ಇನ್ನು ಆದಾಯ ತೆರಿಗೆ ಇಲಾಖೆ ಕೈಗೆ ಸಿಗದಂತೆ ಉದ್ಯಮಿ ಹಣ ತುಂಬಿದ್ದ ಬ್ಯಾಗ್ ಅನ್ನು ನೀರಿನ ತೊಟ್ಟಿಯೊಳಗೆ ಬೀಸಾಡಿದ್ದರು. ಆದರೆ, ಅಧಿಕಾರಿಗಳ ಕಣ್ತಪ್ಪಿಸುವುದು ಅಷ್ಟು ಸುಲಭ ಅಲ್ಲ ಎಂಬುದನ್ನು ರೈ ಮರೆತಿದ್ದಾರೆ. ನೀರಿನ ತೊಟ್ಟಿಯಿಂದ ಬ್ಯಾಗ್ ವಶಕ್ಕೆ ಪಡೆದಿದ್ದು, ಅದನ್ನು ಒಣಗಿಸಿ ಲೆಕ್ಕಾಚಾರ ಮಾಡಿದ್ದಾರೆ. ಅಧಿಕಾರಿಗಳು ನೋಟನ್ನು ಒಣಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.