ಬಿಡುಗಡೆಯಾದ ಗತ ವೈಭವದ ನೂತನ 'ಜಾವಾ': ಹೇಗಿದೆ ಗೊತ್ತಾ ಹೊಸ ಬೈಕ್

ವಾಹನ ಮಾರುಕಟ್ಟೆಯಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಮಹೀಂದ್ರಾ ಕಂಪನಿಯ ನೂತನ ಜಾವಾ ಬೈಕ್ ಬಿಡುಗಡೆಯಾಗಿದೆ. 300 ಸಿಸಿ ಇಂಜಿನ್ ಸಾಮರ್ಥ್ಯದ ಮೂರು ವಿನ್ಯಾಸಗಳ ಬೈಕ್​ಗಳನ್ನು ಪರಿಚಯಿಸಲಾಗಿದ್ದು, ಇವುಗಳ ಬುಕ್ಕಿಂಗ್ ಕೂಡ ಇಂದಿನಿಂದ ಪ್ರಾರಂಭವಾಗಲಿದೆ. 70ರ ದಶಕದಲ್ಲಿ 'ರೋಡಿನ ರಾಜ'ನಾಗಿ ಮರೆದಿದ್ದ ಜಾವಾ ಬೈಕ್ 22 ವರ್ಷಗಳ ಬಳಿಕ ಮತ್ತೆ ರಸ್ತೆಗಿಳಿಯುತ್ತಿದ್ದರಿಂದ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಜಾವಾ ಕಂಪನಿಯನ್ನು ತೆಕ್ಕೆಗೆ ತಗೆದುಕೊಂಡಿರುವ ಮಹೀಂದ್ರಾ ನವೆಂಬರ್​ 15 ರಂದು ಬೈಕಿನ ಹೊಸ ಅವತಾರವನ್ನು ಅನಾವರಣಗೊಳಿಸುವುದಾಗಿ ಕೆಲ ತಿಂಗಳ ಹಿಂದೆ ತಿಳಿಸಿತ್ತು. ಅದರಂತೆ ಇಂದು ಬಿಡುಗಡೆಯಾದ ಹೊಸ ಜಾವಾ ವಿನ್ಯಾಸಕ್ಕೆ ಬೈಕ್ ಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಬೈಕುಗಳ ದೆಹಲಿ ಎಕ್ಸ್​ಶೋರೂಂ ಬೆಲೆ- 1.55 ಲಕ್ಷದಿಂದ ಪ್ರಾರಂಭವಾಗುತ್ತದೆ.

  • News18
  • |
First published: