ಭಾರತದಲ್ಲಿ ಕೆಲವು ದಿನಗಳಿಂದ ಶಾಖದ ಅಲೆಗಳು ಮತ್ತು ತೀವ್ರ ಶಾಖದ ಪರಿಸ್ಥಿತಿಗಳಲ್ಲಿ ತತ್ತರಿಸುತ್ತಿರುವ ಕಾರಣ ಈ ರಾಜ್ಯಗಳ ನಿವಾಸಿಗಳಿಗೆ ಮಳೆ ಬರುವ ಸುದ್ದಿಯು ನಿಟ್ಟುಸಿರು ಬಿಡುವಂತೆ ಮಾಡಿದೆ. ದೆಹಲಿ, ಪಶ್ಚಿಮ ಬಂಗಾಳ, ಬಿಹಾರ ಮುಂತಾದ ಹಲವು ರಾಜ್ಯಗಳಲ್ಲಿ ತಾಪಮಾನವು 36 ರಿಂದ 39 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದು, ಜನರು ಬಿಸಿಲಿನ ಹವೆಯಿಂದ ತತ್ತರಿಸಿದ್ದರು.