Election Result: ಚುನಾವಣೆ ಗೆದ್ದ ಸಂಭ್ರಮಾಚರಣೆಗೂ ಮುನ್ನವೇ ವಿಜೇತ ಪಕ್ಷೇತರ ಅಭ್ಯರ್ಥಿ ಸಾವು!

Election Results: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಸಾದ್ ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಫಲಿತಾಂಶ ಹೊರಬೀಳುವ ಮುನ್ನವೇ ಪ್ರಸಾದ್​ ಮೃತಪಟ್ಟಿರುವುದಕ್ಕೆ ಕ್ಚೇತ್ರದ ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಅವರು 3 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು.

First published:

  • 17

    Election Result: ಚುನಾವಣೆ ಗೆದ್ದ ಸಂಭ್ರಮಾಚರಣೆಗೂ ಮುನ್ನವೇ ವಿಜೇತ ಪಕ್ಷೇತರ ಅಭ್ಯರ್ಥಿ ಸಾವು!

    ಉತ್ತರ ಪ್ರದೇಶದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, 65 ವರ್ಷದ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಆದರೆ ಗೆಲುವಿನ ಸಂಭ್ರಮಿಸುವುಕ್ಕೆ ಅವರೇ ಇಲ್ಲದಂತಾಗಿದೆ.

    MORE
    GALLERIES

  • 27

    Election Result: ಚುನಾವಣೆ ಗೆದ್ದ ಸಂಭ್ರಮಾಚರಣೆಗೂ ಮುನ್ನವೇ ವಿಜೇತ ಪಕ್ಷೇತರ ಅಭ್ಯರ್ಥಿ ಸಾವು!

    ಸುಲ್ತಾನ್‌ಪುರ ಜಿಲ್ಲೆಯ ಕಡಿಪುರ ನಗರ ಪಂಚಾಯತ್‌ನ ವಾರ್ಡ್ ಸಂಖ್ಯೆ 10 ರಲ್ಲಿ ಗೆಲುವು ಸಾಧಿಸಿದ್ದ ಪಕ್ಷೇತ್ರ ಅಭ್ಯರ್ಥಿ ಸಂತ ಪ್ರಸಾದ್ (65) ಫಲಿತಾಂಶಕ್ಕೂ ಮುನ್ನವೇ ಸಾವನ್ನಪ್ಪಿದ್ದಾರೆ.

    MORE
    GALLERIES

  • 37

    Election Result: ಚುನಾವಣೆ ಗೆದ್ದ ಸಂಭ್ರಮಾಚರಣೆಗೂ ಮುನ್ನವೇ ವಿಜೇತ ಪಕ್ಷೇತರ ಅಭ್ಯರ್ಥಿ ಸಾವು!

    ಹಣ್ಣಿನ ವ್ಯಾಪಾರಿ ಪ್ರಸಾದ್ ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಫಲಿತಾಂಶ ಹೊರಬೀಳುವ ಮುನ್ನವೇ ಪ್ರಸಾದ್​ ಮೃತಪಟ್ಟಿರುವುದಕ್ಕೆ ವಾರ್ಡ್​ನ ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಮೃತ ಪ್ರಸಾದ್​ ಇಬ್ಬರು ಪುತ್ರರು ಮತ್ತು ಐವರು ವಿವಾಹಿತ ಪುತ್ರಿಯರನ್ನು ಅಗಲಿದ್ದಾರೆ.

    MORE
    GALLERIES

  • 47

    Election Result: ಚುನಾವಣೆ ಗೆದ್ದ ಸಂಭ್ರಮಾಚರಣೆಗೂ ಮುನ್ನವೇ ವಿಜೇತ ಪಕ್ಷೇತರ ಅಭ್ಯರ್ಥಿ ಸಾವು!

    ಮೃತ ಸಂತ ಪ್ರಸಾದ್ ವಾರ್ಡ್ ನಂ. 10 ರಿಂದ ವಿಜೇತರಾಗಿದ್ದಾರೆ. ಅವರು ಮೂರು ಮತಗಳಿಂದ ಗೆಲುವು ಸಾಧಿಸಿದ್ದರು. ಆದರೆ, ಅವರ ನಿಧನದಿಂದ ಸ್ಥಾನ ತೆರವಾದ ಕಾರಣ, ಈ ವಾರ್ಡ್​ ಹೊಸದಾಗಿ ಚುನಾವಣೆ ನಡೆಸಲಾಗುವುದು ಎಂದು ಕಡಿಪುರ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಶಿವಪ್ರಸಾದ್ ಹೇಳಿದ್ದಾರೆ.

    MORE
    GALLERIES

  • 57

    Election Result: ಚುನಾವಣೆ ಗೆದ್ದ ಸಂಭ್ರಮಾಚರಣೆಗೂ ಮುನ್ನವೇ ವಿಜೇತ ಪಕ್ಷೇತರ ಅಭ್ಯರ್ಥಿ ಸಾವು!

    ಉತ್ತರ ಪ್ರದೇಶದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಶನಿವಾರ ಹೊರಬಿದ್ದಿತ್ತು. ಸಿಎಂ ಯೋಗಿ ಆದಿತ್ಯನಾಥ್​ ನೇತೃತ್ವದ ಬಿಜೆಪಿ ಪಕ್ಷ 17 ನಗರಸಭೆಗಳ ಮೇಯರ್​ ಸ್ಥಾನವನ್ನು ಗೆದ್ದುಕೊಂಡಿದೆ.

    MORE
    GALLERIES

  • 67

    Election Result: ಚುನಾವಣೆ ಗೆದ್ದ ಸಂಭ್ರಮಾಚರಣೆಗೂ ಮುನ್ನವೇ ವಿಜೇತ ಪಕ್ಷೇತರ ಅಭ್ಯರ್ಥಿ ಸಾವು!

    ಉತ್ತರ ಪ್ರದೇಶದಲ್ಲಿ ಮೇ 4 ಮತ್ತು ಮೇ 11 ರಂದು ಎರಡು ಹಂತಗಳಲ್ಲಿ ಪುರಸಭೆ, ನಗರಪಾಲಿಕೆ ಚುನಾವಣೆ ನಡೆದಿತ್ತು. ಮತ ಎಣಿಕೆಯಲ್ಲಿ ಬಿಜೆಪಿ ಪ್ರಮುಖವಾಗಿ 17 ನಗರಸಭೆಗಳ ಮೇಯರ್​ ಸ್ಥಾನಗಳನ್ನು ಗೆಲ್ಲುವಲ್ಲಿ ಸಫಲವಾಗಿದೆ.

    MORE
    GALLERIES

  • 77

    Election Result: ಚುನಾವಣೆ ಗೆದ್ದ ಸಂಭ್ರಮಾಚರಣೆಗೂ ಮುನ್ನವೇ ವಿಜೇತ ಪಕ್ಷೇತರ ಅಭ್ಯರ್ಥಿ ಸಾವು!

    ಲಕ್ನೋ, ಪ್ರಯಾಗ್‌ರಾಜ್, ವಾರಣಾಸಿ, ಮೀರತ್, ಸಹರಾನ್‌ಪುರ, ಅಯೋಧ್ಯೆ, ಕಾನ್ಪುರ್, ಬರೇಲಿ, ಮೊರಾದಾಬಾದ್, ಆಗ್ರಾ, ಅಲಿಗಢ, ಫಿರೋಜಾಬಾದ್, ಗೋರಖ್‌ಪುರ, ಗಾಜಿಯಾಬಾದ್, ಝಾನ್ಸಿ, ಮಥುರಾ ಮತ್ತು ಶಹಜಹಾನ್‌ಪುರ ನಗರಸಭೆ ಮೇಯರ್​ ಸ್ಥಾನಗಳನ್ನು ಯೋಗಿ ಸರ್ಕಾರ ತನ್ನದಾಗಿಸಿಕೊಂಡಿದೆ.

    MORE
    GALLERIES