IARI: ಭತ್ತದ ಗಿಡ 'ಕುಬ್ಜ' ಆಗುತ್ತಿರುವುದು ಏಕೆ? ನಿಗೂಢ ರೋಗ ಪತ್ತೆ ಹಚ್ಚಿದ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ!

ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕ ಎಕೆ ಸಿಂಗ್ ಮಾತನಾಡಿ ಆರ್​ಎನ್​ಎ ಪ್ರತ್ಯೇಕಿಸಲಾದ ಸೋಂಕಿತ ಸಸ್ಯಗಳು ಮತ್ತು ವೆಕ್ಟರ್ ಕೀಟಗಳ ದೇಹ ಇವೆರಡರಲ್ಲೂ ವೈರಸ್ ಇರುವುದು ಪತ್ತೆಯಾಗಿದೆ. ಆದರೆ ಸೋಂಕಿತ ಸಸ್ಯಗಳಿಂದ ಸಂಗ್ರಹಿಸಿದ ಬೀಜಗಳಲ್ಲಿ ವೈರಸ್ ಕಂಡುಬಂದಿಲ್ಲ. ವೈರಸ್ ನಿರ್ದಿಷ್ಟವಾಗಿ ಸಸ್ಯದ ಫ್ಲೋಯಮ್ (ಸಕ್ಕರೆ ಮತ್ತು ಸಾವಯವ ಪೋಷಕಾಂಶಗಳನ್ನು ಎಲೆಗಳಿಂದ ಇತರ ಭಾಗಗಳಿಗೆ ಸಾಗಿಸುವ ಸಸ್ಯ ಅಂಗಾಂಶ) ಮೇಲೆ ಪರಿಣಾಮ ಬೀರುತ್ತದೆ ಮತ್ತು ಬೀಜಗಳು ಅಥವಾ ಧಾನ್ಯಗಳಿಂದ ಹರಡುವುದಿಲ್ಲ ಎಂದು ಹೇಳಿದ್ದಾರೆ.

First published: