ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪ ಇಡೀ ಜಗತ್ತನ್ನೇ ನಡುಗಿಸಿದೆ. ಎರಡೂ ನಗರಗಳಲ್ಲಿ ಭೂಕಂಪದಿಂ ನಾಶವಾಗಿರುವ ದೃಶ್ಯವಿದೆ ಕಾಣಸಿಗುತ್ತಿದೆ. ವರದಿಯ ಪ್ರಕಾರ ಭೂಕಂಪದ ಸಾವಿನ ಸಂಖ್ಯೆ 19,300 ಮೀರಿದೆ. ಅನೇಕ ದೇಶಗಳು ಟರ್ಕಿ ಮತ್ತು ಸಿರಿಯಾಕ್ಕೆ ಸಹಾಯಕ್ಕಾಗಿ ತಮ್ಮ ರಕ್ಷಣಾ ಪಡೆಗಳನ್ನು ಕಳುಹಿಸಿವೆ. 'ಆಪರೇಷನ್ ದೋಸ್ತ್' ಅಡಿಯಲ್ಲಿ ಭಾರತ ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡುತ್ತಿದೆ. ಇದಕ್ಕಾಗಿ ಎನ್‌ಡಿಆರ್‌ಎಫ್ ಮತ್ತು ಸೇನೆಯ ವಿಶೇಷ ತಂಡವನ್ನು ಕಳುಹಿಸಲಾಗಿದೆ.
ಆಪರೇಷನ್ ದೋಸ್ತ್ ಕಾರ್ಯಾಚರಣೆ ಅಡಿಯಲ್ಲಿ ಸಿರಿಯಾ ಮತ್ತು ಟರ್ಕಿಗೆ ಭಾರತ ಸರ್ಕಾರ ಔಷಧಗಳು, ರಕ್ಷಣಾ ತಂಡಗಳು ಸೇರಿದಂತೆ ಸಾಧ್ಯವಾಗುವ ಎಲ್ಲಾ ನೆರವನ್ನು ನೀಡುತ್ತಿದೆ. ಭೂಕಂಪದಿಂದ ಧರೆಗುರುಳಿದ ಕಟ್ಟಡಗಳ ಅಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಈ ಕಾರ್ಯಾಚರಣೆಯಲ್ಲಿ ಭಾರತೀಯ ರಕ್ಷಣಾ ಪಡೆಗಳೂ ಕೈ ಜೋಡಿಸಲಿವೆ ಎಂದು ವಿದೇಶಾಂಗ ಸಚಿವ ಜೈ ಶಂಕರ್ ಹೇಳಿದ್ದಾರೆ