ಚೆನ್ನೈ-ರಾಮೇಶ್ವರಂ, ಸೇತು ಎಕ್ಸ್ಪ್ರೆಸ್. ಈ ಸೇತುವೆ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಪುರಾಣದ ಪ್ರಕಾರ, ಶ್ರೀರಾಮನು ತನ್ನ ಪತ್ನಿ ಸೀತೆಯನ್ನು ಲಂಕೆಯಿಂದ ಕರೆತರಲು ಈ ಸೇತುವೆಯನ್ನು ಕಟ್ಟಿದನು. ಇದು ಭಾರತದ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಪಂಬನ್ ಸೇತುವೆಯನ್ನು ದಾಟುವಾಗ ಒಂದು ಕ್ಷಣ ಮೈ ಜುಂ ಎನಿಸುತ್ತದೆ. ಜೀವ ಬಾಯಿಗೆ ಬಂದ ಅನುಭವವಾಗುತ್ತದೆ.
ರತ್ನಗಿರಿ- ಮಡ್ಗಾನ್ - ಹೊನ್ನಾವರ- ಮಂಗಳೂರು, ಕೊಂಕಣ ರೈಲ್ವೆ. ರತ್ನಗಿರಿಯಿಂದ ಮಡ್ಗಾನ್ ಮಾರ್ಗವಾಗಿ ಮಂಗಳೂರಿಗೆ ಮತ್ತು ಹೊನ್ನಾವರ ಹಾಗೂ ಮಂಗಳೂರಿಗೆ ಹೋಗುವ ಪ್ರಯಾಣವೇ ಚೆಂದ. ಹಚ್ಚಹಸಿರಿನ ಪ್ರಕೃತಿ ಜೊತೆಗೆ, ವಿಶಾಲವಾದ ಅರೇಬಿಯನ್ ಸಮುದ್ರ, ಬಳುಕುವ ಜಲಪಾತಗಳು, ಸಾಲು ಸಾಲಾದ ಸಹ್ಯಾದ್ರಿ ಪರ್ವತಗಳ ಸೌಂದರ್ಯ ನೋಡುಗರ ಮೈಮರೆಸುತ್ತದೆ. ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ಮೂಲಕ ಒಟ್ಟು 741 ಕಿ.ಮೀ.ಪ್ರಯಾಣ ಸಾಗುತ್ತದೆ.
ಸಿಲಿಗುರಿ- ನ್ಯೂಮಲ್-ಹಸಿಮಾರಾ- ಅಲಿಪುರ್ದಾರ್, ಡೂವರ್ಸ್ ವಾಯೇಜ್ . ಸಿಲಿಗುರಿ-ಅಲಿಪುರ್ದಾರ್ ಮಾರ್ಗದಲ್ಲಿ ಚಲಿಸುವ ಡೂವರ್ಸ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುವ ಅನುಭವ ನಿಜಕ್ಕೂ ರೋಮಾಂಚನಕಾರಿಯಾದದ್ದು. ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದ ಜರ್ನಿ ಇದಾಗಿದೆ. ಹಿಮಾಲಯ ಪರ್ವತಗಳ ಮಧ್ಯದಲ್ಲಿ ಸಾಗುತ್ತದೆ. ನದಿಗಳು, ಅರಣ್ಯಗಳ ಮಧ್ಯೆ ಈ ರೈಲು ಹಾದುಹೋಗುತ್ತದೆ.