Twin Explosions outside Kabul Airport: 24 ಗಂಟೆಗಳ ಮೊದಲೇ ಅವಳಿ ಸ್ಫೋಟದ ಬಗ್ಗೆ ಎಚ್ಚರಿಸಿದ್ದ ಅಮೆರಿಕಾ!
Afghanistan crisis: ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಸಂಭವಿಸಿದ ಎರಡು ಸ್ಫೋಟಗಳಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದರೆ, ಹಲವರು ಗಾಯಗೊಂಡಿದ್ದಾರೆ. ವಿಮಾನ ನಿಲ್ದಾಣದ ಗೇಟ್ನ ಹೊರಗೆ ಸ್ಫೋಟ ಸಂಭವಿಸಿದೆ. ಯುಎಸ್ ರಕ್ಷಣಾ ಸಚಿವಾಲಯವು ಸ್ಫೋಟವನ್ನು ದೃಢಪಡಿಸಿದೆ. ಕಾಬೂಲ್ ವಿಮಾನ ನಿಲ್ದಾಣದ ಬಳಿ ಅಫ್ಘಾನಿಸ್ತಾನದಿಂದ ಜನರನ್ನು ಸ್ಥಳಾಂತರಿಸುವ ವೇಳೆ ಕನಿಷ್ಠ ಎರಡು ಸ್ಫೋಟಗಳು ಸಂಭವಿಸಿವೆ.
ಪೆಂಟಗನ್ ವಕ್ತಾರ ಜಾನ್ ಕಿರ್ಬಿ ಅವರು ಘಟನೆ ಬಗ್ಗೆ ಟ್ವೀಟ್ ಮಾಡಿದ್ದು, ಒಂದು ಸ್ಫೋಟವು ವಿಮಾನ ನಿಲ್ದಾಣದ ಅಬ್ಬೆ ಗೇಟ್ ಬಳಿ ಮತ್ತು ಇನ್ನೊಂದು ಹತ್ತಿರದ ಬ್ಯಾರನ್ ಹೋಟೆಲ್ ಬಳಿ ಸಂಭವಿಸಿದೆ ಎಂದು ತಿಳಿಸಿದ್ದಾರೆ.
2/ 12
ಆತ್ಮಾಹುತಿ ಬಾಂಬ್ ಸ್ಫೋಟ ಸಂಭವಿಸಿರುವ ಬಗ್ಗೆ ಇಬ್ಬರು ಯುಎಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.
3/ 12
ಅಬ್ಬೆ ಗೇಟ್ನಲ್ಲಿ ನಡೆದ ಸ್ಫೋಟವು ಸಂಕೀರ್ಣ ದಾಳಿಯಾಗಿದೆ.ಕಾಬೂಲ್ ವಿಮಾನ ನಿಲ್ದಾಣವು ಪ್ರಸ್ತುತ ವಿಶ್ವದ ಅತ್ಯಂತ ಅಪಾಯಕಾರಿ ಸ್ಥಳವಾಗಿದೆ.
4/ 12
ಈ ಸಮಯದಲ್ಲಿ ಸಾವಿರಾರು ಜೀವಗಳು ಅಪಾಯದಲ್ಲಿರುವ ದೊಡ್ಡ ಫ್ಲ್ಯಾಶ್ ಪಾಯಿಂಟ್ ಆಗಿದೆ.
5/ 12
ಕಳೆದ ವಾರದಿಂದ ಸಾವಿರಾರು ಅಫಘಾನ್ ನಾಗರಿಕರನ್ನು ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ತಡೆ ಹಿಡಿಯಲಾಗಿದೆ.
6/ 12
ವೀಸಾ ಮತ್ತು ಪಾಸ್ಪೋರ್ಟ್ ಸಮಸ್ಯೆಯಿಂದ ಅವರು ವಿಮಾನ ನಿಲ್ದಾಣದ ಒಳಗೆ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ.
7/ 12
ಅದೇ ಸಮಯದಲ್ಲಿ ತಾಲಿಬಾನ್ ಕೂಡ ಯಾವುದೇ ಅಫ್ಘಾನಿಸ್ತಾನದ ಪ್ರಜೆ ದೇಶವನ್ನು ತೊರೆಯಲು ಅನುಮತಿಸುವುದಿಲ್ಲ ಮತ್ತು ಅವರು ತಮ್ಮ ಮನೆಗಳಿಗೆ ಮರಳಬೇಕಾಗುತ್ತದೆ ಎಂದು ಘೋಷಿಸಿದ್ದಾರೆ.
8/ 12
ವಿಮಾನ ನಿಲ್ದಾಣದ ಹೊರಗೆ ಈ ಬಾಂಬ್ ಸ್ಫೋಟಕ್ಕೆ ಕೇವಲ 24 ಗಂಟೆಗಳ ಮೊದಲು, ಅಲ್ಲಿ ಭಯೋತ್ಪಾದಕ ದಾಳಿಯ ಸಾಧ್ಯತೆಯನ್ನು ಅಮೆರಿಕ ವ್ಯಕ್ತಪಡಿಸಿತ್ತು.
9/ 12
ಆಗಸ್ಟ್ 25 ರಂದು, ಯುಎಸ್ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ತನ್ನ ಎಲ್ಲಾ ನಾಗರಿಕರನ್ನು ವಿಮಾನ ನಿಲ್ದಾಣದಿಂದ ಆದಷ್ಟು ಬೇಗ ಹೊರಹೋಗುವಂತೆ ಸೂಚಿಸಿತು.
10/ 12
ವಿಮಾನ ನಿಲ್ದಾಣದ ಹೊರಗೆ ಪ್ರಮುಖ ಭದ್ರತಾ ಬೆದರಿಕೆಗಳಿವೆ ಎಂದು ಯುಎಸ್ ಎಚ್ಚರಿಸಿದೆ. ಆದ್ದರಿಂದ ಎಲ್ಲಾ ಅಮೆರಿಕನ್ ನಾಗರಿಕರು ತಕ್ಷಣವೇ ಅಬ್ಬೆ ಗೇಟ್ ನಿಂದ ದೂರ ಸರಿಯಬೇಕು ಎಂದು ಹೇಳಿತ್ತು.
11/ 12
ಅಮೆರಿಕಾ ಹೇಳಿದ ಸಮಯದಲ್ಲಿ ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಬಾಂಬ್ ಸ್ಫೋಟ ಸಂಭವಿಸಿದೆ. ಹೆಚ್ಚು ಸ್ಫೋಟಗಳು ಸಂಭವಿಸಬಹುದು ಎಂದು ಫ್ರಾನ್ಸ್ ಕೂಡ ಎಚ್ಚರಿಸಿತ್ತು.
12/ 12
ಅಫ್ಘಾನಿಸ್ತಾನದ ಪರಿಸ್ಥಿತಿ ಚಿಂತಾಜನಕವಾಗಿದೆ. ಇನ್ನೊಂದು ಸ್ಫೋಟ ಸಂಭವಿಸಬಹುದು ಎಂದು ಅಫ್ಘಾನಿಸ್ತಾನದ ಫ್ರೆಂಚ್ ರಾಯಭಾರಿ ಶಂಕಿಸಿದ್ದಾರೆ.
First published:
112