INS Ranvir ನೌಕೆಯಲ್ಲಿ ಸ್ಪೋಟ ಮೂವರು ಸಾವು; 11ಮಂದಿಗೆ ಗಾಯ
ಭಾರತೀಯ ನೌಕಾಪಡೆಯ ನೌಕಪಡೆಯ ಡಾಕ್ಯಾರ್ಡ್ (Dockyard) ಐಎನ್ಎಸ್ ರಣವೀರ್ (INS Ranvir) ನೌಕೆಯ ಆಂತರಿಕ ವಿಭಾಗದಲ್ಲಿ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ 3 ಭಾರತೀಯ ನೌಕಾಪಡೆ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗಾಯಗೊಂಡಿರುವ 11 ನಾವಿಕರು ಸ್ಥಳೀಯ ನೌಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಎನ್ಐ ವರದಿ ಮಾಡಿದೆ.
ಈ ಸ್ಫೋಟವು ಸಂಜೆ 4:30 ರ ಸುಮಾರಿಗೆ ಸಂಭವಿಸಿದೆ. ಶಸ್ತ್ರಾಸ್ತ್ರಗಳು ಅಥವಾ ಮದ್ದುಗುಂಡುಗಳ ಸ್ಫೋಟಕ್ಕೆ ಯಾವುದೇ ಹಾನಿ ಆಗಿಲ್ಲ ಎಂದು ಮೂಲಗಳು ಹೇಳುತ್ತವೆ. ಕಾರಣವನ್ನು ತನಿಖೆ ಮಾಡಲು ತನಿಖಾ ಮಂಡಳಿಗೆ ಆದೇಶಿಸಲಾಗಿದೆ
2/ 5
ಸ್ಪೋಟ ಘಟನೆ ಆಗುತ್ತಿದ್ದಂತೆ ಹಡಗಿನ ಸಿಬ್ಬಂದಿ ತಕ್ಷಣ ಸ್ಪಂದಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಸ್ಪೋಟದಲ್ಲಿ ಯಾವುದೇ ಗಂಭೀರ ಹಾನಿ ಆಗಿಲ್ಲ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
3/ 5
ಐಎನ್ಎಸ್ ರಣವೀರ್ ನವೆಂಬರ್ 2021 ರಿಂದ ಪೂರ್ವ ನೌಕಾ ಕಮಾಂಡ್ನಿಂದ ಕರಾವಳಿಯ ಕಾರ್ಯಾಚರಣೆಯ ನಿಯೋಜನೆ ಗೊಂಡಿತ್ತು. ಶೀಘ್ರದಲ್ಲೇ ಬೇಸ್ ಪೋರ್ಟ್ಗೆ ಮರಳಬೇಕಿತ್ತು
4/ 5
ಏಪ್ರಿಲ್ 21, 1986 ರಂದು ಐಎನ್ಎಸ್ ರಣವೀರ್ ಭಾರತೀಯ ನೌಕಾಪಡೆಗೆ ನಿಯೋಜಿಸಲಾಯಿತು. ಐಎನ್ಎಸ್ ರಣವೀರ್ ಅನ್ನು ಹಿಂದಿನ ಸೋವಿಯತ್ ಒಕ್ಕೂಟದಲ್ಲಿ ನಿರ್ಮಿಸಲಾಯಿತು.
5/ 5
ರಣವೀರ್ ವಿವಿಧ ವರ್ಗದ ಹಡಗುಗಳುಮ ಜಲಾಂತರ್ಗಾಮಿ ನೌಕೆಗಳು, ಕಡಿಮೆ-ಹಾರುವ ವಿಮಾನಗಳು ಮತ್ತು ಕ್ರೂಸ್ ಕ್ಷಿಪಣಿಗಳ ವಿರುದ್ಧ ವಾಹಕ ಕಾರ್ಯಪಡೆಯ ರಕ್ಷಣೆಗಾಗಿ ವಿಮಾನ ವಿರೋಧಿ ಮತ್ತು ಜಲಾಂತರ್ಗಾಮಿ ವಿರೋಧಿ ಯುದ್ಧದಂತಹ ರಕ್ಷಣೆಯನ್ನು ಒಳಗೊಂಡಿರುತ್ತದೆ.