ಪ್ರಸ್ತುತ ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಮತ್ತು ಪ್ರಪಂಚದ ಇತಿಹಾಸದಲ್ಲಿ ಭಾರತ ಮತ್ತು ಜಪಾನ್ ಅತ್ಯಂತ ವಿಶಿಷ್ಟ ಸ್ಥಾನದಲ್ಲಿವೆ ಎಂದು ನಾನು ನಂಬುತ್ತೇನೆ. ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಭಾರತದಂತಹ ಬೃಹತ್ ಮತ್ತು ವೈವಿಧ್ಯಮಯ ದೇಶವು ಪ್ರಜಾಪ್ರಭುತ್ವವನ್ನು ಅಭಿವೃದ್ಧಿಪಡಿಸಿದ ರೀತಿಯನ್ನು ನಾನು ಯಾವಾಗಲೂ ಬಹಳ ಗೌರವದಿಂದ ನೋಡುತ್ತಿದ್ದೇನೆ ಎಂದು ಕಿಶಿದಾ ತಿಳಿಸಿದ್ದಾರೆ.