ಹೌದು.. ಡೇಟಿಂಗ್ ಆ್ಯಪ್ ಹೆಸರಿನಲ್ಲಿ ಯುವತಿಯೊಬ್ಬಳಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಹುಬ್ಬಳ್ಳಿಯ ನಡೆದಿದೆ.
2/ 7
ಟೆಂಡರ್ ಡೇಟಿಂಗ್ ಆ್ಯಪ್ ಹೆಸರಲ್ಲಿ ಯುವತಿಗೆ ಹಣ ದೋಖಾ ಮಾಡಲಾಗಿದ್ದು, ವಂಚಕರ ಮಾತು ನಂಬಿದ ಯುವತಿ ಬರೋಬ್ಬರಿ 30.50 ಲಕ್ಷ ರೂಪಾಯಿ ಕಳೆದುಕೊಂಡಿರುವುದಾಗಿ ತಿಳಿದು ಬಂದಿದೆ.
3/ 7
ತಾವು ಸೀಡ್ಸ್ ಕಂಪನಿಯೊಂದರ ಶೇರುದಾರರಿದ್ದೇವೆ, ಸೀಡ್ ಕಂಪನಿಯಲ್ಲಿ ಹೂಡಿಕೆ ಮಾಡಿ ಶೇ.30 ರಷ್ಟು ಲಾಭ ಪಡೆಯಿರಿ ಎಂದು ಯುವತಿಯನ್ನು ವಂಚಕರು ನಂಬಿಸಿದ್ದಾರೆ.
4/ 7
ಆರಂಭದಲ್ಲಿ ತಮ್ಮನ್ನು ತಾವು ತಾವು ಸೀಡ್ಸ್ ಕಂಪನಿಯೊಂದರ ಶೇರುದಾರರಿದ್ದೇವೆ ಎಂದು ಪರಿಚಯಿಸಿಕೊಂಡ ವಂಚಕರು, ಆಕೆಗೆ ಲಾಭ ಗಳಿಸುವ ಪ್ಲಾನ್ ವಿವರಿಸಿ ನಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ.
5/ 7
ಆ ನಂತರ ಯುವತಿಯಿಂದ ಹಂತ ಹಂತವಾಗಿ ಲಕ್ಷಾಂತರ ರೂಪಾಯಿ ವರ್ಗಾವಣೆ ಮಾಡಿಕೊಂಡಿದ್ದು, ಆಕೆಯಿಂದ 30.50 ಲಕ್ಷ ರೂಪಾಯಿ ವರ್ಗಾಯಿಸಿಕೊಂಡ ಬಳಿಕ ಸ್ವತಃ ಯುವತಿಗೆ ಸಂಶಯ ಬಂದು ವಂಚನೆಯ ಜಾಲಕ್ಕೆ ಸಿಲುಕಿರುವುದು ಅರಿವಾಗಿದೆ.
6/ 7
ಈ ಸಂಬಂಧ ಯುವತಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೆಹಲಿಯ ಕಲ್ಪನಾ, ನೇಹಾ ಗುಪ್ತಾ ಮತ್ತು ಮನೋಜ್ ತಿವಾರಿ ಎಂಬ ಮೂವರ ವಿರುದ್ದ ಪ್ರಕರಣದ ದಾಖಲಿಸಲಾಗಿದೆ.
7/ 7
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವತಿ ನೀಡಿದ ದೂರಿನನ್ವಯ ವಂಚಕರ ಬಂಧನಕ್ಕೆ ಬಲೆ ಬೀಸಿದ್ದಾರೆ.
First published:
17
Dating App Fraud: ಡೇಟಿಂಗ್ ಆ್ಯಪ್ ಬಳಸೋರೆ ಎಚ್ಚರ! ಸ್ವಲ್ಪ ಯಾಮಾರಿದರೂ ಕೈಗೆ ಚೊಂಬು ಸಿಗೋದು ಗ್ಯಾರಂಟಿ!