ಮಹಾರಾಷ್ಟ್ರದಲ್ಲಿ ಮೊದಲ ಓಮಿಕ್ರಾನ್​ ಸೋಂಕು ಪತ್ತೆ; ದೇಶದಲ್ಲಿ ಒಟ್ಟು ನಾಲ್ಕು ಪ್ರಕರಣ ದಾಖಲು

ಮಹಾರಾಷ್ಟ್ರದ 33 ವರ್ಷದ ವ್ಯಕ್ತಿಗೆ ಓಮಿಕ್ರಾನ್ (Omicron)​ ಸೋಂಕು ದೃಢವಾಗಿದ್ದು, ರಾಜ್ಯದಲ್ಲಿ ಕಂಡು ಬಂದಿರುವ ಮೊದಲ ಪ್ರಕರಣ ಇದಾಗಿದೆ. ಈ ಮೂಲಕ ದೇಶದಲ್ಲಿ ಓಮಿಕ್ರಾನ್​ ಸೋಂಕು ಪತ್ತೆಯಾಗಿರುವ ನಾಲ್ಕನೇ (Fourth omicron case in India) ಪ್ರಕರಣ ಇದಾಗಿದೆ. ಮಹಾರಾಷ್ಟ್ರದ 33 ವರ್ಷದ ವ್ಯಕ್ತಿ ದಕ್ಷಿಣ ಆಫ್ರಿಕಾದಿಂದ ದುಬೈ ಮತ್ತು ದೆಹಲಿ ಮೂಲಕ ಮುಂಬೈಗೆ ಪ್ರಯಾಣಿಸಿದರು. ಅವರನ್ನು ಕರೋನವೈರಸ್‌ನ ಓಮಿಕ್ರಾನ್ ರೂಪಾಂತರಕ್ಕೆ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.

First published: