ಪಿಟಿ ಉಷಾ ಅವರ ಹೇಳಿಕೆಗೆ ಕುಸ್ತಿಪಟುಗಳು ಸಹ ಅಸಮಾಧಾನ ವ್ಯಕ್ತಪಡಿಸಿ, ‘ಮಹಿಳಾ ಅಥ್ಲೀಟ್ ಆಗಿರುವ ಪಿ ಟಿ ಉಷಾ ಅವರು ಇತರ ಮಹಿಳಾ ಅಥ್ಲೀಟ್‌ಗಳ ಮಾತನ್ನು ಕೇಳುತ್ತಿಲ್ಲ, ನಾವು ಬಾಲ್ಯದಿಂದಲೂ ಅವರನ್ನು ಅನುಸರಿಸಿದ್ದೇವೆ ಮತ್ತು ಅವರಿಂದ ಸ್ಫೂರ್ತಿ ಪಡೆದಿದ್ದೇವೆ, ಇಲ್ಲಿ ಅಶಿಸ್ತು ಎಲ್ಲಿದೆ’ ಎಂದು ಸಾಕ್ಷಿ ಮಲಿಕ್ ಹೇಳಿದ್ದರು.