Love Marriage: ಕೇರಳ ಹುಡುಗನ ಪ್ರೀತಿಸಿ ಮದ್ವೆಯಾಗಿದ್ದ ಬೆಂಗಳೂರು ಹುಡುಗಿ ಕಿಡ್ನಾಪ್! ಮನೆಗೆ ನುಗ್ಗಿ ಫಿಲ್ಮಿ ಸ್ಟೈಲ್​ನಲ್ಲಿ ಅಪಹರಣ

ಕರ್ನಾಟಕದ ಯುವತಿಯನ್ನು ಕೇರಳದ ಆಳಪ್ಪುಳದ ಯುವಕನೊಬ್ಬ ಪ್ರೀತಿಸಿ ಮದುವೆಯಾಗಿದ್ದ. ಆದರೆ ಯುವತಿಯ ಸಂಬಂಧಿಕರು ಗಂಡನ ಮನೆಯವರ ಮೇಲೆ ದಾಳಿ ನಡೆಸಿ ಯುವತಿಯನ್ನ ಕಿಡ್ನಾಪ್​ ಮಾಡಿಕೊಂಡು ಬಂದಿದೆ ಎಂದು ದೂರು ದಾಖಲಾಗಿದೆ. ಯುವತಿಯ ಸಂಬಂಧಿಕರ ಒಂದು ಗುಂಪು ಯುವಕನ ಮನೆಗೆ ನುಗ್ಗಿ ಆಕೆಯನ್ನು ಅಪಹರಿಸಿದ್ದಾರೆ ಎನ್ನಲಾಗಿದೆ.

First published:

  • 16

    Love Marriage: ಕೇರಳ ಹುಡುಗನ ಪ್ರೀತಿಸಿ ಮದ್ವೆಯಾಗಿದ್ದ ಬೆಂಗಳೂರು ಹುಡುಗಿ ಕಿಡ್ನಾಪ್! ಮನೆಗೆ ನುಗ್ಗಿ ಫಿಲ್ಮಿ ಸ್ಟೈಲ್​ನಲ್ಲಿ ಅಪಹರಣ

    ಕರ್ನಾಟಕದ ಯುವತಿಯನ್ನು ಕೇರಳದ ಆಳಪ್ಪುಳ ಯುವಕನೊಬ್ಬ ಪ್ರೀತಿಸಿ ಮದುವೆಯಾಗಿದ್ದ. ಆದರೆ ಯುವತಿಯ ಸಂಬಂಧಿಕರು ಗಂಡನ ಮನೆಯವರ ಮೇಲೆ ದಾಳಿ ನಡೆಸಿ ಯುವತಿಯನ್ನ ಕಿಡ್ನಾಪ್​ ಮಾಡಿಕೊಂಡು ಬಂದಿದ್ದಾರೆ ಎಂದು ದೂರು ದಾಖಲಾಗಿದೆ. ಯುವತಿಯ ಸಂಬಂಧಿಕರ ಒಂದು ಗುಂಪು ಯುವಕನ ಮನೆಗೆ ನುಗ್ಗಿ ಆಕೆಯನ್ನು ಅಪಹರಿಸಿದ್ದಾರೆ ಎನ್ನಲಾಗಿದೆ.

    MORE
    GALLERIES

  • 26

    Love Marriage: ಕೇರಳ ಹುಡುಗನ ಪ್ರೀತಿಸಿ ಮದ್ವೆಯಾಗಿದ್ದ ಬೆಂಗಳೂರು ಹುಡುಗಿ ಕಿಡ್ನಾಪ್! ಮನೆಗೆ ನುಗ್ಗಿ ಫಿಲ್ಮಿ ಸ್ಟೈಲ್​ನಲ್ಲಿ ಅಪಹರಣ

    ಹರಿಪಾಡ್ ಕಾರ್ತಿಕಪಲ್ಲಿಯ 12ನೇ ವಾರ್ಡ್‌ನ ಅಖಿಲ ಭವನದಲ್ಲಿ ವಾಸಿಸುವ ಅನಿಲ್ ಕುಮಾರ್ ಅವರ ಪುತ್ರ ಅಖಿಲ್ (22) ಅವರನ್ನ ಬೆಂಗಳೂರಿನ ನ್ಯೂ ಹಾರಿಜನ್ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾಶ್ರೀ (18) ವಿವಾಹವಾಗಿದ್ದರು. ಇದೀಗ ಆಕೆಯ ಸಂಬಂಧಿಕರು ಅಪಹರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    MORE
    GALLERIES

  • 36

    Love Marriage: ಕೇರಳ ಹುಡುಗನ ಪ್ರೀತಿಸಿ ಮದ್ವೆಯಾಗಿದ್ದ ಬೆಂಗಳೂರು ಹುಡುಗಿ ಕಿಡ್ನಾಪ್! ಮನೆಗೆ ನುಗ್ಗಿ ಫಿಲ್ಮಿ ಸ್ಟೈಲ್​ನಲ್ಲಿ ಅಪಹರಣ

    ಅಖಿಲ್ ಸಾಮಾಜಿಕ ಜಾಲತಾಣಗಳ ಮೂಲಕ ವಿದ್ಯಾಶ್ರೀಯನ್ನು ಭೇಟಿಯಾಗಿದ್ದಾನೆ. ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಹುಡುಗಿ ಮನೆ ಬಿಟ್ಟು ಅಖಿಲ್ ಜೊತೆ ಓಡಿ ಬಂದಿದ್ದಾಳೆ. ಹುಡುಗಿ ಮಾರ್ಚ್ 29 ರಂದು ಅಖಿಲ್ ಜೊತೆ ಕೇರಳದ ಆಳಪ್ಪುಳ್​ಗೆ ಬಂದಿದ್ದಿ, ಮಾರ್ಚ್​ 30ರಂದು ಸ್ಥಳೀಯ ದೇವಸ್ಥಾನದಲ್ಲಿ ಇಬ್ಬರೂ ವಿವಾಹವಾಗಿದ್ದಾರೆ.

    MORE
    GALLERIES

  • 46

    Love Marriage: ಕೇರಳ ಹುಡುಗನ ಪ್ರೀತಿಸಿ ಮದ್ವೆಯಾಗಿದ್ದ ಬೆಂಗಳೂರು ಹುಡುಗಿ ಕಿಡ್ನಾಪ್! ಮನೆಗೆ ನುಗ್ಗಿ ಫಿಲ್ಮಿ ಸ್ಟೈಲ್​ನಲ್ಲಿ ಅಪಹರಣ

    ಕಿಡ್ನಾಪ್​ ದೂರು ದಾಖಲಾಗಿರುವ ಹಿನ್ನಲೆ ತಿರ್ಕುನ್ನಪುಳ ಪೊಲೀಸರು ಬೆಂಗಳೂರಿಗೆ ತೆರಳಿದ್ದಾರೆ. ತಿರ್ಕುನ್ನಪುಳ ಎಸ್‌ಐ ರತೀಶ್ ಬಾಬು ಮತ್ತು ಸಿಪಿಒಗಳಾದ ಶ್ಯಾಮ್, ವಿಷ್ಣು, ವೈಶಾಖ್ ಮತ್ತು ಅತಿರಾ ಅವರನ್ನೊಳಗೊಂಡ ತಂಡ ಬೆಂಗಳೂರಿಗೆ ತೆರಳಿದೆ.

    MORE
    GALLERIES

  • 56

    Love Marriage: ಕೇರಳ ಹುಡುಗನ ಪ್ರೀತಿಸಿ ಮದ್ವೆಯಾಗಿದ್ದ ಬೆಂಗಳೂರು ಹುಡುಗಿ ಕಿಡ್ನಾಪ್! ಮನೆಗೆ ನುಗ್ಗಿ ಫಿಲ್ಮಿ ಸ್ಟೈಲ್​ನಲ್ಲಿ ಅಪಹರಣ

    ತಂಡವು ತಮಿಳುನಾಡು ಮೂಲಕ ಬೆಂಗಳೂರಿಗೆ ತೆರಳಿದೆ ಎಂದು ತ್ರಿಕುನ್ನಪುಳ ಪೊಲೀಸರು ತಿಳಿಸಿದ್ದಾರೆ. ಶನಿವಾರ ಮುಂಜಾನೆ 5:30ರ ಸುಮಾರಿಗೆ ಮಾರಕಾಯುಧಗಳೊಂದಿಗೆ ಮೂರು ವಾಹನಗಳಲ್ಲಿ ಬಂದಿದ್ದ ಗುಂಪು ಹಲ್ಲೆ ಮಾಡಿ ಯುವತಿಯನ್ನು ಅಪಹರಿಸಿಕೊಂಡು ಹೋಗಿದ್ದಾರೆ.

    MORE
    GALLERIES

  • 66

    Love Marriage: ಕೇರಳ ಹುಡುಗನ ಪ್ರೀತಿಸಿ ಮದ್ವೆಯಾಗಿದ್ದ ಬೆಂಗಳೂರು ಹುಡುಗಿ ಕಿಡ್ನಾಪ್! ಮನೆಗೆ ನುಗ್ಗಿ ಫಿಲ್ಮಿ ಸ್ಟೈಲ್​ನಲ್ಲಿ ಅಪಹರಣ

    ಮನೆಯ ಬಾಗಿಲನ್ನು ಒದ್ದು ಒಳಗೆ ಪ್ರವೇಶಿಸಿದ ಗುಂಪು ಯುವತಿಯನ್ನು ಬಲವಂತವಾಗಿ ಕರೆದೊಯ್ದಿದೆ. ತಡೆಯಲು ಮುಂದಾದವರ ಮೇಲೆ ಹಲ್ಲೆ ನಡೆಸಿ ಮಾರಕಾಯುಧ ತೋರಿಸಿ ಕೊಲೆ ಬೆದರಿಕೆ ಹಾಕಿ ಬಾಲಕಿಯನ್ನು ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ ಎಂದು ಅಖಿಲ್ ದೂರಿನಲ್ಲಿ ತಿಳಿಸಿದ್ದಾರೆ.

    MORE
    GALLERIES