ಆದರೆ ಇದೆಲ್ಲವೂ ನಾಣ್ಯದ ಒಂದು ಮುಖ ಮಾತ್ರ. ವಾಸ್ತವವಾಗಿ ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ಒಳ್ಳೆಯದಲ್ಲ ಎನ್ನುವುದು ಹಲವರ ಅಭಿಪ್ರಾಯವಾಗಿದೆ. ಈಗಾಗಲೇ ಹಲವು ಮಂದಿ ಇಂತಹ ಆನ್‌ಲೈನ್ ಗೇಮ್ಗಳಿಂದ ಸಾವಿರಾರು, ಲಕ್ಷ, ಕೋಟಿ ಕಳೆದುಕೊಂಡವರಿದ್ದಾರೆ. ಇದರಿಂದಲೇ ಸಾಲದ ಸುಳಿಗೆ ಸಿಲುಕಿ ಜೀವವನ್ನು ಬಿಟ್ಟಿದ್ದಾರೆ. ಹೀಗಾಗಿ ಇವುಗಳಿಂದ ದೂರವಿರುವುದು ಒಳಿತು ಎನ್ನುತ್ತಾರೆ ಹಣ ಕಳೆದುಕೊಂಡ ಸಂತ್ರಸ್ತರು.