ಹೈದರಾಬಾದ್ನ ಮೌಲಾಲಿ ಪ್ರದೇಶದ ನಿವಾಸಿಯಾಗಿದ್ದ ಯುವಕನಿಗೆ ಹಾಗೂ ಬಂಡ್ಲಗೂಡ ನಿವಾಸಿಯಾಗಿದ್ದ ಯುವತಿಗೆ ಹಿರಿಯರು ಮದುವೆ ನಿಶ್ಚಯ ಮಾಡಿದ್ದರು. ಮೂರು ದಿನಗಳ ಹಿಂದಷ್ಟೇ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಇಬ್ಬರಿಗೂ ನಿಶ್ಚಿತಾರ್ಥ ಕಾರ್ಯಕ್ರಮ ಕೂಡ ಮಾಡಲಾಗಿತ್ತು. ಅಲ್ಲದೆ, ಮೂರು ದಿನಗಳ ಅಂತರದಲ್ಲಿ ಅಂದರೆ ಭಾನುವಾರ ಮದುವೆಗೆ ಮುಹೂರ್ತ ಫಿಕ್ಸ್ ಮಾಡಿ ಎಲ್ಲಾ ತಯಾರಿ ಮಾಡಿಕೊಂಡಿದ್ದರು.
ಇನ್ನು, ಮನೆಯ ಬಳಿ ಬಂದ ಯುವತಿಯ ತಂದೆ ಮದುವೆಗೆ ಯಾಕೆ ಬರಲಿಲ್ಲ ಎಂದು ವರನನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ವರ, ತನಗೆ ಹಳೆ ಮಂಚ ಕೊಟ್ಟಿದ್ದೀರಿ, ಅದು ಫಿಕ್ಸ್ ಮಾಡುವಾಗಲೇ ಮುರಿದು ಹೋಗಿದೆ ಎಂದು ಹೇಳಿ ಅಸಮಾಧಾನ ಹೊರ ಹಾಕಿದ್ದನಂತೆ. ಇದೇ ವೇಳೆ ಮಾತಿಗೆ ಮಾತು ಬೆಳೆದು ಎರಡು ಕುಟುಂಬಗಳ ನಡುವೆ ಜಗಳ ಕೂಡ ಆಗಿದೆ. ಇದರೊಂದಿಗೆ ವರ ತಾನು ಮದುವೆಯಾಗುವುದಿಲ್ಲ ಎಂದು ಹೇಳಿದ್ದನಂತೆ.