Modi-Kharge: ಸಂಸತ್ ಒಳಗೆ ಕದನ, ಹೊರಗೆ ಪುಷ್ಕಳ ಭೋಜನ! ಸಿರಿಧಾನ್ಯ ಖಾದ್ಯ ಸವಿದ ಮೋದಿ-ಖರ್ಗೆ!
ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷ-2023ರ ಆಚರಣೆಗಾಗಿ ಕೇಂದ್ರ ಸರ್ಕಾರವು ಇಂದು ಸಂಸತ್ನಲ್ಲಿ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್ ಸೇರಿದಂತೆ ಹಲವರು ಸಿರಿಧಾನ್ಯದ ಪುಷ್ಕಳ ಭೋಜನ ಸವಿದರು.
ಇಂದು ಸಂಸತ್ ಭವನದಲ್ಲಿ ಸಿರಿಧಾನ್ಯದಿಂದ ಮಾಡಿದ ಖಾದ್ಯಗಳನ್ನು ಪ್ರಧಾನಿ ಮೋದಿ ಸವಿದಿದ್ದಾರೆ. ಪ್ರಧಾನಿ ಮೋದಿ ಕುಳಿತಿದ್ದ ಟೇಬಲ್ನಲ್ಲೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸಹ ಕುಳಿತು ಊಟ ಸವಿದರು.
2/ 7
ಕೃಷಿ ಸಚಿವ ನರೇಂದ್ರ ತೋಮರ್ ಅವರು ಔತಣ ಕೂಟ ಆಯೋಜಿಸಿದ್ದರು. ಇದರಲ್ಲಿ ರಾಗಿ ಧೋಸ, ರಾಗಿ ರೊಟ್ಟಿ, ಜೋಳದ ರೊಟ್ಟಿ, ಅರಿಶಿನ ತರಕಾರಿ, ಬಾಜರ, ಚುರ್ಮಾ ಮತ್ತು ಕೆಲವು ಸಿಹಿ ತಿನಿಸುಗಳನ್ನು ರಾಗಿ ಹಾಗೂ ಸಿರಿಧಾನ್ಯಗಳಿಂದ ತಯಾರಿಸಲಾಗಿತ್ತು.
3/ 7
ಔತಣಕೂಟದಲ್ಲಿ ಪ್ರಧಾನಿ ಮೋದಿ ಜೊತೆಗೆ ಉಪರಾಷ್ಟ್ರಪತಿ ಜಗದೀಪ್ ಧಂಕರ್ ಮತ್ತು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು ಸಹ ಮೇಜಿನ ಬಳಿ ಉಪಸ್ಥಿತರಿದ್ದರು. ರಾಗಿಯಿಂದ ರುಚಿಕರವಾದ ಖಾದ್ಯಗಳನ್ನು ತಯಾರಿಸಲು ಕರ್ನಾಟಕದಿಂದ ಬಾಣಸಿಗರನ್ನು ಕರೆಸಲಾಗಿತ್ತು. ನಾಯಕರು ರಾಗಿಯಿಂದ ಮಾಡಿದ ಕೇಕ್ ಮತ್ತು ಖೀರ್ ಅನ್ನು ಸಹ ಆನಂದಿಸಿದರು.
4/ 7
ಪ್ರಧಾನಿ ಮೋದಿಯವರ ಕೋರಿಕೆಯ ಮೇರೆಗೆ ವಿಶ್ವಸಂಸ್ಥೆಯು 2023ನೇ ವರ್ಷವನ್ನು ಸಿರಿಧಾನ್ಯ ವರ್ಷ ಎಂದು ಘೋಷಿಸಿತ್ತು. ಇಂದು ನಡೆದ ಬಿಜೆಪಿಯ ಸಂಸದೀಯ ಸಭೆಯಲ್ಲಿ ಸಿರಿಧಾನ್ಯ ಗುಣಮಟ್ಟ ಮತ್ತು ವಿಶೇಷತೆಯ ಪ್ರಚಾರದ ಬಗ್ಗೆ ಪ್ರಧಾನಿ ಮೋದಿಯವರು ಒತ್ತು ನೀಡಿದ್ದರು.
5/ 7
ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ನಾವು 2023 ನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಗುರುತಿಸಲು ತಯಾರಿ ನಡೆಸುತ್ತಿರುವಾಗ, ಸಂಸತ್ತಿನಲ್ಲಿ ಸಿರಿಧಾನ್ಯ ಭಕ್ಷ್ಯಗಳನ್ನು ಬಡಿಸಿದ ಭೋಜನಕೂಟದಲ್ಲಿ ಭಾಗವಹಿಸಿದ್ದೇವೆ. ಇದು ಸಂತಸದ ವಿಚಾರ ಎಂದಿದ್ದಾರೆ.,
6/ 7
ಮೋದಿ ಸುಮಾರು 40 ನಿಮಿಷಗಳ ಕಾಲ ಭೋಜನ ಕೂಟದಲ್ಲಿ ಪಾಲ್ಗೊಂಡರು. ಖರ್ಗೆ ಅವರಲ್ಲದೆ, ತೋಮರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರೊಂದಿಗೆ ಮೋದಿ ಊಟ ಮಾಡಿದರು.
7/ 7
ಇದಕ್ಕೂ ಮುನ್ನ ಸಂಸತ್ತಿನಲ್ಲಿ ಖರ್ಗೆ ಅವರು ನೀಡಿದ್ದ ನಾಯಿ ಎಂಬ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಬಿಜೆಪಿಗರು ಒತ್ತಾಯಿಸಿದ್ದರು. ಆದರೆ ಮಲ್ಲಿಕಾರ್ಜುನ ಖರ್ಗೆ ಅವರು ತಾವು ನೀಡಿದ್ದ ಹೇಳಿಕೆಗೆ ಕ್ಷಮೆ ಕೇಳಲು ನಿರಾಕರಿಸಿದ್ದರು.