PHOTOS: ಜಮ್ಮುವಿನಲ್ಲಿ ಭಾರೀ ಹಿಮಪಾತ, ಭೂಕುಸಿತ; ಹೆದ್ದಾರಿ ಬಂದ್
ಜಮ್ಮು-ಕಾಶ್ಮೀರ ಮತ್ತು ದೆಹಲಿಯಲ್ಲಿ ಇಂದು ಮುಂಜಾನೆಯಿಂದಲೇ ಧಾರಾಕಾರ ಮಳೆ ಮತ್ತು ಹಿಮಪಾತ ಸುರಿಯುತ್ತಿದೆ. ಹಲವೆಡೆ ಭೂಕುಸಿತವೂ ಉಂಟಾಗಿದ್ದು, ಜಮ್ಮು-ಶ್ರೀನಗರ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ರಂಬನ್ ಜಿಲ್ಲೆ, ದಿಗ್ದೋಲ್, ಪತ್ನಲ್, ಮಗರ್ಕೋಟೆ ಮತ್ತು ಕೊಹಿ ನಲ್ಲಾಹ್ಗಳಲ್ಲಿ ಭೂಕುಸಿತ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುರಿಯುತ್ತಿರುವ ಭಾರೀ ಹಿಮಪಾತದಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.