Most Populous Country: ಜನಸಂಖ್ಯೆಯಲ್ಲಿ ಈಗ ನಾವೇ ನಂಬರ್ ಒನ್: ಚೀನಾವನ್ನು ಹಿಂದಿಕ್ಕಿದ ಭಾರತ!

ನವದೆಹಲಿ: ಇದೇ ಮೊದಲ ಬಾರಿಗೆ ಜನಸಂಖ್ಯೆಯಲ್ಲಿ ಚೀನಾ ದೇಶವನ್ನು ಹಿಂದಿಕ್ಕುವ ಮೂಲಕ ಭಾರತ ವಿಶ್ವದ ಅತಿದೊಡ್ಡ ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರ ಹೊಮ್ಮಿದೆ.

First published:

  • 17

    Most Populous Country: ಜನಸಂಖ್ಯೆಯಲ್ಲಿ ಈಗ ನಾವೇ ನಂಬರ್ ಒನ್: ಚೀನಾವನ್ನು ಹಿಂದಿಕ್ಕಿದ ಭಾರತ!

    ವಿಶ್ವಸಂಸ್ಥೆ ಜಗತ್ತಿನ ಜನಸಂಖ್ಯೆಯ ಕುರಿತು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ವಿಶ್ವಸಂಸ್ಥೆ ಹೇಳುವ ಪ್ರಕಾರ ಭಾರತದ ಜನಸಂಖ್ಯೆ 142.86 ಕೋಟಿ ಇದ್ದರೆ, ಚೀನಾದ ಜನಸಂಖ್ಯೆ 142.57 ಕೋಟಿ ಇದೆ.

    MORE
    GALLERIES

  • 27

    Most Populous Country: ಜನಸಂಖ್ಯೆಯಲ್ಲಿ ಈಗ ನಾವೇ ನಂಬರ್ ಒನ್: ಚೀನಾವನ್ನು ಹಿಂದಿಕ್ಕಿದ ಭಾರತ!

    ಕಳೆದ ಆರು ದಶಕಗಳಲ್ಲಿ ಮೊದಲ ಬಾರಿಗೆ ಚೀನಾದ ಜನಸಂಖ್ಯೆ ಕುಸಿತ ಕಂಡಿದ್ದು, 2022ರ ಕೊನೆಯಲ್ಲಿ ಚೀನಾದಲ್ಲಿ ಹಿಂದಿನ ವರ್ಷಕ್ಕಿಂತ 850000 ಜನರು ಕಡಿಮೆ ಇದ್ದಾರೆ ಎಂದು ನ್ಯಾಷನಲ್ ಬ್ಯೂರೋ ಆಫ್ ಸ್ಟಾಟಿಸ್ಟಿಕ್ಸ್‌ ವರದಿ ಮಾಡಿತ್ತು.

    MORE
    GALLERIES

  • 37

    Most Populous Country: ಜನಸಂಖ್ಯೆಯಲ್ಲಿ ಈಗ ನಾವೇ ನಂಬರ್ ಒನ್: ಚೀನಾವನ್ನು ಹಿಂದಿಕ್ಕಿದ ಭಾರತ!

    1950 ರಲ್ಲಿ ಜನಸಂಖ್ಯೆಯ ಅಂಕಿ ಅಂಶಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ ನಂತರ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ಮೊದಲ ಬಾರಿಗೆ ಅಗ್ರಸ್ಥಾನಕ್ಕೇರಿದೆ.

    MORE
    GALLERIES

  • 47

    Most Populous Country: ಜನಸಂಖ್ಯೆಯಲ್ಲಿ ಈಗ ನಾವೇ ನಂಬರ್ ಒನ್: ಚೀನಾವನ್ನು ಹಿಂದಿಕ್ಕಿದ ಭಾರತ!

    1960 ನಂತರ ಇದೇ ಮೊದಲ ಬಾರಿಗೆ ಚೀನಾದಲ್ಲಿ ಮಾಜಿ ನಾಯಕ ಮಾವೋ ಝೆಡಾಂಗ್‌ ಅವರ ವಿನಾಶಕಾರಿ ಕೃಷಿ ನೀತಿಯಿಂದಾಗಿ ಕಳೆದ ವರ್ಷ ಲಕ್ಷಾಂತರ ಜನರು ಹಸಿವಿನಿಂದ ಮೃತಪಟ್ಟಿದ್ದರು.

    MORE
    GALLERIES

  • 57

    Most Populous Country: ಜನಸಂಖ್ಯೆಯಲ್ಲಿ ಈಗ ನಾವೇ ನಂಬರ್ ಒನ್: ಚೀನಾವನ್ನು ಹಿಂದಿಕ್ಕಿದ ಭಾರತ!

    ಇನ್ನು ಜನನ ದರದಲ್ಲಿ ಇಳಿಕೆ ಮತ್ತು ವೃದ್ದರ ಸಂಖ್ಯೆ ಹೆಚ್ಚಾಗುತ್ತಿರುವುದು ಮುಂತಾದ ಕಾರಣಗಳಿಂದಲೂ ಚೀನಾದಲ್ಲಿ ಜನಸಂಖ್ಯೆ ಇಳಿಕೆಯಾಗುತ್ತಿದೆ ಎಂದು ಹೇಳಲಾಗಿದೆ.

    MORE
    GALLERIES

  • 67

    Most Populous Country: ಜನಸಂಖ್ಯೆಯಲ್ಲಿ ಈಗ ನಾವೇ ನಂಬರ್ ಒನ್: ಚೀನಾವನ್ನು ಹಿಂದಿಕ್ಕಿದ ಭಾರತ!

    ಜನಸಂಖ್ಯಾ ಕುಸಿತವನ್ನು ಎದುರಿಸುತ್ತಿರುವ ಚೀನಾ ಜನನ ದರವನ್ನು ಹೆಚ್ಚಿಸಲು ಹಲವು ಪ್ರದೇಶಗಳಲ್ಲಿ ಯೋಜನೆಗಳನ್ನು ರೂಪಿಸಿದ್ದು, ಅದಾಗ್ಯೂ ಇಲ್ಲಿಯವರೆಗಿನ ಪ್ರಯತ್ನಗಳು ಜನಸಂಖ್ಯೆ ಕುಸಿತವನ್ನು ಹಿಮ್ಮೆಟ್ಟಿಸಲು ವಿಫಲವಾಗಿವೆ.

    MORE
    GALLERIES

  • 77

    Most Populous Country: ಜನಸಂಖ್ಯೆಯಲ್ಲಿ ಈಗ ನಾವೇ ನಂಬರ್ ಒನ್: ಚೀನಾವನ್ನು ಹಿಂದಿಕ್ಕಿದ ಭಾರತ!

    ಭಾರತವು 2011 ರಿಂದ ಜನಗಣತಿಯನ್ನು ಮಾಡದ ಕಾರಣ ದೇಶದಲ್ಲಿ ಎಷ್ಟು ಜನರನ್ನು ಹೊಂದಿದೆ ಎಂಬುದರ ಕುರಿತು ಅಧಿಕೃತ ಡೇಟಾ ಇಲ್ಲ. ಒಂದು ದಶಕದ ಜನಗಣತಿಯು 2021 ರಲ್ಲಿ ನಡೆಯಬೇಕಿತ್ತು. ಆದರೆ ಕೊರೊನಾದಿಂದಾಗಿ ವಿಳಂಬವಾಗಿದೆ.

    MORE
    GALLERIES