ಕಾನ್ಪುರದ ಗ್ವಾಲ್ಟೋಲಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅರುಣ್ ಕುಮಾರ್ ಹೆಂಡತಿ ಎದುರು ಪ್ರೇಯಸಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದಿದ್ದಾರೆ. ಮದುವೆಯಾಗಿ ಚಂದದ ಸಂಸಾರ ಹೊಂದಿದ್ದ ಅರುಣ್ ಕುಮಾರ್ ಮತ್ತೊಂದು ಹುಡುಗಿ ಜೊತೆಗೆ ಸಂಬಂಧವನ್ನು ಹೊಂದಿದ್ದರು. ಆದರೆ, ಈ ವಿಚಾರವನ್ನು ಮನೆಯಲ್ಲಿ ಗೊತ್ತಾಗದಂತೆ ಗೌಪ್ಯತೆ ಕಾಪಾಡಿಕೊಂಡಿದ್ದರು. ಆದರೆ, ದುರದೃಷ್ಟವಶಾತ್ ಈ ವಿಚಾರ ಮುಚ್ಚಿಡಲು ಇನ್ನಿಲ್ಲದಂತೆ ಹೆಂಡತಿ ಕೈಗೆ ಸಿಕ್ಕಿ ಬಿದ್ದಿದ್ದಾರೆ
ಗ್ವಾಲ್ಟೋಲಿಗೆ ಇತ್ತೀಚೆಗೆ ವರ್ಗಾವಣೆಯಾದ ಅರುಣ್ ಕುಮಾರ್ಗೆ ತನ್ನ ಈ ಸಂಬಂಧ ಕುಟುಂಬಕ್ಕೆ ತಿಳಿಯುವುದಿಲ್ಲ ಎಂಬ ನಂಬಿಕೆಗೆ ಕಾರಣ ಆತನ ಕುಟುಂಬ ಬೇರೆ ಊರಿನಲ್ಲಿದ್ದಿದ್ದು. ಹೆಂಡತಿ ಫುರುಕಬಾದ್ನಲ್ಲಿ ನೆಲೆಸಿದ್ದರು. ಈ ಹಿನ್ನಲೆ ಆತ ಪ್ರೇಯಸಿ ಜೊತೆ ನಿಶ್ಚಿಂತೆಯಿಂದ ಇದ್ದರು. ಆದರೆ, ಆತನ ದುರಾದೃಷ್ಟವಶ ಹೆಂಡತಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಫುರುಕಬಾದ್ನಿಂದ ಗ್ವಾಲ್ಟೋಲಿಗೆ ಆಗಮಿಸಿದ್ದಾರೆ. ಆದರೆ, ಈ ವಿಚಾರ ಅರುಣ್ಗೆ ತಿಳಿದಿರಲಿಲ್ಲ.