ವಾಯುಪಡೆಯಲ್ಲಿ ಹಲವು ಪ್ರಥಮಗಳ ಕೀರ್ತಿ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿರುವ ಶಾಲಿಜಾ, 15ಕ್ಕೂ ಹೆಚ್ಚು ವರ್ಷಗಳ ಅನುಭವಗಳನ್ನು ಐಎಎಫ್‌ನಲ್ಲಿ ಪಡೆದಿದ್ದಾರೆ. ಪಂಜಾಬ್‌ನ ಲೂಧಿಯಾನದಲ್ಲಿ ಜನಿಸಿದ ಇವರು 2003ರಲ್ಲಿ ಎಚ್‌ಎಎಲ್ ಎಚ್‌ಪಿಟಿ-32 ದೀಪಕ್ ಅನ್ನು ಮೊದಲ ಬಾರಿಗೆ ಏಕಾಂಗಿಯಾಗಿ ಹಾರಿಸಿದ್ದರು. 2003ರಲ್ಲಿ ಐಎಎಫ್‌ನಲ್ಲಿ ಫ್ಲೈಯಿಂಗ್ ಆಫೀಸರ್ ಆಗಿ ನೇಮಕಗೊಂಡು 2005ರಲ್ಲಿ ಫ್ಲೈಟ್ ಲೆಫ್ಟಿನೆಂಟ್ ಹಾಗೂ 2009ರಲ್ಲಿ ಸ್ಕ್ವಾಡ್ರನ್ ಲೀಡರ್ ಆಗಿ ಬಡ್ತಿ ಪಡೆದಿದ್ದರು.