Crude Oil: ಪರಿಸ್ಥಿತಿಯ ಲಾಭ ಪಡೆದ ಭಾರತ.. ಕಡಿಮೆ ಬೆಲೆಗೆ ರಷ್ಯಾದಿಂದ ಕಚ್ಚಾ ತೈಲ ಖರೀದಿ!
Crude Oil: ರಷ್ಯಾದಿಂದ ಅಗ್ಗದ ಬೆಲೆಗೆ ಭಾರತ ಕಚ್ಚಾ ತೈಲವನ್ನು ಖರೀದಿಸುತ್ತಿರುವುದು ಗೊತ್ತಿರುವ ಸಂಗತಿ. ಈ ಮಧ್ಯೆ ಒಂದೊಳ್ಳೆ ಡೀಲ್ ಕುದುರಿದೆ. ಹಾಗಾದರೆ ಭಾರತ ಕಚ್ಚಾ ತೈಲವನ್ನು ಯಾವ ದರದಲ್ಲಿ ಖರೀದಿಸಿದೆ..? ರಷ್ಯಾದಿಂದ ನಮ್ಮ ದೇಶವನ್ನು ತಲುಪಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಗೊತ್ತಾ..? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
ಭಾರತದ ಸಾರ್ವಜನಿಕ ವಲಯದ ಸಂಸ್ಥೆಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ರಷ್ಯಾದಿಂದ ಸುಮಾರು 3 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಖರೀದಿಸಿದೆ. ರಷ್ಯಾದಿಂದ ಈ ಕಚ್ಚಾ ತೈಲವನ್ನು ಭಾರಿ ರಿಯಾಯಿತಿಯಲ್ಲಿ ಖರೀದಿಸಲಾಗಿದೆ.
2/ 7
ಉಕ್ರೇನ್-ರಷ್ಯಾ ಯುದ್ಧದ ನಂತರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ತೀವ್ರವಾಗಿ ಏರಿದೆ. ಪ್ರಸ್ತುತ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ $ 100 ಆಗಿದೆ. ಆ ಬೆಲೆಗೆ ಖರೀದಿಸಿದರೆ .. ದೇಶೀಯವಾಗಿ ದರಗಳನ್ನು ಭಾರಿ ಪ್ರಮಾಣದಲ್ಲಿ ಏರಿಸಬೇಕಾಗುತ್ತದೆ.
3/ 7
ಹಾಗಾಗಿ ನಮ್ಮವರು ಜಾಣತನದಿಂದ ಕಡಿಮೆ ಬೆಲೆಗೆ ರಷ್ಯಾದಿಂದ ತೈಲ ಖರೀದಿಸುತ್ತಿದ್ದಾರೆ. ಹಲವು ದೇಶಗಳು ರಷ್ಯಾದ ಮೇಲೆ ನಿರ್ಬಂಧಗಳನ್ನು ಹೇರಿದ್ದರಿಂದ ರಷ್ಯಾ ತನ್ನ ಕಚ್ಚಾ ತೈಲ ನಿಕ್ಷೇಪವನ್ನು ಕಡಿಮೆ ದರದಲ್ಲಿ ಪೂರೈಸಲು ಮುಂದಾಯಿತು. ಈ ನ್ನೆಲೆಯಲ್ಲಿ ರಷ್ಯಾ-ಭಾರತದ ನಡುವೆ ಒಪ್ಪಂದ ಏರ್ಪಟ್ಟಿತ್ತು. (ಸಾಂದರ್ಭಿಕ ಚಿತ್ರ)
4/ 7
PTI ಸುದ್ದಿ ಸಂಸ್ಥೆಯ ಪ್ರಕಾರ, ರಷ್ಯಾದಿಂದ ಸುಮಾರು $ 20 ರಿಂದ $ 25 ರ ರಿಯಾಯಿತಿಯಲ್ಲಿ 3 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಭಾರತ ಖರೀದಿಸಿತು. ಆ ಕಚ್ಚಾ ತೈಲವು ಮೇ ತಿಂಗಳಲ್ಲಿ ನಮ್ಮ ದೇಶವನ್ನು ತಲುಪುತ್ತದೆ.
5/ 7
ಇಂಡಿಯನ್ ಆಯಿಲ್ ಕಂಪನಿಯು ತಮ್ಮ ನಿಯಮಗಳಿಗೆ ಅನುಸಾರವಾಗಿ ರಷ್ಯಾದಿಂದ ಕಚ್ಚಾ ತೈಲವನ್ನು ಸಂಗ್ರಹಿಸುತ್ತಿದೆ. ರಷ್ಯಾ ಕಚ್ಚಾ ತೈಲವನ್ನು ಭಾರತದ ಕರಾವಳಿಗೆ ಸಾಗಿಸಬೇಕು ಎಂದು ಸಹ ಷರತ್ತು ವಿಧಿಸುತ್ತದೆ. ಕಚ್ಚಾ ತೈಲ ಪೂರೈಕೆ ಮತ್ತು ವಿಮೆಯ ಮೇಲಿನ ನಿಷೇಧದಿಂದಾಗಿ ಯಾವುದೇ ಸಮಸ್ಯೆಯಾಗದಂತೆ ಈ ಷರತ್ತು ವಿಧಿಸಲಾಗಿದೆ.
6/ 7
ಯುಎಸ್ ಸೇರಿದಂತೆ ಅನೇಕ ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ವಿಧಿಸಿವೆ. ಈ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಹಲವು ತೈಲ ಆಮದು ಮಾಡಿಕೊಳ್ಳುವ ದೇಶಗಳಿಗೆ ರಷ್ಯಾ ಕಚ್ಚಾ ತೈಲ ಮತ್ತು ಇತರ ಪೆಟ್ರೋಲಿಯಂ ಉತ್ಪನ್ನಗಳನ್ನು ಭಾರಿ ರಿಯಾಯಿತಿಯಲ್ಲಿ ಮಾರಾಟ ಮಾಡುತ್ತಿದೆ.
7/ 7
ನಾವು ಶೇ 85ರಷ್ಟು ಕಚ್ಚಾ ತೈಲವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತೇವೆ. ಆದರೆ ಶೇಕಡಾ 1.3 ರಷ್ಟನ್ನು ಮಾತ್ರ ರಷ್ಯಾದಿಂದ ಖರೀದಿಸುತ್ತೇವೆ.