Photos: ಗುಂಡಿನ ಮೊರೆತದ ನಡುವೆಯೂ ಕೇಳುವ ಬಿಕ್ಕಳಿಕೆ! ಉಕ್ರೇನ್‌ನ ಹೃದಯ ಹಿಂಡುವ ಕ್ಷಣಗಳಿವು…

ಯುದ್ಧ ಎಂದರೆ ಬರೀ ಎರಡು ದೇಶಗಳ ಶಕ್ತಿ ಪ್ರದರ್ಶನವಷ್ಟೇ ಅಲ್ಲ ದುರ್ಬಲ ರಾಷ್ಟ್ರದ ಅವನತಿ ಕೂಡ! ಇದೀಗ ರಷ್ಯಾ ದಾಳಿಯಿಂದ ಉಕ್ರೇನ್ ತತ್ತರಿಸಿ ಹೋಗಿದೆ. ಉಕ್ರೇನ್ನ ಪ್ರತಿ ಗಲ್ಲಿ ಗಲ್ಲಿಯಲ್ಲೂ ಕಣ್ಣೀರ ಕೋಡಿ ಹರಿಯುತ್ತಿದೆ. ಪ್ರತಿ ಕ್ಷಣ ಅಲ್ಲಿನ ಜನರ ಬಿಕ್ಕಳಿಕೆಯ ಸದ್ದು ಕೇಳಿಸುತ್ತಿದೆ. ಆ ಹೃದಯ ವಿದ್ರಾವಕ ಕ್ಷಣಗಳನ್ನು ನೀವೂ ಒಮ್ಮೆ ನೋಡಿ. ಯುದ್ಧ ಇಲ್ಲಿಗೆ ಮುಗಿಯಲಿ ಅಂತ ನೀವೂ ಪ್ರಾರ್ಥಿಸಿ…

First published:

  • 18

    Photos: ಗುಂಡಿನ ಮೊರೆತದ ನಡುವೆಯೂ ಕೇಳುವ ಬಿಕ್ಕಳಿಕೆ! ಉಕ್ರೇನ್‌ನ ಹೃದಯ ಹಿಂಡುವ ಕ್ಷಣಗಳಿವು…

    ಈತನ ಹೆಸರು ಅಲೆಕ್ಸಾಂಡರ್, ಉಕ್ರೇನ್ನ ಪ್ರಜೆ. ಅವರ ಕುಟುಂಬವು ಫೆಬ್ರವರಿ 24ರ ಬೆಳಿಗ್ಗೆ ಕೀವ್ನ ಮೆಟ್ರೋ ನಿಲ್ದಾಣದಲ್ಲಿ ಆಶ್ರಯ ಪಡೆಯುತ್ತಿದೆ. ಈ ವೇಳೆ ಆತ ತನ್ನ ಮಗನಿಗೆ ಧೈರ್ಯ ತುಂಬುತ್ತಾನೆ. (ಕೃಪೆ: Internet)

    MORE
    GALLERIES

  • 28

    Photos: ಗುಂಡಿನ ಮೊರೆತದ ನಡುವೆಯೂ ಕೇಳುವ ಬಿಕ್ಕಳಿಕೆ! ಉಕ್ರೇನ್‌ನ ಹೃದಯ ಹಿಂಡುವ ಕ್ಷಣಗಳಿವು…

    ಉಕ್ರೇನ್‌ನ ರಾಜಧಾನಿ ಕೈವ್ನಲ್ಲಿ ಬಾಂಬ್ಗಳ ಮಳೆಯಾಗುತ್ತಿರುವಂತೆ ಜನರೆಲ್ಲ ದಿಕ್ಕಾಪಾಲಾಗಿ ಹೋಗಲು ತೊಡಗಿದ್ದಾರೆ. ಕೆಲವರು ಗಡಿವರೆಗೆ ಸಾಗಿ, ಅಲ್ಲಿಂದ ತಮ್ಮ ದೇಶಕ್ಕೆ ವಾಪಸ್ಸಾಗುತ್ತಿದ್ದಾರೆ. ಹೀಗೆ ಅಗಲುವಿಕೆಯ ಸಂದರ್ಭದಲ್ಲಿ ಸೆಂಟ್ರಲ್ ಕೀವ್ನಲ್ಲಿ ಪ್ರೇಮಿಗಳು ಒಂದೆರಡು ಕ್ಷಣ ಅಪ್ಪುಗೆಯಲ್ಲಿ ತೊಡಗಿದರು. (ಕೃಪೆ: Internet)

    MORE
    GALLERIES

  • 38

    Photos: ಗುಂಡಿನ ಮೊರೆತದ ನಡುವೆಯೂ ಕೇಳುವ ಬಿಕ್ಕಳಿಕೆ! ಉಕ್ರೇನ್‌ನ ಹೃದಯ ಹಿಂಡುವ ಕ್ಷಣಗಳಿವು…

    ಈತ ಮೂಲತಃ ಉಕ್ರೇನ್ ದೇಶದ ಪ್ರಜೆ. ಆದರೆ ಅಲ್ಲಿ ಯುದ್ಧ ಆರಂಭವಾಗುತ್ತಿದ್ದಂತೆ ಅನಿವಾರ್ಯವಾಗಿ ದೇಶ ಬಿಟ್ಟು ಬಂದಿದ್ದಾನೆ. ಪಕ್ಕದ ಪೋಲೆಂಡ್ನ ಪ್ರಜೆಮಿಸ್ಲ್ನಲ್ಲಿ ವಸತಿ ಕೇಂದ್ರವನ್ನಾಗಿ ಮಾಡಿದ ರೈಲು ನಿಲ್ದಾಣದಲ್ಲಿ ಇದ್ದಾನೆ. ಈ ವೇಳೆ ತನ್ನ ಮಗಳನ್ನು ಚುಂಬಿಸುತ್ತಾನೆ. ದೇಶ ಬಿಟ್ಟ ಬೇಸರ, ಬದುಕಿ ಬಂದ ಖುಷಿ ಎರಡೂ ಆತನ ಮುಖದಲ್ಲಿದೆ. (ಕೃಪೆ: Internet)

    MORE
    GALLERIES

  • 48

    Photos: ಗುಂಡಿನ ಮೊರೆತದ ನಡುವೆಯೂ ಕೇಳುವ ಬಿಕ್ಕಳಿಕೆ! ಉಕ್ರೇನ್‌ನ ಹೃದಯ ಹಿಂಡುವ ಕ್ಷಣಗಳಿವು…

    24 ಫೆಬ್ರವರಿ 2022 ರಂದು ಅದೆಷ್ಟೋ ಜನರು ಉಕ್ರೇನ್ ಗಡಿದಾಟಿ ಬೇರೆ ಬೇರೆ ದೇಶಗಳಿಗೆ ಪಲಾಯನ ಮಾಡಿದರು. ಹೀಗೆ ತನ್ನ ಸಂಬಂಧಿಕರೊಂದಿಗೆ ಗಡಿ ದಾಟಿದ ಹುಡುಗನಿಗೆ ಆತನ ತಂದೆಯೊಬ್ಬ ಚುಂಬಿಸಿ, ಬೀಳ್ಕೊಡುತ್ತಿದ್ದಾನೆ. (ಕೃಪೆ: Internet)

    MORE
    GALLERIES

  • 58

    Photos: ಗುಂಡಿನ ಮೊರೆತದ ನಡುವೆಯೂ ಕೇಳುವ ಬಿಕ್ಕಳಿಕೆ! ಉಕ್ರೇನ್‌ನ ಹೃದಯ ಹಿಂಡುವ ಕ್ಷಣಗಳಿವು…

    ಉಕ್ರೇನ್‌ನ ಕೈವ್ ನಗರದಲ್ಲಿ ಸೈರನ್ಗಳು ಮೊಳಗುತ್ತವೆ. ಇದು ರಷ್ಯಾ ಸೇನೆ ನಡೆಸುವ ಹೊಸ ದಾಳಿಗಳನ್ನು ಸೂಚಿಸುತ್ತದೆ. ಆಗ ಭಯಗೊಂಡ ಜನರೆಲ್ಲ ಕಟ್ಟಡದ ನೆಲಮಾಳಿಗೆಯಲ್ಲಿ ಆಶ್ರಯ ಪಡೆಯುತ್ತಾರೆ. (ಕೃಪೆ: Internet)

    MORE
    GALLERIES

  • 68

    Photos: ಗುಂಡಿನ ಮೊರೆತದ ನಡುವೆಯೂ ಕೇಳುವ ಬಿಕ್ಕಳಿಕೆ! ಉಕ್ರೇನ್‌ನ ಹೃದಯ ಹಿಂಡುವ ಕ್ಷಣಗಳಿವು…

    ರಷ್ಯಾ ದಾಳಿ ಆರಂಭವಾದಾಗಿನಿಂದ ಉಕ್ರೇನ್ ನಿವಾಸಿಗಳ ಬದುಕು ಬೀದಿಗೆ ಬಂದಂತಾಗಿದೆ. ಶುಕ್ರವಾರ 25 ಫೆಬ್ರವರಿ 2022 ರಂದು ಉಕ್ರೇನ್ನ ಕೈವ್ ನಗರದಲ್ಲಿ ರಷ್ಯಾ ಸೇನೆ ಸತತವಾಗಿ ರಾಕೆಟ್ ದಾಳಿ ನಡೆಸಿತು. ಈ ದಾಳಿಯ ನಂತರ ಉಕ್ರೇನ್ನ ನಟಾಲಿ ಸೆವ್ರಿಕೋವಾ ಎಂಬುವರು ತನ್ನ ಮನೆಯ ಪಕ್ಕದಲ್ಲಿ ನಿಂತು ದುಃಖಿಸುತ್ತಿದ್ದಾರೆ. (ಕೃಪೆ: Internet)

    MORE
    GALLERIES

  • 78

    Photos: ಗುಂಡಿನ ಮೊರೆತದ ನಡುವೆಯೂ ಕೇಳುವ ಬಿಕ್ಕಳಿಕೆ! ಉಕ್ರೇನ್‌ನ ಹೃದಯ ಹಿಂಡುವ ಕ್ಷಣಗಳಿವು…

    24 ಫೆಬ್ರವರಿ 2022 ರಂದು ಪೂರ್ವ ಉಕ್ರೇನ್‌ನ ಚುಗುವಿವ್ ಮೇಲೆ ರಷ್ಯಾ ಸೇನೆ ಬಾಂಬ್ ದಾಳಿ ನಡೆಸಿತು. ಈ ದಾಳಿಯಲ್ಲಿ ಅದೆಷ್ಟೋ ಮಂದಿ ಗಾಯಕ್ಕೆ ಒಳಗಾದರು. ಈ ಪೈಕಿ ಇವರೂ ಒಬ್ಬರು. ಬಾಂಬ್ ದಾಳಿಯ ನಂತರ ಗಾಯಗೊಂಡ ಈ ಮಹಿಳೆ ದಿಕ್ಕು ತೋಚದೇ ಆಸ್ಪತ್ರೆಯ ಹೊರಗೆ ನಿಂತಿದ್ದಾರೆ. (ಕೃಪೆ: Internet)

    MORE
    GALLERIES

  • 88

    Photos: ಗುಂಡಿನ ಮೊರೆತದ ನಡುವೆಯೂ ಕೇಳುವ ಬಿಕ್ಕಳಿಕೆ! ಉಕ್ರೇನ್‌ನ ಹೃದಯ ಹಿಂಡುವ ಕ್ಷಣಗಳಿವು…

    24 ಫೆಬ್ರವರಿ 2022 ರಂದು ಉಕ್ರೇನ್ ಗಡಿದಾಟಿ, ಓಡಿ ಬಂದಿದ್ದಾಳೆ. ಸದ್ಯ ಪೋಲೆಂಡ್ನ ಮೆಡಿಕಾದಲ್ಲಿ ಆಶ್ರಯ ಪಡೆದಿದ್ದಾಳೆ. ಈಗ ತನ್ನ ದೇಶ ಹಾಗೂ ತನ್ನ ಸ್ಥಿತಿಯನ್ನು ನೆನೆದು ಬಿಕ್ಕಳಿಸುತ್ತಿದ್ದಾಳೆ. (ಕೃಪೆ: Internet)

    MORE
    GALLERIES