VP Jagdeep Dhankar: ತಮ್ಮ ಶಾಲಾ ಟೀಚರ್ ರನ್ನು ಭೇಟಿಯಾದ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್! ಮೇಡಂ ಏನದ್ರು ನೋಡಿ

ಭಾರತದ ಉಪರಾಷ್ಟ್ರಪತಿ 72 ವರ್ಷದ ಜಗದೀಪ್ ಧನ್ಕರ್ ಕೇರಳದಲ್ಲಿ ತಮ್ಮ 83 ವರ್ಷದ ಶಾಲಾ ಟೀಚರ್ ರತ್ನಾ ನಾಯರ್ ಅವರನ್ನು ಭೇಟಿಯಾಗಿದ್ದಾರೆ.

First published:

  • 18

    VP Jagdeep Dhankar: ತಮ್ಮ ಶಾಲಾ ಟೀಚರ್ ರನ್ನು ಭೇಟಿಯಾದ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್! ಮೇಡಂ ಏನದ್ರು ನೋಡಿ

    ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಎರಡು ದಿನಗಳ ಭೇಟಿಗಾಗಿ ಕೇರಳದಲ್ಲಿದ್ದಾರೆ. ಅಲ್ಲಿ ತಮಗೆ ಪಾಠ ಕಲಿಸಿದ 83 ವರ್ಷದ ಶಾಲಾ ಟೀಚರ್ ರತ್ನಾ ನಾಯರ್ ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

    MORE
    GALLERIES

  • 28

    VP Jagdeep Dhankar: ತಮ್ಮ ಶಾಲಾ ಟೀಚರ್ ರನ್ನು ಭೇಟಿಯಾದ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್! ಮೇಡಂ ಏನದ್ರು ನೋಡಿ

    ಸುಮಾರು 55 ವರ್ಷಗಳ ನಂತರ ತನ್ನ ವಿದ್ಯಾರ್ಥಿಯನ್ನು ನೋಡಿದ ಟೀಚರ್ ಗೆ ಅತೀವ ಸಂತೋಷವಾಯ್ತಂತೆ. 'ಇದಕ್ಕಿಂತ ಉತ್ತಮವಾದ ಗುರು ದಕ್ಷಿಣೆ ಇರಲು ಸಾಧ್ಯವಿಲ್ಲ' ಎಂದು ರತ್ನಾ ನಾಯರ್ ಹೇಳಿದ್ದಾರೆ.

    MORE
    GALLERIES

  • 38

    VP Jagdeep Dhankar: ತಮ್ಮ ಶಾಲಾ ಟೀಚರ್ ರನ್ನು ಭೇಟಿಯಾದ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್! ಮೇಡಂ ಏನದ್ರು ನೋಡಿ

    ಪಶ್ಚಿಮ ಭಾರತದ ರಾಜಸ್ಥಾನದದ ಚಿತ್ತೂರ್‌ಗಢ ಜಿಲ್ಲೆಯಲ್ಲಿದ್ದ ಸೈನಿಕ್ ಸ್ಕೂಲ್‍ನಲ್ಲಿ ರತ್ನಾ ನಾಯರ್ ಶಿಕ್ಷಕಿಯಾಗಿದ್ದ ಧನ್ಕರ್ ಅಲ್ಲಿ ವಿದ್ಯಾರ್ಥಿಯಾಗಿದ್ದಂತೆ. ಈ ವಿದ್ಯಾರ್ಥಿಯನ್ನು ಟೀಚರ್ ಮರೆತಿಲ್ಲ.

    MORE
    GALLERIES

  • 48

    VP Jagdeep Dhankar: ತಮ್ಮ ಶಾಲಾ ಟೀಚರ್ ರನ್ನು ಭೇಟಿಯಾದ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್! ಮೇಡಂ ಏನದ್ರು ನೋಡಿ

    ಶಿಕ್ಷಕಿಯು ತಮ್ಮ ವಿದ್ಯಾರ್ಥಿ ಜಗದೀಪ್ ಬಗ್ಗೆ ಹೆಮ್ಮೆಪಟ್ಟಿದ್ದಾರೆ. 'ಖಾಕಿ ತೊಟ್ಟ ಚಿಕ್ಕ ಹುಡುಗ, ಮೊದಲ ಸಾಲಿನಲ್ಲಿ ಕುಳಿತು, ತರಗತಿಯ ಮೇಲೆ ಸಂಪೂರ್ಣವಾಗಿ ಗಮನಹರಿಸುತ್ತಿದ್ದರು' ಎಂದು ನೆನಪಿಸಿಕೊಂಡರು. ಅವರ ಅನೇಕ ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿದ್ದಾರೆ. ದೇಶದ ಎರಡನೇ ಅತ್ಯುನ್ನತ ಸಾಂವಿಧಾನಿಕ ಸ್ಥಾನವನ್ನು ತಲುಪಿದ್ದು ಇದೇ ಮೊದಲು ಎಂದಿದ್ದಾರೆ.

    MORE
    GALLERIES

  • 58

    VP Jagdeep Dhankar: ತಮ್ಮ ಶಾಲಾ ಟೀಚರ್ ರನ್ನು ಭೇಟಿಯಾದ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್! ಮೇಡಂ ಏನದ್ರು ನೋಡಿ

    ಸೋಮವಾರ ಕಣ್ಣೂರು ಜಿಲ್ಲೆಯ ಪಣಿಯಣ್ಣೂರು ಗ್ರಾಮ ಪಂಚಾಯತಿಯಲ್ಲಿ ಜಗದೀಪ್ ಧನ್ಕರ್ ತಮ್ಮ ಪತ್ನಿ ಡಾ. ಸುದೇಶ್ ಧನ್ಕರ್ ಅವರೊಂದಿಗೆ ರತ್ನಾ ನಾಯರ್ ಅವರನ್ನು ಭೇಟಿಯಾದರು. ಕಾರಿನಿಂದ ಇಳಿಯುತ್ತಿದ್ದಂತೆ ಅವರು ಶಿಕ್ಷಕಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು.

    MORE
    GALLERIES

  • 68

    VP Jagdeep Dhankar: ತಮ್ಮ ಶಾಲಾ ಟೀಚರ್ ರನ್ನು ಭೇಟಿಯಾದ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್! ಮೇಡಂ ಏನದ್ರು ನೋಡಿ

    'ನವದೆಹಲಿಯಲ್ಲಿ ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಅವರು ನನ್ನನ್ನು ಆಹ್ವಾನಿಸಿದ್ದರು. ಅವರ ಶಾಲೆಯ ಇಬ್ಬರು ಶಿಕ್ಷಕರು ಮಾತ್ರ ಈಗ ಜೀವಂತವಾಗಿದ್ದಾರೆ. ಆರೋಗ್ಯ ಸಮಸ್ಯೆಗಳ ಕಾರಣ ನನಗೆ ಹಾರಲು ಸಾಧ್ಯವಾಗಲಿಲ್ಲ' ಎಂದು ಶಿಕ್ಷಕಿ ರತ್ನಾ ನಾಯರ್ ಹೇಳಿದ್ದಾರೆ.

    MORE
    GALLERIES

  • 78

    VP Jagdeep Dhankar: ತಮ್ಮ ಶಾಲಾ ಟೀಚರ್ ರನ್ನು ಭೇಟಿಯಾದ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್! ಮೇಡಂ ಏನದ್ರು ನೋಡಿ

    ಸುಮಾರು 30 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಶಿಕ್ಷಕಿ ಮತ್ತು ಅವರ ಕುಟುಂಬದವರು ಸ್ಥಳೀಯ ಭಕ್ಷ್ಯಗಳನ್ನು ಬಡಿಸಿದರು. ಸ್ಥಳೀಯ ಶಾಸಕರೂ ಆಗಿರುವ ಕೇರಳ ವಿಧಾನಸಭೆ ಸ್ಪೀಕರ್ ಎಎನ್ ಶಂಸೀರ್ ಸಭೆಯಲ್ಲಿ ಉಪಸ್ಥಿತರಿದ್ದರು.

    MORE
    GALLERIES

  • 88

    VP Jagdeep Dhankar: ತಮ್ಮ ಶಾಲಾ ಟೀಚರ್ ರನ್ನು ಭೇಟಿಯಾದ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್! ಮೇಡಂ ಏನದ್ರು ನೋಡಿ

    ಉಪರಾಷ್ಟ್ರಪತಿಯಾದ ನಂತರ ಕೇರಳಕ್ಕೆ ಧಂಖರ್ ಅವರ ಮೊದಲ ಭೇಟಿ ಇದಾಗಿದೆ. ಅವರು ತಮ್ಮ ಶಿಕ್ಷಕರನ್ನು ಭೇಟಿ ಮಾಡುವ ಮೊದಲು ತಿರುವನಂತಪುರಂನಲ್ಲಿ ಕೇರಳ ಶಾಸಕಾಂಗ ಸಭೆಯ ಸಂಕೀರ್ಣದ ಬೆಳ್ಳಿ ಮಹೋತ್ಸವ ಆಚರಣೆಯನ್ನು ಉದ್ಘಾಟಿಸಿದ್ದರು.

    MORE
    GALLERIES