Inspiring: ಮನೆ ಕಟ್ಟಲು ಉಳಿಸಿದ ಹಣದಲ್ಲಿ ಊರಿಗೆ ರಸ್ತೆ ನಿರ್ಮಿಸಿದ ಬಡ ದಂಪತಿ!

ಸರ್ಕಾರಿ ಅಧಿಕಾರಿಗಳು ಊರಿನ ರಸ್ತೆಯತ್ತ ಗಮನ ಹರಿಸದ ಕಾರಣ ತಾವು ಉಳಿಸಿದ ಹಣದಲ್ಲಿ ಗ್ರಾಮಕ್ಕೆ ರಸ್ತೆ ನಿರ್ಮಿಸುತ್ತಿದ್ದಾರೆ ಈ ದಂಪತಿ.

  • Local18
  • |
  •   | Andhra Pradesh, India
First published:

  • 18

    Inspiring: ಮನೆ ಕಟ್ಟಲು ಉಳಿಸಿದ ಹಣದಲ್ಲಿ ಊರಿಗೆ ರಸ್ತೆ ನಿರ್ಮಿಸಿದ ಬಡ ದಂಪತಿ!

    ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸ್ವಂತ ಮನೆ ಮಾಡುವುದೇ ಜೀವನದ ಗುರಿಯಾಗಿರುತ್ತೆ. ಇಂತಹ ಗುರಿ ಹೊಂದಿರುವ ಜಮ್ಮೆ ಎಂಬ ಮಹಿಳೆ ಮತ್ತು ಚಾಲಕನಾಗಿ ಕೆಲಸ ಮಾಡುತ್ತಿರುವ ಪತಿ ರೂಪಾಯ್ ಮಾಡಿರುವ ಕೆಲಸವೊಂದು ಭಾರೀ ಸುದ್ದಿ ಮಾಡ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Inspiring: ಮನೆ ಕಟ್ಟಲು ಉಳಿಸಿದ ಹಣದಲ್ಲಿ ಊರಿಗೆ ರಸ್ತೆ ನಿರ್ಮಿಸಿದ ಬಡ ದಂಪತಿ!

    ಸ್ವಂತ ಮನೆ ಕಟ್ಟಲು ನಾಲ್ಕು ವರ್ಷ ಉಳಿಸಿದ ಹಣದಲ್ಲಿ ಗ್ರಾಮಕ್ಕೆ ರಸ್ತೆ ನಿರ್ಮಿಸುತ್ತಿದ್ದಾರೆ ಈ ದಂಪತಿ. ಮನೆ ಕಟ್ಟಲು ಹಣ ಉಳಿಸಿರುವ ಗಿರಿಜನ ಮಹಿಳೆಯೊಬ್ಬರು ಆ ಗ್ರಾಮಕ್ಕೆ ರಸ್ತೆ ಇಲ್ಲದ ಕಾರಣ ತಮ್ಮ ಸ್ವಂತ ಹಣದಲ್ಲಿ ರಸ್ತೆ ನಿರ್ಮಿಸಲು ಹೊರಟಿದ್ದಾರೆ.

    MORE
    GALLERIES

  • 38

    Inspiring: ಮನೆ ಕಟ್ಟಲು ಉಳಿಸಿದ ಹಣದಲ್ಲಿ ಊರಿಗೆ ರಸ್ತೆ ನಿರ್ಮಿಸಿದ ಬಡ ದಂಪತಿ!

    ಸರ್ಕಾರಿ ಅಧಿಕಾರಿಗಳು ಊರಿನ ರಸ್ತೆಯತ್ತ ಗಮನ ಹರಿಸದ ಕಾರಣ ತಾವು ಉಳಿಸಿದ ಹಣದಲ್ಲಿ ಗ್ರಾಮಕ್ಕೆ ರಸ್ತೆ ನಿರ್ಮಿಸುತ್ತಿದ್ದಾರೆ ಈ ದಂಪತಿ.

    MORE
    GALLERIES

  • 48

    Inspiring: ಮನೆ ಕಟ್ಟಲು ಉಳಿಸಿದ ಹಣದಲ್ಲಿ ಊರಿಗೆ ರಸ್ತೆ ನಿರ್ಮಿಸಿದ ಬಡ ದಂಪತಿ!

    ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಮುಂಚಂಗಿಪುಟ್ಟು ಮಂಡಲ ಜೋಳಪುಟ್ಟು ಪಂಚಾಯತ್ ತೋಟಗೋಡಿಪಟ್ ಗ್ರಾಮದ ಆದಿವಾಸಿ ಮಹಿಳೆ ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    MORE
    GALLERIES

  • 58

    Inspiring: ಮನೆ ಕಟ್ಟಲು ಉಳಿಸಿದ ಹಣದಲ್ಲಿ ಊರಿಗೆ ರಸ್ತೆ ನಿರ್ಮಿಸಿದ ಬಡ ದಂಪತಿ!

    ಆ ಗ್ರಾಮದಲ್ಲಿ ರಸ್ತೆ ಸೌಕರ್ಯ ಇಲ್ಲದ ಕಾರಣ ಆರೋಗ್ಯ ಸಮಸ್ಯೆಗಳು ಎದುರಾದಾಗ ಆಸ್ಪತ್ರೆಗೆ ಹೋಗಲು 3 ಕಿಲೋಮೀಟರ್ ವರೆಗೆ ಡೋಲಿಯಲ್ಲಿ ತೆರಳಬೇಕಾಗಿತ್ತು. ಕೆಲವೊಮ್ಮೆ ಗರ್ಭಿಣಿಯರು ದಾರಿಯಲ್ಲೇ ಸಾವನ್ನಪ್ಪುತ್ತಿದ್ದರು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಆದಿವಾಸಿ ಮಹಿಳೆಯೊಬ್ಬರು ಮನೆ ಕಟ್ಟಲು ಉಳಿಸಿದ ಹಣದಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

    MORE
    GALLERIES

  • 68

    Inspiring: ಮನೆ ಕಟ್ಟಲು ಉಳಿಸಿದ ಹಣದಲ್ಲಿ ಊರಿಗೆ ರಸ್ತೆ ನಿರ್ಮಿಸಿದ ಬಡ ದಂಪತಿ!

    ಮಣ್ಣಿನ ರಸ್ತೆಯೂ ಇಲ್ಲದ ತೋಟಗೋಡಿಪುಟ್ಟು ಗ್ರಾಮಕ್ಕೆ ಹೋಗಲು ಗೋಡಿಪುಟ್ ಗ್ರಾಮದಿಂದ ಮೂರು ಕಿಲೋಮೀಟರ್ ಬೆಟ್ಟದ ಮೇಲೆ ನಡೆದುಕೊಂಡು ಹೋಗಬೇಕು. ಈ ಗ್ರಾಮದ ಬುಡಕಟ್ಟು ಜನರು ಜೋಳಪುಟ್ ಜಲಾಶಯದ ಒಡ್ಡಿನ ಭಾಗದಲ್ಲಿ ತಲೆಮಾರುಗಳಿಂದ ಸಾಮೆ, ರಾಗಿ ಮುಂತಾದ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದಾರೆ.

    MORE
    GALLERIES

  • 78

    Inspiring: ಮನೆ ಕಟ್ಟಲು ಉಳಿಸಿದ ಹಣದಲ್ಲಿ ಊರಿಗೆ ರಸ್ತೆ ನಿರ್ಮಿಸಿದ ಬಡ ದಂಪತಿ!

    ಆದರೆ ಈ ಗ್ರಾಮದಲ್ಲಿ ರಸ್ತೆ ಇಲ್ಲದೇ ಆಸ್ಪತ್ರೆ, ಶಾಲೆ, ಸಂತೆ ಮುಂತಾದೆಡೆಗೆ ತೆರಳುವುದೇ ಕಷ್ಟದ ಕೆಲಸವಾಗಿತ್ತು. ಇದರಿಂದಾಗಿ ಕೆಲ ಕುಟುಂಬಗಳು ಒಂದಿಷ್ಟು ಸೌಲಭ್ಯವಿರುವ ಗ್ರಾಮಗಳಿಗೆ ವಲಸೆ ಹೋಗಿದ್ದಾರೆ. ಹೀಗಾಗಿ ಈಗ ಕೇವಲ 9 ಕುಟುಂಬಗಳು ಗ್ರಾಮದಲ್ಲಿ ವಾಸಿಸುತ್ತಿವೆ.

    MORE
    GALLERIES

  • 88

    Inspiring: ಮನೆ ಕಟ್ಟಲು ಉಳಿಸಿದ ಹಣದಲ್ಲಿ ಊರಿಗೆ ರಸ್ತೆ ನಿರ್ಮಿಸಿದ ಬಡ ದಂಪತಿ!

    ಜಮ್ಮೆ ಮತ್ತು ಅವರ ಪತಿ ನಾಲ್ಕು ವರ್ಷಗಳ ಕಾಲ ಮನೆ ನಿರ್ಮಾಣಕ್ಕಾಗಿ ಪೈಸೆ ಪೈಸೆ ಹಣವನ್ನೂ ಉಳಿಸುತ್ತಾ ಬಂದಿದ್ದರು. ಈ ವರ್ಷ ಹೇಗಾದರೂ ಮಾಡಿ ಮನೆ ಕಟ್ಟಬೇಕೆಂದು ನಿರ್ಧರಿಸಿದ್ದರು. ಆದರೆ ಈ ದಂಪತಿ ಸ್ವಂತ ಮನೆಗಿಂತ ಗ್ರಾಮಕ್ಕೆ ರಸ್ತೆ ಮುಖ್ಯ ಎಂದು ಭಾವಿಸಿ ಮನೆ ನಿರ್ಮಾಣಕ್ಕೆ ಉಳಿಸಿದ ಹಣದಲ್ಲಿ ರಸ್ತೆ ಕಾಮಗಾರಿ ನಡೆಸುತ್ತಿದ್ದಾರೆ.

    MORE
    GALLERIES