PHOTOS: ಕಾಶ್ಮೀರದಲ್ಲಿ ಮುಂದುವರೆದ ಹಿಮಪಾತ; ಇಂದೂ ಸಹ ಹೆದ್ದಾರಿ ಬಂದ್

ಜಮ್ಮು-ಕಾಶ್ಮೀರದಲ್ಲಿ ನಿನ್ನೆಯಿಂದ ಭಾರೀ ಹಿಮಪಾತವಾಗುತ್ತಿದ್ದು, ಎರಡನೇ ದಿನವೂ ಸಹ ಮುಂದುವರೆದಿದೆ. ಇಂದೂ ಸಹ ಜಮ್ಮು-ಶ್ರೀನಗರ ಹೆದ್ದಾರಿ ಬಂದ್​ ಆಗಿದೆ. ನಿನ್ನೆ ಭಾರೀ ಹಿಮಪಾತ ಮತ್ತು ಭೂಕುಸಿತ ಉಂಟಾಗಿದ್ದರಿಂದ ಜವಾಹರ್​ ಸುರಂಗದ ಬಳಿ ಹೆದ್ದಾರಿಯನ್ನು ಮುಚ್ಚಲಾಗಿತ್ತು. ಹಿಮಪಾತದ ಪ್ರಮಾಣ ಇಂದು ಕಡಿಮೆಯಾಗಿಲ್ಲವಾದ್ದರಿಂದ ಹೆದ್ದಾರಿಯನ್ನು ಬಂದ್​ ಮಾಡಲಾಗಿದೆ. ರಸ್ತೆಗಳ ಮೇಲೆ ಸಾಕಷ್ಟು ಹಿಮ ಬಿದ್ದಿದ್ದು, ತೆರವು ಮಾಡುತ್ತಿದ್ದಾರೆ. ವಾಹನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ.

First published: