ಹಬ್ಬಗಳು ಬಂತೆಂದರೆ ಮನೆ ತುಂಬಾ ಹರ್ಷ, ಸಂಭ್ರಮ ಮನೆಮಾಡಿರುತ್ತದೆ. ಪ್ರತೀ ಹಬ್ಬಗಳನ್ನು ಕುಟುಂಬದ ಜೊತೆ ಅದ್ದೂರಿಯಾಗಿ ಆಚರಿಸುತ್ತೇವೆ. ಈ ಬಾರಿಯ ದೀಪಾವಳಿ ಹಬ್ಬವನ್ನು ಸಹ ವೈಭವದಿಂದ ಆಚರಿಸುತ್ತಿದ್ದೇವೆ. ಆದರೆ ದೇಶ ಕಾಯುತ್ತಿರುವ ನಮ್ಮ ಸೈನಿಕರಿಗೆ ಮಾತ್ರ ಕುಟುಂಬಸ್ಥರ ಜೊತೆ ದೀಪಾವಳಿ ಹಬ್ಬ ಆಚರಿಸುವ ಭಾಗ್ಯ ಇಲ್ಲ. ಬದಲಾಗಿ ಇವರು ಗಡಿಯಲ್ಲೇ ದೀಪ ಬೆಳಗಿ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಭಾರತೀಯ ಸೈನಿಕರು, ಬಿಎಸ್ಎಫ್ ಯೋಧರು, ಐಟಿಬಿಪಿ ಸೈನಿಕರು ತಾವಿರುವ ಗಡಿಪ್ರದೇಶದಲ್ಲಿಯೇ ದೀಪ ಹಚ್ಚಿ ಬೆಳಕಿನ ಹಬ್ಬವನ್ನು ಸ್ವಾಗತಿಸುತ್ತಿದ್ದಾರೆ. ವಾಘಾ ಗಡಿಯಲ್ಲೂ ಸಹ ನಮ್ಮ ಯೋಧರು ದೀಪಾವಳಿ ಆಚರಿಸುತ್ತಿದ್ದಾರೆ.