ಚಾಲಕರೇ ಗಮನಿಸಿ...ಒಂದು ವೇಳೆ ನೀವು ಬೈಕ್ ಅಥವಾ ಇತರೆ ವಾಹನಗಳ ಚಾಲನಾ ಪರವಾನಗಿಯನ್ನು ನವೀಕರಿಸದಿದ್ದರೆ, ಇನ್ನು ಮುಂದೆ ಲೈಸೆನ್ಸ್ ಪಡೆಯುವುದು ಅಷ್ಟು ಸುಲಭವಲ್ಲ. ಏಕೆಂದರೆ...
2/ 12
ಕೇಂದ್ರ ಸರ್ಕಾರದ ಹೊಸ ವಾಹನ ಕಾಯ್ದೆ ಪ್ರಕಾರ ಒಂದು ವರ್ಷಕ್ಕೂ ಹೆಚ್ಚು ಕಾಲ ಚಾಲನಾ ಪರವಾನಗಿ ನವೀಕರಿಸದಿದ್ದರೆ ನೀವು ಮತ್ತೆ ಡ್ರೈವಿಂಗ್ ಟೆಸ್ಟ್ಗೆ ಒಳಗಾಗಬೇಕಾಗುತ್ತದೆ.
3/ 12
ಒಂದು ವರ್ಷದವರೆಗೂ ಲೈಸೆನ್ಸ್ ರಿನಿವ್ಯೂ ಮಾಡದಿದ್ದರೆ ಅವರನ್ನು ಹೊಸ ಚಾಲಕರೆಂದು ಪರಿಗಣಿಸಲಾಗುತ್ತದೆ. ಅಲ್ಲದೆ 20 ಅಂಕಗಳ ಪರೀಕ್ಷೆಯನ್ನು ಎದುರಿಸಿ, ಹೊಸ ಲೈಸೆನ್ಸ್ಗಾಗಿ 30 ದಿನಗಳ ಕಾಲ ಕಾಯಬೇಕಾಗುತ್ತದೆ ಎಂದು ತಿಳಿಸಲಾಗಿದೆ.
4/ 12
ಈ ಒಂದು ವರ್ಷದೊಳಗೆ ಪರವಾನಗಿ ಅವಧಿ ಮುಗಿದು ಚಾಲನೆ ವೇಳೆ ಸಿಕ್ಕಿ ಬಿದ್ದರೆ ಡ್ರೈವರ್ಗೆ 500 ರೂ. ದಂಡವನ್ನು ವಿಧಿಸಲಾಗುತ್ತದೆ. ಅದರೊಂದಿಗೆ ಲೈಸೆನ್ಸ್ ಪಡೆಯಲು ಒಂದು ತಿಂಗಳ ಸಮಯವಕಾಶ ನೀಡಲಾಗುತ್ತದೆ ಎಂದು ತಿಳಿಸಿದೆ.
5/ 12
ಈ ಬಗ್ಗೆ ಮಾತನಾಡಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಭಯ್ ದೇಶಪಾಂಡೆ, ನಾವು ಮೋಟಾರು ವಾಹನ (ತಿದ್ದುಪಡಿ) ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗುತ್ತಿದ್ದೇವೆ. ಈಗಾಗಲೇ ಮಹಾರಾಷ್ಟ್ರದ 50 ಆರ್ಟಿಒಗಳಲ್ಲಿ ಹೊಸ ಆದೇಶವನ್ನು ಕಾರ್ಯಗತಗೊಳಿಸಲು ಪ್ರಾರಂಭಿಸಿದೆ.
6/ 12
ಒಂದು ವೇಳೆ ಚಾಲಕರು ಲೆಸೆನ್ಸ್ ಅನ್ನು ವರ್ಷಗಳ ಕಾಲ ನವೀಕರಿಸದಿದ್ದರೆ, ಅವರಿಗೆ ಯಾವುದೇ ಸ್ಪೆಷಲ್ ವಿಶೇಷ ಸೌಲಭ್ಯಗಳಿರುವುದಿಲ್ಲ. ಹೊಸ ಚಾಲಕರಂತೆ ಪರವಾನಗಿಗಾಗಿ ಕ್ಯೂ ನಿಲ್ಲಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
7/ 12
ಹಾಗೆಯೇ, ಯಾರಾದರೂ 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, 40 ವರ್ಷ ತುಂಬುವವರೆಗೆ ಚಾಲನಾ ಪರವಾನಗಿ ನೀಡಲಾಗುತ್ತದೆ.
8/ 12
ಅದೇ ರೀತಿ, 30 ವರ್ಷ ಮತ್ತು 50 ವರ್ಷದ ಒಳಗಿರುವವರಿಗೆ 10 ವರ್ಷಗಳವರೆಗೆ ಪರವಾನಗಿ ನೀಡಲಾಗುತ್ತದೆ.
9/ 12
ಇನ್ನು 50 ಮತ್ತು 55 ವರ್ಷದ ಒಳಗಿನವರಿಗೆ 60 ವರ್ಷದವರೆಗೆ ಪರವಾನಗಿ ನೀಡಲಾಗುತ್ತದೆ.
10/ 12
55 ವರ್ಷಕ್ಕಿಂತ ಮೇಲ್ಪಟ್ಟವರಿಗೆ 5 ವರ್ಷಗಳ ಕಾಲ ಪರವಾನಗಿ ನೀಡಲಾಗುತ್ತದೆ ಎಂದು ಹೊಸ ಕಾನೂನಿನಲ್ಲಿ ತಿಳಿಸಲಾಗಿದೆ.
11/ 12
ಇನ್ನು ಕಮರ್ಷಿಯಲ್ ಡ್ರೈವಿಂಗ್ ಲೈಸೆನ್ಸ್ ಪ್ರತಿ 5 ವರ್ಷಗಳಿಗೊಮ್ಮೆ ನವೀಕರಿಸಬೇಕು ಎಂದು ಹೇಳಲಾಗಿದೆ.
12/ 12
ಈ ಹೊಸ ನಿಯಮವು ಶೀಘ್ರದಲ್ಲೇ ಎಲ್ಲಾ ರಾಜ್ಯಗಳಲ್ಲೂ ಜಾರಿಗೆ ಬರಲಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಅಭಯ್ ದೇಶಪಾಂಡೆ ತಿಳಿಸಿದ್ದಾರೆ.