ಹೈದರಾಬಾದ್ ಬಿರಿಯಾನಿ ನಾನ್ವೆಜ್ ಪ್ರಿಯರಿಗೆ ಅಚ್ಚುಮೆಚ್ಚಿನ ತಾಣ. ಇಲ್ಲಿನ ವಿಶೇಷ ದಮ್ ಬಿರಿಯಾನಿ ನಗರದ ಯಾವುದೇ ರಸ್ತೆ ಬದಿಯ ಹೋಟೆಲ್ಗಳಿಂದ ಹಿಡಿದು ನಗರದ ಮೂಲೆ ಮೂಲೆಗಳಲ್ಲಿ ಇರುವ ದೊಡ್ಡ ರೆಸ್ಟೋರೆಂಟ್ಗಳಲ್ಲಿ ಸಿಗುತ್ತದೆ. ಇತ್ತೀಚೆಗೆ ಅರುಣ್ ಎಂಬ ವ್ಯಕ್ತಿ ಸ್ಥಳೀಯವಾಗಿ ಪ್ರಸಿದ್ಧವಾಗಿದ್ದ ರೆಸ್ಟೋರೆಂಟ್‌ನಿಂದ ಚಿಕನ್ ಬಿರಿಯಾನಿ ಆರ್ಡರ್ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)
ತಾನೂ ಕೆಲಸ ಮಾಡುವ ಸ್ಥಳಕ್ಕೆ ಒಂದು ಪ್ಲೇಟ್ ಬಿರಿಯಾನಿ ಆರ್ಡರ್ ಪಾರ್ಸಲ್ ತೆಗೆದುಕೊಂಡು ಹೋಗಿದ್ದ ಆತನಿಕೆ, ಅದರನ್ನು ತೆಗೆದಾಗ ಅಘಾತವಾಗಿದೆ. ಬಿರಿಯಾನಿ ಪಾಕೆಟ್ನಿಂದ ಜೀವಂತವಾದ ಜಿರಳೆ ಹೊರ ಬಂದಿದೆ. ಬಿರಿಯಾನಿಯಲ್ಲಿ ಜಿರಳೆಯನ್ನು ಕಂಡ ಕೂಡಲೇ ರೆಸ್ಟೋರೆಂಟ್ನ ಮ್ಯಾನೇಜರ್ಗೆ ಕರೆ ಮಾಡಿ ದೂರು ನೀಡಿದ್ದಾರೆ. ನಂತರ ಗ್ರಾಹಕರ ಆಯೋಗಕ್ಕೂ ದೂರು ನೀಡಿದ್ದಾರೆ. ಈ ಕುರಿತು ತನಿಖೆ ನಡೆಸಿದ ರಾಜ್ಯ ಗ್ರಾಹಕ ಆಯೋಗವು ಗ್ರಾಹಕನಿಗೆ 20,000 ರೂಗಳನ್ನು ಪರಿಹಾರವಾಗಿ ನೀಡುವಂತೆ ಆದೇಶಿಸಿದೆ. (ಸಾಂದರ್ಭಿಕ ಚಿತ್ರ)
ಅರುಣ್ 2021 ರಲ್ಲಿ ರೆಸ್ಟೋರೆಂಟ್‌ನಿಂದ ಬಿರಿಯಾನಿ ಪಾರ್ಸೆಲ್ ತೆಗೆದುಕೊಂಡಿದ್ದರು. ಅದನ್ನು ತಮ್ಮ ಕಚೇರಿಗೆ ತೆಗೆದುಕೊಂಡು ಹೋಗಿ ತಿನ್ನಲು ಪಾಕೆಟ್ ತೆಗೆದಿದ್ದಾರೆ. ಆದರೆ ಬಿರಿಯಾನಿ ಪಾಕೆಟ್ ತೆಗೆಯುತ್ತಿದ್ದಂತೆ ಬಿರಿಯಾನಿ ಒಳಗೆ ಜೀವಂತವಾಗಿ ಓಡಾಡುತ್ತಿರುವುದು ಕಂಡು ಬಂದಿದೆ. ತಕ್ಷಣ ಅರುಣ್ ವಿಡಿಯೋ ಮಾಡಿ, ರೆಸ್ಟೋರೆಂಟ್ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)
ರೆಸ್ಟೋರೆಂಟ್ ಮ್ಯಾನೇಜರ್ ಈ ಘಟನೆಗೆ ಕ್ಷಮೆಯಾಚಿಸಿ, ಹೋಟೆಲ್ನಲ್ಲಿ ಜಿರಳೆಗಳು ನಿಯಂತ್ರಣ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಆ ರೀತಿ ನಡೆಯಲು ಸಾಧ್ಯವಿಲ್ಲ. ಆದರೆ ಅರುಣ್ ಆತ ಕ್ಷಮಾಪಣೆಯನ್ನು ಸ್ವೀಕರಿಸಲಿಲ್ಲ. ಏಕೆಂದರೆ ಅರುಣ್ಗೆ ಈ ಘಟನೆಯಿಂದ ಹಸಿವಿನಿಂದ ದಿನ ಕಳೆಯುವಂತಾಗಿತ್ತು. ಜೊತೆಗೆ ಊಟದಲ್ಲಿ ಜಿರಳೆ ಕಂಡು ವಾಂತಿ ಮಾಡಿಕೊಂಡಿದ್ದರು. (ಸಾಂದರ್ಭಿಕ ಚಿತ್ರ)
ವಿಚಾರಣೆ ನಡೆಸಿದ ಗ್ರಾಹಕ ರಕ್ಷಣ ಆಯೋಗವು ರೆಸ್ಟೋರೆಂಟ್ ಮಾಲೀಕರನ್ನು ತಪ್ಪಿತಸ್ಥರೆಂದು ಘೋಷಿಸಿತು. " ಹೋಟೆಲ್ ಮಾಲೀಕರು ನೈರ್ಮಲ್ಯ ಮಾನದಂಡಗಳನ್ನು ಅನುಸರಿಸಲು ವಿಫಲರಾಗಿದ್ದಾರೆ. ಜಿರಳೆ ಬಿರಿಯಾನಿಯೊಳಗಿಂದ ತೆವಳುತ್ತಾ ಬಂದಿದ್ದು ವಿಡಿಯೋದಿಂದ ಸ್ಪಷ್ಟವಾಗಿದೆ. ಆರೋಗ್ಯಕರ ಆಹಾರ ನೀಡುವಲ್ಲಿ ಹೋಟೆಲ್ ಮಾಲೀಕರು ನಿರ್ಲಕ್ಷ್ಯ ವಹಿಸಿದ್ದಾರೆ '' ಎಂದು ಆಯೋಗ ಹೇಳಿದ್ದು, ಪಾವತಿಸಿದ ಶುಲ್ಕಕ್ಕೆ ಗುಣಮಟ್ಟದ ಉತ್ಪನ್ನ ಅಥವಾ ಸೇವೆಯನ್ನು ಪಡೆಯುವುದು ಪ್ರತಿಯೊಬ್ಬ ಗ್ರಾಹಕರ ಮೂಲಭೂತ ಹಕ್ಕು ಎಂದು ಹೇಳಿದೆ. (ಸಾಂದರ್ಭಿಕ ಚಿತ್ರ)