(PHOTOS); ಭಾರತ-ಪಾಕ್ ನಡುವೆ ಬಿಗುವಿನ ವಾತಾವರಣ: ದೇಶಾದ್ಯಂತ ಹೈ ಅಲರ್ಟ್
ಭಾರತ-ಪಾಕಿಸ್ತಾನ ನಡುವೆ ಬಿಗುವಿನ ವಾತಾವರಣ ಹಿನ್ನೆಲೆಯಲ್ಲಿ ಕಾರವಾರ ಬಂದರಿನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಭಾರತಕ್ಕೆ ಹಾರಾಟ ನಡೆಸಬೇಕಿದ್ದ ಏರ್ ಕೆನಡಾ ವಾಣಿಜ್ಯ ವಿಮಾನಗಳ ಸೇವೆಯನ್ನು ಸಂಸ್ಥೆ ತಾತ್ಕಾಲಿಕವಾಗಿ ರದ್ದು ಮಾಡಿದೆ. ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಮಧ್ಯ ರಾತ್ರಿಯಿಂದಲೇ ಅರಬ್ಬಿ ಸಮುದ್ರದಿಂದ ಬಂದರಿಗೆ ಹೋಗುವಂತೆ ಸೂಚನೆ ನೀಡಿದ್ದಾರೆ. ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸುಪ್ರೀಂ ಕೋರ್ಟ್, ಸಂಸತ್ತು, ರಾಷ್ಟ್ರಪತಿ ಭವನಗಳಲ್ಲಿ ಭದ್ರತೆಯನ್ನು ನೀಡಲಾಗಿದೆ. ಕೆಲವು ಚಿತ್ರಗಳು ನ್ಯೂಸ್ 18 ಕನ್ನಡದಲ್ಲಿ