Army Day: ಇಂದು ಸೇನಾ ದಿನ; ದೆಹಲಿ ಅಲ್ಲ, ಬೆಂಗಳೂರಿನಲ್ಲೇ ಭಾರತೀಯ ಸೇನೆಯ ಪರೇಡ್ ವೈಭವ
ಸ್ವತಂತ್ರ ಭಾರತದ ಮೊದಲ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಅವರು ಅಧಿಕಾರ ಸ್ವೀಕರಿಸಿದ ನೆನಪಿನಲ್ಲಿ ಇಂದು, ಅಂದರೆ ಜನವರಿ 15ರಂದು ಪ್ರತಿ ವರ್ಷ ಸೇನಾ ದಿನವನ್ನು ಆಚರಿಸಲಾಗುತ್ತದೆ.
ಇಂದು ಸೇನಾ ದಿನ. ಇದೇ ಮೊದಲ ಬಾರಿಗೆ, 75 ನೇ ಸೇನಾ ದಿನದ ಪರೇಡ್ ಅನ್ನು ದೆಹಲಿಯಿಂದ ಹೊರಗೆ ನಡೆಸಲಾಗುತ್ತಿದೆ. (ಸಾಂದರ್ಭಿಕ ಚಿತ್ರ)
2/ 8
ಈ ವರ್ಷದ ಪರೇಡ್ ಬೆಂಗಳೂರಿನಲ್ಲಿ ನಡೆಯಲಿದೆ. ರಾಷ್ಟ್ರ ರಾಜಧಾನಿ ದೆಹಲಿಯಿಂದ ದೇಶದ ವಿವಿಧ ಭಾಗಗಳಿಗೆ ಭಾರತೀಯ ಸೇನೆಯನ್ನು ಕೊಂಡೊಯ್ಯುವ ಸರ್ಕಾರದ ಯೋಜನೆಯ ಭಾಗವಾಗಿ ಈ ಬಾರಿ ಬೆಂಗಳೂರಿನಲ್ಲಿ ಪರೇಡ್ ನಡೆಸಲಾಗುತ್ತಿದೆ. (ಸಾಂದರ್ಭಿಕ ಚಿತ್ರ)
3/ 8
ಪುಣೆಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ದಕ್ಷಿಣ ಕಮಾಂಡ್ನ ಮೇಲ್ವಿಚಾರಣೆಯಲ್ಲಿ ಇಂದಿನ ಪರೇಡ್ ನಡೆಯಲಿವೆ. (ಸಾಂದರ್ಭಿಕ ಚಿತ್ರ)
4/ 8
ಈ ಪರೇಡ್ ಮೊದಲ ಭಾರತೀಯ ಕಮಾಂಡರ್-ಇನ್-ಚೀಫ್ ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ ಜನವರಿ 15, 1949 ರಂದು ತನ್ನ ಬ್ರಿಟಿಷ್ ಅಧಿಕಾರಿಯನ್ನು ಬದಲಿಸಿ ಭಾರತೀಯ ಸೇನೆಯನ್ನು ಔಪಚಾರಿಕವಾಗಿ ವಹಿಸಿಕೊಂಡ ಪ್ರಕ್ರಿಯೆಯನ್ನು ಸೂಚಿಸುತ್ತದೆ. (ಸಾಂದರ್ಭಿಕ ಚಿತ್ರ)
5/ 8
ಮದ್ರಾಸ್ ಇಂಜಿನಿಯರಿಂಗ್ ವಾರ್ ಮೆಮೋರಿಯಲ್ನಲ್ಲಿ ಸೇನಾ ಮುಖ್ಯಸ್ಥ ಮೇಜರ್ ಜನರಲ್ ಮನೋಜ್ ಪಾಂಡೆ ಅವರು ರಾಷ್ಟ್ರಕ್ಕಾಗಿ ತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ. (ಸಾಂದರ್ಭಿಕ ಚಿತ್ರ)
6/ 8
ಸೇನಾ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಸೈನಿಕರಿಗೆ, ನಿವೃತ್ತ ಸೈನಿಕರು ಮತ್ತು ಸೇನಾ ಕುಟುಂಬದವರಿಗೆ ಶುಭ ಕೋರಿದ್ದಾರೆ (ಸಾಂದರ್ಭಿಕ ಚಿತ್ರ)
7/ 8
ಪ್ಯಾರಾ ಮೋಟಾರ್ ಫ್ಲೈಯಿಂಗ್, ಟೆಂಟ್ ಪೆಗಿಂಗ್, ಡೇರ್ ಡೆವಿಲ್ ಜಂಪ್, ಟೇಕ್ವಾಂಡೋ ಸೇರಿದಂತೆ ಹಲವು ಸಮರ ಕಲೆಗಳನ್ನು ಭಾರತೀಯ ಸೇನೆಯ ಸೈನಿಕರು ಪ್ರದರ್ಶನ ಮಾಡಲಿದ್ದಾರೆ. (ಸಾಂದರ್ಭಿಕ ಚಿತ್ರ)
8/ 8
ಸ್ವತಂತ್ರ ಭಾರತದ ಮೊದಲ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಅವರು ಅಧಿಕಾರ ಸ್ವೀಕರಿಸಿದ ನೆನಪಿನಲ್ಲಿ ಇಂದು, ಅಂದರೆ ಜನವರಿ 15ರಂದು ಪ್ರತಿ ವರ್ಷ ಸೇನಾ ದಿನವನ್ನು ಆಚರಿಸಲಾಗುತ್ತದೆ. (ಸಾಂದರ್ಭಿಕ ಚಿತ್ರ)