Uttar Pradesh: ಯೋಗಿ ನಾಡಿನಲ್ಲಿ ಕಳೆದ 6 ವರ್ಷಗಳಲ್ಲಿ 10 ಸಾವಿರ ಮಂದಿ ಎನ್‌ಕೌಂಟರ್‌!

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರ ತನ್ನ ರಾಜ್ಯದಲ್ಲಿ ಕಳೆದ ಆರು ವರ್ಷಗಳಲ್ಲಿ 10 ಸಾವಿರಕ್ಕೂ ಹೆಚ್ಚು ಎನ್‌ಕೌಂಟರ್‌ಗಳನ್ನು ಮಾಡಿದೆ ಎಂದು ತಿಳಿದು ಬಂದಿದೆ. ಉತ್ತರ ಪ್ರದೇಶ ರಾಜ್ಯಾದ್ಯಂತ ನಡೆದಿರುವ ಎನ್‌ಕೌಂಟರ್‌ಗಳ ಪೈಕಿ ಮೀರತ್‌ ವಲಯದಲ್ಲೇ ಹೆಚ್ಚಿನ ಎನ್‌ಕೌಂಟರ್‌ಗಳು ನಡೆದಿವೆ. ಈ ವಲಯದಲ್ಲಿ ಬರೋಬ್ಬರಿ 3,152 ಎನ್‌ಕೌಂಟರ್‌ಗಳನ್ನು ಪೊಲೀಸರು ಮಾಡಿದ್ದಾರೆ.

First published:

  • 17

    Uttar Pradesh: ಯೋಗಿ ನಾಡಿನಲ್ಲಿ ಕಳೆದ 6 ವರ್ಷಗಳಲ್ಲಿ 10 ಸಾವಿರ ಮಂದಿ ಎನ್‌ಕೌಂಟರ್‌!

    ಹೌದು.. ಉತ್ತರ ಪ್ರದೇಶದ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಈವರೆಗೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ 178 ಮಂದಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಕ್ರಿಮಿನಲ್‌ಗಳ ಜೊತೆಗಿನ ಗುಂಡಿನ ಚಕಮಕಿ ವೇಳೆ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಸರ್ಕಾರಿ ವಕ್ತಾರರು ಹೇಳಿದ್ದಾರೆ.

    MORE
    GALLERIES

  • 27

    Uttar Pradesh: ಯೋಗಿ ನಾಡಿನಲ್ಲಿ ಕಳೆದ 6 ವರ್ಷಗಳಲ್ಲಿ 10 ಸಾವಿರ ಮಂದಿ ಎನ್‌ಕೌಂಟರ್‌!

    ಅಪರಾಧಿಗಳನ್ನು ಸೆರೆ ಹಿಡಿದು ಕೊಟ್ಟರೆ 5 ಸಾವಿರದಿಂದ 75 ಸಾವಿರ ರೂಪಾಯಿ ತನಕ ಬಹುಮಾನ ಘೋಷಣೆ ಮಾಡಲಾಗಿತ್ತು. ಉತ್ತರ ಪ್ರದೇಶ ರಾಜ್ಯಾದ್ಯಂತ ಪೊಲೀಸರು ವಿಶೇಷ ಕಾರ್ಯಾಚರಣೆ ವೇಳೆ 2017ರ ಮಾರ್ಚ್ 20 ರಿಂದ 2023ರ ಮಾರ್ಚ್ 6 ಅವಧಿಯಲ್ಲಿ ಒಟ್ಟು 23,069 ದುಷ್ಕರ್ಮಿಗಳನ್ನು ಸೆರೆ ಹಿಡಿದಿದ್ದಾರೆ.

    MORE
    GALLERIES

  • 37

    Uttar Pradesh: ಯೋಗಿ ನಾಡಿನಲ್ಲಿ ಕಳೆದ 6 ವರ್ಷಗಳಲ್ಲಿ 10 ಸಾವಿರ ಮಂದಿ ಎನ್‌ಕೌಂಟರ್‌!

    2017ರಿಂದ ಈವರೆಗೆ ಮೀರತ್ ವಲಯದಲ್ಲಿ 63 ಕ್ರಿಮಿನಲ್‌ಗಳು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ಇದಲ್ಲದೆ 1,708 ಕ್ರಿಮಿನಲ್‌ಗಳು ಗಾಯಾಳುಗಳಾಗಿ ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂದು ಸರ್ಕಾರಿ ವಕ್ತಾರರು ಮಾಹಿತಿ ನೀಡಿದ್ಧಾರೆ.

    MORE
    GALLERIES

  • 47

    Uttar Pradesh: ಯೋಗಿ ನಾಡಿನಲ್ಲಿ ಕಳೆದ 6 ವರ್ಷಗಳಲ್ಲಿ 10 ಸಾವಿರ ಮಂದಿ ಎನ್‌ಕೌಂಟರ್‌!

    ದುಷ್ಕರ್ಮಿಗಳನ್ನು ಸೆರೆ ಹಿಡಿಯುವಾಗ ನಡೆದ ಗುಂಡಿನ ಚಕಮಕಿ ವೇಳೆ 4,911 ಆರೋಪಿಗಳು ಗಾಯಗೊಂಡಿದ್ದಾರೆ. ಈ 6 ವರ್ಷಗಳ ಅವಧಿಯಲ್ಲಿ ದುಷ್ಕರ್ಮಿಗಳ ಜೊತೆಗಿನ ಗುಂಡಿನ ಕಾಳಗದಲ್ಲಿ ಒಟ್ಟು 13 ಪೊಲೀಸರು ಹುತಾತ್ಮರಾಗಿದ್ದಾರೆ. ಇದಲ್ಲದೆ 1,424 ಪೊಲೀಸರಿಗೆ ಗುಂಡೇಟು ತಗುಲಿ ಗಾಯಗೊಂಡಿದ್ದಾರೆ.

    MORE
    GALLERIES

  • 57

    Uttar Pradesh: ಯೋಗಿ ನಾಡಿನಲ್ಲಿ ಕಳೆದ 6 ವರ್ಷಗಳಲ್ಲಿ 10 ಸಾವಿರ ಮಂದಿ ಎನ್‌ಕೌಂಟರ್‌!

    ಪೊಲೀಸರ ಬಲೆಗೆ ಬಿದ್ದಿರುವ ಕ್ರಿಮಿನಲ್‌ಗಳ ಪೈಕಿ ಇಬ್ಬರ ಸೆರೆ ಅಥವಾ ಹತ್ಯೆಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ನಾಲ್ವರ ಹತ್ಯೆ ಅಥವಾ ಬಂಧನಕ್ಕೆ 2.5 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿತ್ತು. ಇನ್ನಿಬ್ಬರ ತಲೆಗೆ 2 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. 6 ಮಂದಿಯ ತಲೆಗೆ 1.5 ಲಕ್ಷ, 27 ಮಂದಿಯ ಸೆರೆ ಅಥವಾ ಹತ್ಯೆಗೆ 1 ಲಕ್ಷ ಹಾಗೂ ಇನ್ನಿತರ ಹಲವರ ತಲೆಗೆ 75 ಸಾವಿರ ರೂ. ಬಹುಮಾನ ಘೋಷಿಸಲಾಗಿತ್ತು.

    MORE
    GALLERIES

  • 67

    Uttar Pradesh: ಯೋಗಿ ನಾಡಿನಲ್ಲಿ ಕಳೆದ 6 ವರ್ಷಗಳಲ್ಲಿ 10 ಸಾವಿರ ಮಂದಿ ಎನ್‌ಕೌಂಟರ್‌!

    ಆ ಆರೋಪಿಗಳೆಲ್ಲರನ್ನು ಪೊಲೀಸರು ಕಳೆದ 6 ವರ್ಷಗಳಲ್ಲಿ ಗುಂಡಿಟ್ಟು ಹತ್ಯೆಗೈದಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಆಯ್ಕೆ ಆದ ಬಳಿಕ ರಾಜ್ಯದಲ್ಲಿ ಎನ್‌ಕೌಂಟರ್‌ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗಿದೆ.

    MORE
    GALLERIES

  • 77

    Uttar Pradesh: ಯೋಗಿ ನಾಡಿನಲ್ಲಿ ಕಳೆದ 6 ವರ್ಷಗಳಲ್ಲಿ 10 ಸಾವಿರ ಮಂದಿ ಎನ್‌ಕೌಂಟರ್‌!

    ಮಾಫಿಯಾ ಹಾಗೂ ಕ್ರಿಮಿನಲ್‌ಗಳ ವಿರುದ್ಧ ಕಠಿಣ ನೀತಿ ಅಳವಡಿಸುವಂತೆ ಸಿಎಂ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಪೊಲೀಸರಿಗೆ ಸೂಚನೆ ನೀಡಿದ್ದು, ಅಪರಾಧಿಗಳ ಸೆರೆಗೆ ಹಾಗೂ ಹತ್ಯೆಗೆ ಸೂಚನೆ ನೀಡಿದ್ದಾರೆ.

    MORE
    GALLERIES