ಭಾರತೀಯ ರೈಲ್ವೆ ಈಗಾಗಲೆ ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಆರಂಭಿಸಿರುವುದು ಎಲ್ಲರಿಗೂ ತಿಳಿದಿದೆ. ಈಗಾಗಲೇ 8 ವಂದೇ ಭಾರತ್ ರೈಲುಗಳು ಪ್ರಯಾಣಿಕರಿಗೆ ಸೇವೆ ನೀಡುತ್ತಿವೆ. ಆಗಸ್ಟ್ 15 ರೊಳಗೆ 75 ವಂದೇ ಭಾರತ್ ರೈಲುಗಳನ್ನು ಮತ್ತು ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ 400 ವಂದೇ ಭಾರತ್ ರೈಲುಗಳನ ಸೇವೆ ಒದಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.
ಈ ರೈಲುಗಳು ಎಂಟು ಕೋಚ್‌ಗಳನ್ನು ಹೊಂದಿದ್ದು, ಮೆಟ್ರೋ ರೈಲಿನಂತೆ ಇರಲಿವೆ. ವಂದೇ ಭಾರತ್ ಮೆಟ್ರೋ ಪ್ರಯಾಣಿಕರು ಇದರಲ್ಲಿ ಸುಖಕರ ಪ್ರಯಾಣದ ಅನುಭವವನ್ನು ಪಡೆಯಬಹುದಾಗಿದೆ. ದೊಡ್ಡ ನಗರಗಳ ಸುತ್ತಲೂ ಇರುವ ಜನರು ಕೆಲಸಕ್ಕೆ, ಶಾಪಿಂಗ್ ಅಥವಾ ರಜಾ ದಿನಗಳಲ್ಲಿ ಸಮಯ ಕಳೆಯಲಯ ನಗರಕ್ಕೆ ಬರುತ್ತಾರೆ. ಹೀಗೆ ಬಂದವರು ತಮ್ಮ ಸ್ವಂತ ಊರಿಗೆ ಮರಳಲು ಬಯಸುತ್ತಾರೆ. ಅವರಿಗಾಗಿ ನಾವು ವಂದೇ ಮೆಟ್ರೋವನ್ನು ತರುತ್ತಿದ್ದೇವೆ ಎಂದು ರೈಲ್ವೆ ಸಚಿವರು ಹೇಳಿದ್ದಾರೆ.