Vande Bharat: ಬೆಂಗಳೂರು-ಹೈದರಾಬಾದ್ ಪ್ರಯಾಣ ಇನ್ನಷ್ಟು ಸುಲಭ, ಶೀಘ್ರವೇ 5 ಹೊಸ ವಂದೇ ಭಾರತ್​ ಎಕ್ಸ್​ಪ್ರೆಸ್ ಆರಂಭ!

Vande Bharat Express: ಭಾರತೀಯ ರೈಲ್ವೆ ಇಲಾಖೆ ವಂದೇ ಭಾರತ್ ರೈಲುಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಇಲ್ಲಿಯವರೆಗೆ 14 ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಲಾಗಿದ್ದು, ಈ ಪೈಕಿ 7 ವಂದೇ ಭಾರತ್ ರೈಲುಗಳನ್ನು ಈ ವರ್ಷ ಪ್ರಾರಂಭಿಸಲಾಗಿದೆ. ಇನ್ನೂ 5 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಶೀಘ್ರದಲ್ಲೇ ಸಂಚಾರ ಆರಂಭಿಸಲಿವೆ.

First published:

 • 17

  Vande Bharat: ಬೆಂಗಳೂರು-ಹೈದರಾಬಾದ್ ಪ್ರಯಾಣ ಇನ್ನಷ್ಟು ಸುಲಭ, ಶೀಘ್ರವೇ 5 ಹೊಸ ವಂದೇ ಭಾರತ್​ ಎಕ್ಸ್​ಪ್ರೆಸ್ ಆರಂಭ!

  ಭಾರತೀಯ ರೈಲ್ವೇ 2019 ರಲ್ಲಿ ಟ್ರೈನ್ 18 ಎಂಬ ಹೆಸರಿನ ಸೆಮಿ-ಹೈ ಸ್ಪೀಡ್ ರೈಲನ್ನು ಪ್ರಾರಂಭಿಸಿತು. ನಂತರ ಈ ರೈಲಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡಲಾಯಿತು. ವಂದೇ ಭಾರತ್ ರೈಲುಗಳು ದೇಶಾದ್ಯಂತ ಜನಪ್ರಿಯವಾಗುತ್ತಿವೆ. ಪ್ರಸ್ತುತ, 14 ವಂದೇ ಭಾರತದದ ರೈಲುಗಳು ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿವೆ. (ಸಾಂಕೇತಿಕ ಚಿತ್ರ)

  MORE
  GALLERIES

 • 27

  Vande Bharat: ಬೆಂಗಳೂರು-ಹೈದರಾಬಾದ್ ಪ್ರಯಾಣ ಇನ್ನಷ್ಟು ಸುಲಭ, ಶೀಘ್ರವೇ 5 ಹೊಸ ವಂದೇ ಭಾರತ್​ ಎಕ್ಸ್​ಪ್ರೆಸ್ ಆರಂಭ!

  ಮೊದಲ ವಂದೇ ಭಾರತ್ ರೈಲು ನವದೆಹಲಿ- ವಾರಣಾಸಿ ಮಾರ್ಗದಲ್ಲಿ ಪ್ರಾರಂಭವಾಗಿತ್ತು. ನಂತರ ನವದೆಹಲಿ-ಕತ್ರಾ, ಗಾಂಧಿನಗರ-ಮುಂಬೈ ಸೆಂಟ್ರಲ್, ನವದೆಹಲಿ-ಅಂಬ ಅಂಡೌರಾ, ಚೆನ್ನೈ-ಮೈಸೂರು, ಬಿಲಾಸ್‌ಪುರ-ನಾಗ್ಪುರ, ಹೌರಾ-ಹೊಸ ಜಲಪೈಗುರಿ ಜಂಕ್ಷನ್, ಸಿಕಂದರಾಬಾದ್-ವಿಶಾಖಪಟ್ಟಣಂ, ಮುಂಬೈ ಸೆಂಟ್ರಲ್-ಸೋಲಾಪುರ, ಮುಂಬೈ ಸೆಂಟ್ರಲ್-ಸಾಯಿನಗರ ಶಿರಡಿ, ರಾಣಿ ಕಮಲಾಪತಿ ಹಬೀಬ್‌ಗಂಜ್- ನಿಜಾಮುದ್ದೀನ್, ಸಿಕಂದರಾಬಾದ್-ತಿರುಪತಿ ಮತ್ತು ಚೆನ್ನೈ ಸೆಂಟ್ರಲ್-ಕೊಯಂಬತ್ತೂರು ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. (ಸಾಂಕೇತಿಕ ಚಿತ್ರ)

  MORE
  GALLERIES

 • 37

  Vande Bharat: ಬೆಂಗಳೂರು-ಹೈದರಾಬಾದ್ ಪ್ರಯಾಣ ಇನ್ನಷ್ಟು ಸುಲಭ, ಶೀಘ್ರವೇ 5 ಹೊಸ ವಂದೇ ಭಾರತ್​ ಎಕ್ಸ್​ಪ್ರೆಸ್ ಆರಂಭ!

  ಇತ್ತೀಚಿನ ಪ್ರಧಾನಿ ನರೇಂದ್ರ ಮೋದಿ ಅವರು ಅಜ್ಮೀರ್ ಮತ್ತು ನವದೆಹಲಿ ನಡುವೆ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದಾರೆ. ಇದು 14ನೇ ವಂದೇ ಭಾರತ್ ರೈಲು. ಭಾರತೀಯ ರೈಲ್ವೇ ಶೀಘ್ರದಲ್ಲೇ ಹೆಚ್ಚು ವಂದೇ ಭಾರತ್ ರೈಲುಗಳನ್ನು ತರಲು ಸಜ್ಜಾಗಿದೆ. ಇದಕ್ಕಾಗಿ ಮೊದಲು 5 ಮಾರ್ಗಗಳನ್ನು ಪರಿಗಣಿಸಲಾಗುತ್ತಿದೆ. (ಸಾಂಕೇತಿಕ ಚಿತ್ರ)

  MORE
  GALLERIES

 • 47

  Vande Bharat: ಬೆಂಗಳೂರು-ಹೈದರಾಬಾದ್ ಪ್ರಯಾಣ ಇನ್ನಷ್ಟು ಸುಲಭ, ಶೀಘ್ರವೇ 5 ಹೊಸ ವಂದೇ ಭಾರತ್​ ಎಕ್ಸ್​ಪ್ರೆಸ್ ಆರಂಭ!

  ವಂದೇ ಭಾರತ್ ರೈಲುಗಳು ಪಾಟ್ನಾ-ರಾಂಚಿ, ಕಣ್ಣೂರು-ತಿರುವನಂತಪುರಂ, ಬೆಂಗಳೂರು-ಹೈದರಾಬಾದ್, ಬೆಂಗಳೂರು-ಹುಬ್ಬಳ್ಳಿ-ಧಾರವಾಡ, ಸಿಕಂದರಾಬಾದ್-ಪುಣೆ ಮಾರ್ಗಗಳಲ್ಲಿ ವಂದೇ ಭಾರತ್ ಸೇವೆ ಲಭ್ಯವಾಗಲಿದೆ. ಈ ಪೈಕಿ ಕರ್ನಾಟಕ ಚುನಾವಣೆಗೂ ಮುನ್ನವೇ ಬೆಂಗಳೂರು-ಹೈದರಾಬಾದ್ ವಂದೇ ಭಾರತ್ ರೈಲು ಆರಂಭವಾಗುವ ಸಾಧ್ಯತೆ ಇದೆ. (ಸಾಂಕೇತಿಕ ಚಿತ್ರ)

  MORE
  GALLERIES

 • 57

  Vande Bharat: ಬೆಂಗಳೂರು-ಹೈದರಾಬಾದ್ ಪ್ರಯಾಣ ಇನ್ನಷ್ಟು ಸುಲಭ, ಶೀಘ್ರವೇ 5 ಹೊಸ ವಂದೇ ಭಾರತ್​ ಎಕ್ಸ್​ಪ್ರೆಸ್ ಆರಂಭ!

  ವಂದೇ ಭಾರತ್ ರೈಲುಗಳು ಹೆಚ್ಚು ಜನಪ್ರಿಯವಾಗಲು ಕಾರಣ ರೈಲಿನ ವೇಗ. ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುವುದರಿಂದ ಪ್ರಯಾಣದ ಸಮಯವು ಶೇಕಡಾ 25 ರಿಂದ 45 ರಷ್ಟು ಕಡಿಮೆಯಾಗುತ್ತದೆ. ಪ್ರಯಾಣಿಕರು ಸಾಧ್ಯವಾದಷ್ಟು ಬೇಗ ತಮ್ಮ ಗಮ್ಯಸ್ಥಾನವನ್ನು ತಲುಪಲು ನಿರೀಕ್ಷಿಸುತ್ತಾರೆ. (ಸಾಂಕೇತಿಕ ಚಿತ್ರ)

  MORE
  GALLERIES

 • 67

  Vande Bharat: ಬೆಂಗಳೂರು-ಹೈದರಾಬಾದ್ ಪ್ರಯಾಣ ಇನ್ನಷ್ಟು ಸುಲಭ, ಶೀಘ್ರವೇ 5 ಹೊಸ ವಂದೇ ಭಾರತ್​ ಎಕ್ಸ್​ಪ್ರೆಸ್ ಆರಂಭ!

  ಇದಲ್ಲದೆ, ಈ ರೈಲು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಅದಕ್ಕಾಗಿಯೇ ರೈಲ್ವೆ ಪ್ರಯಾಣಿಕರು ತಮ್ಮ ಪ್ರದೇಶಕ್ಕೆ ಈ ಸೆಮಿ ಸ್ಪೀಡ್​ ರೈಲ್ಲಿನಲ್ಲಿ ಪ್ರಯಾಣಿಸಲು ಬಯಸುತ್ತಾರೆ. ಹಲವು ಸಂಸದರು ಕೂಡ ರೈ ಈ ರೈಲಿಗೆ ಬೇಡಿಕೆ ಇಡುತ್ತಿದ್ದಾರೆ. (ಸಾಂಕೇತಿಕ ಚಿತ್ರ)

  MORE
  GALLERIES

 • 77

  Vande Bharat: ಬೆಂಗಳೂರು-ಹೈದರಾಬಾದ್ ಪ್ರಯಾಣ ಇನ್ನಷ್ಟು ಸುಲಭ, ಶೀಘ್ರವೇ 5 ಹೊಸ ವಂದೇ ಭಾರತ್​ ಎಕ್ಸ್​ಪ್ರೆಸ್ ಆರಂಭ!

  ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ಈ ವರ್ಷದ ಆಗಸ್ಟ್ 15 ರೊಳಗೆ 75 ವಂದೇ ಭಾರತ್ ರೈಲುಗಳನ್ನು ಓಡಿಸುವ ಗುರಿಯನ್ನು ಭಾರತೀಯ ರೈಲ್ವೆ ಹೊಂದಿದೆ. ಆದರೆ ಇದುವರೆಗೆ 14 ರೈಲುಗಳು ಮಾತ್ರ ಆರಂಭವಾಗಿವೆ. ಇನ್ನುಳಿದ ರೈಲುಗಳು ಆಗಸ್ಟ್ 15ರೊಳಗೆ ಆರಂಭವಾಗಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ. (ಸಾಂಕೇತಿಕ ಚಿತ್ರ)

  MORE
  GALLERIES