ಪಿಯೂಷ್ ಜೈನ್ ಎಂಬ ಉದ್ಯಮಿ ಸಾವಿರಾರು ಕೋಟಿ ಹಣವನ್ನು ತೆರಿಗೆ ಕಟ್ಟದೇ ವಂಚಿಸಿದ್ದಾರೆ. ಇನ್ನು ಉದ್ಯಮಿಯ ಕಾನ್ಪುರ ಮನೆ ಕಚೇರಿ, ಕಾರ್ಖಾನೆ ಸೇರಿದಂತೆ ಕನೌಜ್, ಮುಂಬೈ, ಗುಜರಾತ್ ಮನೆ ಮೇಲೂ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಮೊದಲು ಕಾನ್ಪುರದಲ್ಲಿಯೂ ಟ್ರಾನ್ಸ್‌ಪೋರ್ಟರ್ - M/s ಗಣಪತಿ ರೋಡ್ ಕ್ಯಾರಿಯರ್ಸ್ ಮಾಲೀಕತ್ವದ ಕಚೇರಿಗಳು ಮತ್ತು ಗೋಡೌನ್‌ಗಳ ಮೇಲೆ ದಾಳಿಗಳನ್ನು ನಡೆಸಲಾಯಿತು. ಬಳಿಕ ಪಿಯೂಷ್ ಜೈನ್ ಅವರ ಮನೆ ಮೇಲೆ ದಾಳಿ ನಡೆಸಲಾಯಿತು
ಸರಕು ಸಾಗಣೆದಾರರಿಂದ ನಕಲಿ ಇನ್‌ವಾಯ್ಸ್‌ಗಳ ಮೂಲಕ ಮತ್ತು ಇ-ವೇ ಬಿಲ್‌ಗಳಿಲ್ಲದೆ ಸರಕುಗಳ ರವಾನೆಗೆ ಹಣವನ್ನು ಲಿಂಕ್ ಮಾಡಲಾಗಿದೆ. ತೆರಿಗೆ ತಪ್ಪಿಸಲು ನಕಲಿ ಇನ್‌ವಾಯ್ಸ್‌ಗಳ ಸಂಸ್ಥೆ ಸ್ಥಾಪನೆ ಮಾಡಿರುವುದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಜಿಎಸ್‌ಟಿ ಪಾವತಿಸದೆ ಸರಕು ಸಾಗಣೆಗೆ ಬಳಸಲಾಗಿದ್ದ 200ಕ್ಕೂ ಹೆಚ್ಚು ನಕಲಿ ಇನ್‌ವಾಯ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. 1.01 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ