ಮದ್ವೆಯಾಗಿಲ್ವಾ? ಫೋಟೋಸ್ ವೈರಲ್
Lesbian couple : ಕೇರಳದಲ್ಲಿ ಲೆಸ್ಬಿಯನ್ ಜೋಡಿ ಮದುವೆಯ ಡ್ರೆಸ್ನಲ್ಲಿ ಹಾರ ಬದಲಾಯಿಸಿಕೊಳ್ಳುತ್ತಿರುವ ದೃಶ್ಯ ವೈರಲ್ ಆಗಿದೆ. ಈ ಮದುವೆಯ ಪರ ಮತ್ತು ವಿರುದ್ಧ ವಾದಗಳಿವೆ. ಈ ಜೋಡಿ ಮದುವೆಯಾದರಾ?
ಲೆಸ್ಬಿಯನ್ ಜೋಡಿ ಆಧಿಲಾ ನಸ್ರೀನ್, ಫಾತಿಮಾ ನೂರಾ ಇಬ್ಬರೂ ಕೇರಳದವರು. ಇತ್ತೀಚೆಗಷ್ಟೇ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಮದುವೆಯ ಚಂದದ ಉಡುಗೆಯನ್ನು ಧರಿಸಿ ವರಮಾಲೆ ಮತ್ತು ರಿಂಗ್ ಎಕ್ಸ್ಚೇಂಜ್ ಮಾಡಿಕೊಳ್ಳುವ ಅವರ ಫೋಟೋಗಳು ಅವು ವೈರಲ್ ಆಗಿವೆ.
2/ 11
ಈ ಲೆಸ್ಬಿಯನ್ ಜೋಡಿ ತಮ್ಮ ಮದುವೆಯ ಫೋಟೋಗಳನ್ನು Instagram ಮತ್ತು Facebook ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮದುವೆಗೂ ಮುನ್ನ ಇಬ್ಬರ ಸಂಬಂಧ ವಿಚಾರವಾಗಿ ದೊಡ್ಡ ಜಗಳವಾಗಿತ್ತು. ಈ ಜೋಡಿ ಹೈಕೋರ್ಟ್ ಮೆಟ್ಟಿಲೇರಬೇಕಾಯಿತು.
3/ 11
ಅಂದಹಾಗೆ ಫಾತಿಮಾ ಹಾಗೂ ಆಧಿಲಾ ಬಾಲ್ಯದಿಂದಲೂ ಪರಿಚಿತರು. ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಜೀವನ ಪರ್ಯಂತ ಒಟ್ಟಿಗೆ ಇರಲು ನಿರ್ಧರಿಸಿದರು. ಈ ನಿರ್ಧಾರವನ್ನು ಪೋಷಕರು ಒಪ್ಪಲಿಲ್ಲ. ಆದ್ದರಿಂದ ಅವರು ಮೇ 2022 ರಲ್ಲಿ ಕೋಝಿಕ್ಕೋಡ್ನಿಂದ ಈ ಲೆಸ್ಬಿಯನ್ ಜೋಡಿ ಓಡಿ ಹೋದರು.
4/ 11
ಇಬ್ಬರ ಸಂಬಂಧ ಎಲ್ಲೆಡೆ ಸುದ್ದಿಯಾಗಿ ದೇಶಾದ್ಯಂತ ಚರ್ಚೆಯಾಯಿತು. ಕುಟುಂಬ ಸದಸ್ಯರು ಇಬ್ಬರೂ ಒಟ್ಟಿಗೆ ವಾಸಿಸಲು ಒಪ್ಪಿಗೆ ಕೊಟ್ಟು ಇಬ್ಬರನ್ನೂ ಮನೆಗೆ ಕರೆದುಕೊಂಡು ಹೋದರು.
5/ 11
ಆದರೆ ಮನೆಗೆ ಹೋದಾಗ ಮತ್ತೆ ಆದಿಲಾಳ ತಂದೆ-ತಾಯಿ ಇಬ್ಬರನ್ನೂ ಬೇರ್ಪಡಿಸಿದರು. ಈ ಕುರಿತು ಆದಿಲಾ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಫಾತಿಮಾಳೊಂದಿಗೆ ಇರಲು ಅವಕಾಶ ಮಾಡಿಕೊಡಬೇಕು ಎಂದು ಕೇಳಿದರು. ನ್ಯಾಯಾಲಯ ಅವರ ಪರವಾಗಿ ತೀರ್ಪು ನೀಡಿದೆ.
6/ 11
ಆದರೆ ನ್ಯಾಯಾಲಯದ ತೀರ್ಪು ಇಬ್ಬರ ಪೋಷಕರಿಗೂ ಇಷ್ಟವಾಗಿರಲಿಲ್ಲ. ಅದರಿಂದ ಹೆತ್ತವರನ್ನು ಎದುರುಹಾಕಿಕೊಂಡು ಈ ಜೋಡಿ ಅಂತೂ ಜೊತೆಯಾದರು. ಇತ್ತೀಚೆಗೆ ಇವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
7/ 11
ನಾವು ಫೋಟೋಶೂಟ್ನಲ್ಲಿ ಭಾಗವಹಿಸಿದ್ದೇವೆ ಅಷ್ಟೆ. ನಾವು ಈ ಕಲ್ಪನೆ ಇಷ್ಟಪಟ್ಟು ಈ ಫೋಟೋ ಶೂಟ್ ಮಾಡಿದ್ದೇವೆ ಎಂದು ಆಧಿಲಾ ಬಿಬಿಸಿಗೆ ತಿಳಿಸಿದ್ದಾರೆ. ನಾವು ಇನ್ನೂ ಮದುವೆಯಾಗಿಲ್ಲ. ಆದರೆ ನಾವು ಮದುವೆಯಾಗಲು ಬಯಸುತ್ತೇವೆ" ಎಂದು ಅವರು ಹೇಳಿದರು.
8/ 11
23 ವರ್ಷದ ಫಾತಿಮಾ ಈ ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಆಸೆ ಈಡೇರಿತು, ನಾವು ಶಾಶ್ವತವಾಗಿ ಭೇಟಿಯಾಗುತ್ತೇವೆ" ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
9/ 11
ಪೋಷಕರಿಂದ ಬೆದರಿಕೆ ಇರುವುದರಿಂದ ಮದುವೆ ಆಗಿಲ್ಲ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ. ಇಬ್ಬರು ಕುಟುಂಬವೂ ಸಂಪ್ರದಾಯಸ್ಥ ಕುಟುಂಬವಾಗಿದ್ದು ಅವರ ಮದುವೆಗೆ ಒಪ್ಪುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಅದೇ ಕಾರಣಕ್ಕೆ ತಾವು ಮದುವೆಯಾಗಿಲ್ಲ ಎನ್ನುತ್ತಿದ್ದಾರೆ ಎನ್ನಲಾಗಿದೆ.
10/ 11
ನಮ್ಮ ಸಮುದಾಯದ ಅನೇಕ ಜನರಿಗೆ ಸರಿಯಾದ ಸಾಕ್ಷರತೆ ಇಲ್ಲ. ಮಹಿಳೆಯರಿಗೆ ಉದ್ಯೋಗ ಸಿಗುವುದೂ ಕಷ್ಟವಾಗಿದೆ. ಆದರೆ ಈ ದಿನಗಳಲ್ಲಿ ಒಂದು ಕೆಲಸ ಇರಬೇಕು. ಮಹಿಳೆಯರು ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎನ್ನುತ್ತಾರೆ ಫಾತಿಮಾ.
11/ 11
ನ್ಯಾಯಾಲಯದ ತೀರ್ಪು ನಮ್ಮ ಪರವಾಗಿ ಬಂದಿರುವುದರಿಂದ ಒಟ್ಟಿಗೆ ಜೀವನ ನಡೆಸುತ್ತಿದ್ದೇವೆ. ಇದು ಜಗತ್ತನ್ನು ಬದಲಾಯಿಸುವುದಿಲ್ಲ ಎಂದು ಫಾತಿಮಾ ತಿಳಿಸಿದ್ದಾರೆ.