'ಆದರೆ ಅದು ಬಯಸಿದರೆ ಅದು ಆಗುವುದಲ್ಲ, ಕಳೆದ ಚುನಾವಣೆಯಲ್ಲಿ ನಾವೇನಾದರೂ ಶೇ.30ರಷ್ಟು ಮತ ಪಡೆದಿದ್ದರೆ ಈಗ ನಾನು ಸಿಎಂ ರೇಸ್ ನಲ್ಲಿರುತ್ತಿದ್ದೆ ಎಂದಿರುವ ಪವನ್ ಕರ್ನಾಟಕ ರಾಜಕೀಯವನ್ನು ಉದಾಹರಣೆಯಾಗಿ ನೀಡಿದ್ದಾರೆ. 2019ರಲ್ಲಿ ಕೇವಲ 30 ಸ್ಥಾನ ಗೆದ್ದಿದ್ದ ಜೆಡಿಎಸ್ ನಾಯಕ ಕುಮಾರಸ್ವಾಮಿ ಕರ್ನಾಟಕ ಮುಖ್ಯಮಂತ್ರಿಯಾಗಿದ್ದರು. ನಮಗೂ 40 ಸ್ಥಾನ ಬಂದಿದ್ದರೆ ಸಿಎಂ ಸ್ಥಾನಕ್ಕೆ ಬೇಡಿಕೆ ಇಡುತ್ತಿದ್ದೆ ಎಂದು ಪವನ್ ಕಲ್ಯಾಣ್ ತಿಳಿಸಿದ್ದಾರೆ.
2014 ರಲ್ಲಿ ಬಿಜೆಪಿ ಮತ್ತು ಟಿಡಿಪಿ ಜೊತೆಗಿನ ಮೈತ್ರಿ ನಂತರ ರಾಜ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿದ ಪವನ್ ಕಲ್ಯಾಣ್, ರಾಜ್ಯದ ಹಿತಾಸಕ್ತಿಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಮೈತ್ರಿ ಬಗ್ಗೆ ಜೆಎಸ್‌ಪಿ ನಿರ್ಧಾರ ತೆಗೆದುಕೊಳ್ಳುತ್ತದೆ. ಕಳೆದ ವರ್ಷದ ಚುನಾವಣೆಗೆ ಹೋಲಿಸಿದರೆ ಜೆಎಸ್‌ಪಿ ಸ್ಥಾನ ಬಲಗೊಂಡಿದೆ. 2019 ರಲ್ಲಿ ಜೆಎಸ್‌ಪಿ ಒಟ್ಟು 175 ರಲ್ಲಿ 137 ವಿಧಾನಸಭಾ ಸ್ಥಾನಗಳಿಗೆ ಸ್ಪರ್ಧಿಸಿ ಶೇಕಡಾ 7 ರಷ್ಟು ಮತಗಳನ್ನು ಗಳಿಸಿದೆ ಎಂದು ತಿಳಿಸಿದರು.