ಬಡತನದಲ್ಲಿ ಬೆಳೆದರೂ, ಕಠಿಣ ಪರಿಶ್ರಮದಿಂದ ಮೇಲೆ ಬಂದಿರುವ ಯುವ ಕ್ರಿಕೆಟಿಗ ಕಿಂಗ್ ರಿಂಕು ಸಿಂಗ್ (Rinku Singh IPL) ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿದ್ದಾರೆ. ಇತ್ತೀಚೆಗೆ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧ ಕೊನೆಯ 5 ಎಸೆತಗಳಲ್ಲಿ 5 ಸಿಕ್ಸರ್ ಬಾರಿಸುವ ಮೂಲಕ ವಿಶ್ವವನ್ನೇ ತನ್ನತ್ತ ತಿರುಗುವಂತೆ ಮಾಡಿದ್ದಲ್ಲದೆ, ರಾತ್ರೋರಾತ್ರಿ ಹೀರೊ ಆಗಿದ್ದಾರೆ.