Gujarat Police: ದ್ವೇಷಪೂರಿತ ಭಾಷಣ ಪ್ರಕರಣ, ಬಲಪಂಥೀಯ ಕಾರ್ಯಕರ್ತೆ ಅರೆಸ್ಟ್​

ಗುಜರಾತ್: ಕೋಮು ಘರ್ಷಣೆಗೆ ಕಾರಣವಾದ ದ್ವೇಷಪೂರಿತ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲಪಂಥೀಯ ಕಾರ್ಯಕರ್ತೆಯೊಬ್ಬಳನ್ನು ಗುಜರಾತ್‌ ಪೊಲೀಸರು ಬಂಧನ ಮಾಡಿದ್ದಾರೆ.

First published:

  • 17

    Gujarat Police: ದ್ವೇಷಪೂರಿತ ಭಾಷಣ ಪ್ರಕರಣ, ಬಲಪಂಥೀಯ ಕಾರ್ಯಕರ್ತೆ ಅರೆಸ್ಟ್​

    ಬಂಧಿತ ಮಹಿಳೆಯನ್ನು ಕಾಜಲ್ ಹಿಂದೂಸ್ಥಾನಿ ಎಂದು ಗುರುತಿಸಲಾಗಿದ್ದು, ಈಕೆಯನ್ನು ಕಳೆದ ಏಪ್ರಿಲ್ 1ರಂದು ನಡೆದಿದ್ದ ಕೋಮು ಘರ್ಷಣೆಗೆ ಕಾರಣವಾದ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

    MORE
    GALLERIES

  • 27

    Gujarat Police: ದ್ವೇಷಪೂರಿತ ಭಾಷಣ ಪ್ರಕರಣ, ಬಲಪಂಥೀಯ ಕಾರ್ಯಕರ್ತೆ ಅರೆಸ್ಟ್​

    ಭಾನುವಾರ ಬೆಳಗ್ಗೆ ಗುಜರಾತ್‌ನ ಉನಾದಲ್ಲಿ ಕಾಜಲ್ ಹಿಂದೂಸ್ತಾನಿ ಪೊಲೀಸರ ಮುಂದೆ ಶರಣಾದ ನಂತರ ಆಕೆಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    MORE
    GALLERIES

  • 37

    Gujarat Police: ದ್ವೇಷಪೂರಿತ ಭಾಷಣ ಪ್ರಕರಣ, ಬಲಪಂಥೀಯ ಕಾರ್ಯಕರ್ತೆ ಅರೆಸ್ಟ್​

    ಕಾಜಲ್ ಹಿಂದೂಸ್ತಾನಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 92,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದು, ವಿಶ್ವ ಹಿಂದೂ ಪರಿಷತ್ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಆಗಾಗ್ಗೆ ಪಾಲ್ಗೊಳುತ್ತಿದ್ದರು.

    MORE
    GALLERIES

  • 47

    Gujarat Police: ದ್ವೇಷಪೂರಿತ ಭಾಷಣ ಪ್ರಕರಣ, ಬಲಪಂಥೀಯ ಕಾರ್ಯಕರ್ತೆ ಅರೆಸ್ಟ್​

    ಮಾರ್ಚ್ 30 ರಂದು ರಾಮ ನವಮಿಯಂದು ವಿಎಚ್‌ಪಿ ಆಯೋಜಿಸಿದ್ದ ಹಿಂದೂ ಸಮುದಾಯದ ಸಮಾವೇಶದಲ್ಲಿ ಕಾಜಲ್ ಪ್ರಚೋದನಕಾರಿ ಭಾಷಣ ಮಾಡಿದ್ದರು.

    MORE
    GALLERIES

  • 57

    Gujarat Police: ದ್ವೇಷಪೂರಿತ ಭಾಷಣ ಪ್ರಕರಣ, ಬಲಪಂಥೀಯ ಕಾರ್ಯಕರ್ತೆ ಅರೆಸ್ಟ್​

    ಘಟನೆ ನಡೆದು ಎರಡು ದಿನದ ನಂತರ ಕಾಜಲ್ ಹಿಂದೂಸ್ತಾನಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295 ಅಡಿಯಲ್ಲಿ ಏಪ್ರಿಲ್ 2 ರಂದು ಎಫ್ ಐಆರ್ ದಾಖಲಿಸಲಾಗಿದೆ.

    MORE
    GALLERIES

  • 67

    Gujarat Police: ದ್ವೇಷಪೂರಿತ ಭಾಷಣ ಪ್ರಕರಣ, ಬಲಪಂಥೀಯ ಕಾರ್ಯಕರ್ತೆ ಅರೆಸ್ಟ್​

    ಕಾಜಲ್ ಹಿಂದೂಸ್ತಾನಿ ಈ ಹಿಂದೆ ಕೂಡ ಅನೇಕ ಕಡೆಗಳಲ್ಲಿ ಬಿಜೆಪಿಯೂ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸಮಾವೇಶಗಳಲ್ಲಿ ಮಾತನಾಡುತ್ತಿದ್ದರು.

    MORE
    GALLERIES

  • 77

    Gujarat Police: ದ್ವೇಷಪೂರಿತ ಭಾಷಣ ಪ್ರಕರಣ, ಬಲಪಂಥೀಯ ಕಾರ್ಯಕರ್ತೆ ಅರೆಸ್ಟ್​

    ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾಜಲ್ ಹಿಂದೂಸ್ತಾನಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದು, ಅನೇಕ ವಿಚಾರಗಳ ಕುರಿತು ಪ್ರಶ್ನಿಸುತ್ತಿದ್ದಾರೆ.

    MORE
    GALLERIES