ಉತ್ತರ ಪ್ರದೇಶ ಪೊಲೀಸರು ಯಾವಾಗಲೂ ಚರ್ಚೆಯಲ್ಲಿರುತ್ತಾರೆ. ಇದೀಗ ಅದೇ ರಾಜ್ಯದ ಕಾನ್ಪುರ ಪೊಲೀಸರು ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ. ಅವರ ಕಾರ್ಯ ವೈಖರಿ ಮತ್ತೊಮ್ಮೆ ಪ್ರಶ್ನಾರ್ಥಕ ಚಿಹ್ನೆಗಳು ಎದ್ದಿವೆ. ಕಾನ್ಪುರ ಪೊಲೀಸರು 100 ವರ್ಷ ವಯಸ್ಸಿನ ವೃದ್ಧೆ ಮೇಲೆ ಸುಲಿಗೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರ ಪ್ರಕಾರ ಆಕೆ ಗುಂಡಾಗಿರಿ ಮಾಡಿ 10 ಲಕ್ಷಕ್ಕೆ ಮಹಿಳೆಯೊಬ್ಬರಿಗೆ ಬೇಡಿಕೆ ಇಟ್ಟಿದ್ದರು ಎಂದು ವರದಿಯಾಗಿದೆ. ಕಾನ್ಪುರದ ಕಲ್ಯಾಣಪುರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸುಲಿಗೆ ಪ್ರಕರಣ ದಾಖಲಿಸಿದ್ದಾರೆ.

ಒಬ್ಬರೆ ನಡೆಯಲಾಗ, ಸರಿಯಾಗಿ ಕಣ್ಣು ಕಾಣದ 100 ವರ್ಷದ ಮಹಿಳೆಯ ವಿರುದ್ಧ ಸುಲಿಗೆ ಪ್ರಕರಣ ದಾಖಲಾಗಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈ ವಿಷಯ ಪೊಲೀಸ್ ಆಯುಕ್ತರಿಗೆ ತಲುಪಿದ್ದು, ಠಾಣಾಧಿಕಾರಿಗಳಿಗೆ ಛೀಮಾರಿ ಹಾಕಿದ್ದಾರೆ. ಅದೇ ಸಮಯದಲ್ಲಿ, ಜಂಟಿ ಪೊಲೀಸ್ ಕಮಿಷನರ್ ಆನಂದ್ ಪ್ರಕಾಶ್ ತಿವಾರಿ ಅವರು ಈ ವಿಷಯವನ್ನು ಅರಿತುಕೊಂಡು ಹಿರಿಯ ಮಹಿಳೆಯ ಹೆಸರನ್ನು ಪ್ರಕರಣದಿಂದ ಕೈಬಿಡಿಸಿ ತನಿಖೆಗೆ ಆದೇಶಿಸಿದ್ದಾರೆ.