Belagavi: ಭಾರತ- ಜಪಾನ್ ಸೈನಿಕರ ಸಮರಾಭ್ಯಾಸ, ಉಗ್ರರ ವಿರುದ್ಧ ಕಾರ್ಯಾಚರಣೆಯ ಅಣಕು ಪ್ರದರ್ಶನ

ಉಕ್ರೇನ್- ರಷ್ಯಾ ಮಧ್ಯೆ ಭೀಕರ ಯುದ್ಧ ನಡೆಯುತ್ತಿದೆ. ರಷ್ಯಾ ಆಕ್ರಮಣಕ್ಕೆ ಉಕ್ರೇತ ತತ್ತರಿಸಿಹೋಗಿದ್ದು, ಅಲ್ಲಿದ್ದ ಭಾರತದ ನೂರಾರು ವಿದ್ಯಾರ್ಥಿಗಳು ತವರಿಗೆ ವಾಪಸ್ ಬಂದಿದ್ದಾರೆ. ಈ ನಡುವೆ ಬೆಳಗಾವಿಯಲ್ಲಿ ಭಾರತ- ಜಪಾನ್ ಸೈನಿಕರು ಜಂಟಿಯಾಗಿ ಸಮರಾಭ್ಯಾಸದಲ್ಲಿ ಮಗ್ನವಾಗಿವೆ.

First published:

  • 19

    Belagavi: ಭಾರತ- ಜಪಾನ್ ಸೈನಿಕರ ಸಮರಾಭ್ಯಾಸ, ಉಗ್ರರ ವಿರುದ್ಧ ಕಾರ್ಯಾಚರಣೆಯ ಅಣಕು ಪ್ರದರ್ಶನ

    ಬೆಳಗಾವಿಯಲ್ಲಿ ಭಾರತ- ಜಪಾನ್ ಯೋಧರು ಯುದ್ಧದ ಕೌಶಲ್ಯ ಪ್ರದೇಶನ ಮೈನವಿರೇಳಿಸಿತು. ಬೆಳಗಾವಿಯ ಮರಾಠಾ ಲಘು ಪದಾತಿದಳ ಕೇಂದ್ರದಲ್ಲಿ ಸದ್ದಿಲ್ಲದೆ ಭಾರತ -ಜಪಾನ್ ಎರಡು ದೇಶದ ಯೋಧರು ಜಂಟಿಯಾಗಿ ಯುದ್ಧದ ಸಮರಾಭ್ಯಾಸ ನಡೆಸುತ್ತಿವೆ.. ಕಳೆದ ತಿಂಗಳು ಫೆಬ್ರವರಿ 27ರಿಂದ ಆರಂಭವಾಗಿರುವ ಭಾರತ - ಜಪಾನ್ ಜಂಟಿ ಸಮರಾಭ್ಯಾಸವೂ ಮಾರ್ಚ್ 10ರವರೆಗೆ ನಡೆಯಲಿದೆ.

    MORE
    GALLERIES

  • 29

    Belagavi: ಭಾರತ- ಜಪಾನ್ ಸೈನಿಕರ ಸಮರಾಭ್ಯಾಸ, ಉಗ್ರರ ವಿರುದ್ಧ ಕಾರ್ಯಾಚರಣೆಯ ಅಣಕು ಪ್ರದರ್ಶನ

    ಭಾರತ -ಜಪಾನ್ ಜಂಟಿ ಸಮರಾಭ್ಯಾಸದ ಅಣಕು ಪ್ರದರ್ಶನ ನಡೆಯಿತು. ಇಂಡಿಯನ್ ಆರ್ಮಿ ವಾರ್ಷಿಕ ತರಬೇತಿ ಭಾಗವಾಗಿ ಧರ್ಮ ಗಾರ್ಡಿಯನ್ 2022 ಜಂಟಿ ಸಮರಾಭ್ಯಾಸ ಹಮ್ಮಿಕೊಳ್ಳಲಾಗಿದೆ.

    MORE
    GALLERIES

  • 39

    Belagavi: ಭಾರತ- ಜಪಾನ್ ಸೈನಿಕರ ಸಮರಾಭ್ಯಾಸ, ಉಗ್ರರ ವಿರುದ್ಧ ಕಾರ್ಯಾಚರಣೆಯ ಅಣಕು ಪ್ರದರ್ಶನ

    ಈ ಸಮರಾಭ್ಯಾಸದಲ್ಲಿ ಭಾರತೀಯ ಸೇನೆಯ 15ನೇ ಬೆಟಾಲಿಯನ್‌ನ ಮರಾಠ ಲೈಟ್ ಇನ್ಫಂಟ್ರಿ ರೆಜಿಮೆಂಟ್ ಪಡೆ ತಲಾ 40 ಯೋಧರು ಹಾಗೂ ಜಪಾನ್ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್‌ನ 30ನೇ ದಳದ ಯುದ್ಧ ಅನುಭವಿ ಪಡೆಗಳ 40 ಯೋಧರ ಇದಕ್ಕೆ ಸಾಕ್ಷಿಯಾಗಿದರು.

    MORE
    GALLERIES

  • 49

    Belagavi: ಭಾರತ- ಜಪಾನ್ ಸೈನಿಕರ ಸಮರಾಭ್ಯಾಸ, ಉಗ್ರರ ವಿರುದ್ಧ ಕಾರ್ಯಾಚರಣೆಯ ಅಣಕು ಪ್ರದರ್ಶನ

    ಯಾವುದೇ ಯುದ್ಧ, ಸಂಕಷ್ಟದ ಸಂದರ್ಭದಲ್ಲಿ ಹೇಗೆ ಟಾರ್ಗೆಟ್ ಬಗ್ಗೆ ಪ್ಲಾನ್ ಮಾಡಬೇಕು.  ದಾಳಿ‌, ಪ್ರತಿ ದಾಳಿ ಅಥವಾ ರಕ್ಷಣಾ ಕಾರ್ಯಾಚರಣೆಗೆ ಯಾವ ರೀತಿ ತಂತ್ರಗಾರಿಕೆ ತರಬೇತಿ ನೀಡಲಾಗಿದೆ.

    MORE
    GALLERIES

  • 59

    Belagavi: ಭಾರತ- ಜಪಾನ್ ಸೈನಿಕರ ಸಮರಾಭ್ಯಾಸ, ಉಗ್ರರ ವಿರುದ್ಧ ಕಾರ್ಯಾಚರಣೆಯ ಅಣಕು ಪ್ರದರ್ಶನ

    ಬೆಳಗಾವಿ ತಾಲೂಕಿನ ಹಾಲಭಾವಿ ಗ್ರಾಮದ ಬಳಿ ಕಾರ್ಯಾಚರಣೆ ಅಣಕು ಪ್ರದರ್ಶನ ಮಾಡಿದ್ರು. ಸೇನಾ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡುವ ವೈಖರಿ.

    MORE
    GALLERIES

  • 69

    Belagavi: ಭಾರತ- ಜಪಾನ್ ಸೈನಿಕರ ಸಮರಾಭ್ಯಾಸ, ಉಗ್ರರ ವಿರುದ್ಧ ಕಾರ್ಯಾಚರಣೆಯ ಅಣಕು ಪ್ರದರ್ಶನ

    ಸೇನಾ ಹೆಲಿಕಾಪ್ಟರ್‌ನಲ್ಲಿ ತರಬೇತಿ ಕೇಂದ್ರಕ್ಕೆ ಆಗಮಿಸಿದ ಯೋಧರು, ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಹೆಲಿಕಾಪ್ಟರ್ ನಿಂದ ಹಗ್ಗದ ಸಹಾಯದಿಂದ ಕೆಳಗೆ ಇಳಿದ ಯೋಧರು ಅಣಕು ಕಾರ್ಯಾಚರಣೆ ಪ್ರದರ್ಶನ ಮಾಡಿದ್ರೆ. ನಾಲ್ಕು ಹೆಲಿಕಾಪ್ಟರ್‌ನಲ್ಲಿ 40ಕ್ಕೂ ಹೆಚ್ಚು ಧರ ಕೌಶಲ್ಯ ಮೈನವಿರೇಳಿಸಿತು.

    MORE
    GALLERIES

  • 79

    Belagavi: ಭಾರತ- ಜಪಾನ್ ಸೈನಿಕರ ಸಮರಾಭ್ಯಾಸ, ಉಗ್ರರ ವಿರುದ್ಧ ಕಾರ್ಯಾಚರಣೆಯ ಅಣಕು ಪ್ರದರ್ಶನ

    ಅಲ್ಲದೇ ಭಾರತ ಜಪಾನ್ ಯುದ್ಧ ಪರಿಣಿತ ಯೋಧರು ಅಣಕು ಪ್ರದೇಶದಲ್ಲಿ ತಮ್ಮ ತರಬೇತಿ ಕೌಶಲ್ಯವನ್ನ ಪ್ರದರ್ಶನ ಮಾಡಿದ್ರು. ನಾಗರಿಕರ ಪ್ರಾಣಕ್ಕೆ ಹಾನಿಯಾಗದೇ ಯುದ್ಧ ಗೆಲ್ಲುವುದು ಹೇಗೆ. ಭವಿಷ್ಯದಲ್ಲಿ ಭಾರತ ಜಪಾನ್ ಎರಡು ದೇಶಗಳು ಪರಸ್ಪರ ತಮ್ಮ ತಮ್ಮ ಸೇನಾ ಬಲದ ಸಹಾಯ ಹಸ್ತ ಪಡೆಯಲು ಈ ಸಮರಾಭ್ಯಾಸದಿಂದ ನೆರವಾಗಲಿದೆ.

    MORE
    GALLERIES

  • 89

    Belagavi: ಭಾರತ- ಜಪಾನ್ ಸೈನಿಕರ ಸಮರಾಭ್ಯಾಸ, ಉಗ್ರರ ವಿರುದ್ಧ ಕಾರ್ಯಾಚರಣೆಯ ಅಣಕು ಪ್ರದರ್ಶನ

    ಅಲ್ಲದೇ ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಅನುಕೂಲ ಆಗಲಿದೆ. ಅದರಲ್ಲೂಕಾಡು, ಅರೆ ನಗರ, ನಗರ ಪ್ರದೇಶಗಳಲ್ಲಿನ ಕಾರ್ಯಾಚರಣೆಯ ಪ್ಲಟೂನ್ ಮಟ್ಟದ ತರಬೇತಿ ನೀಡಲಾಗಿದೆ..ಮನೆಗಳ ಮೇಲಿನ ಡ್ರಿಲ್‌ಗಳು, ಭಯೋತ್ಪಾದಕ ಅಡಗು ತಾಣಗಳ ಮೇಲೆ ದಾಳಿ ನಡೆದಾಗ ಕೈಗೊಳ್ಳಬೇಕಾದ ಕಾರ್ಯಾಚರಣೆ ಹಾಗೂ ನಿರಾಯುಧ ಯುದ್ಧ ಸೇರಿ ವಿವಿಧ ಹಂತದ ಕಾರ್ಯಾಚರಣೆಗಳ ತರಬೇತಿ ನೀಡಲಾಗಿದೆ.

    MORE
    GALLERIES

  • 99

    Belagavi: ಭಾರತ- ಜಪಾನ್ ಸೈನಿಕರ ಸಮರಾಭ್ಯಾಸ, ಉಗ್ರರ ವಿರುದ್ಧ ಕಾರ್ಯಾಚರಣೆಯ ಅಣಕು ಪ್ರದರ್ಶನ

    ಈ ಹಿಂದೆಯೂ ಬೆಳಗಾವಿ ಮರಾಠಾ ಲಘು ಪದಾತಿದಳ ಕೇಂದ್ರ ಇಂಡಿಯಾ ಯುಎಇ, ಇಂಡಿಯಾ ಚೀನಾ, ಇಂಡಿಯಾ ಮಾಲ್ಡೀವ್ಸ್ ಸೇರಿದಂತೆ ಬೇರೆ ಬೇರೆ ದೇಶಗಳೊಂದಿಗೆ ಸಮರಾಭ್ಯಾಸ ಕ್ಕೆ ಸಾಕ್ಷಿಯಾಗಿದೆ.

    MORE
    GALLERIES