Hyderabad: ಪಾರ್ಸೆಲ್ ನೀಡಲು ಹೋದಾಗ ನಾಯಿ ದಾಳಿ! 3ನೇ ಮಹಡಿಯಿಂದ ಬಿದ್ದು ಡೆಲಿವರಿ ಬಾಯ್ ಗಂಭೀರ
ಹೈದರಾಬಾದ್: ಪಾರ್ಸೆಲ್ ನೀಡಲು ಹೋಗಿದ್ದ ಡೆಲಿವರಿ ಬಾಯ್ ಒಬ್ಬರನ್ನು ಗ್ರಾಹಕರ ನಾಯಿ ಅಟ್ಟಾಡಿಸಿಕೊಂಡು ಬಂದ ಪರಿಣಾಮ ತನ್ನನ್ನು ತಾನು ರಕ್ಷಿಸಿಕೊಳ್ಳಲು ಯತ್ನಿಸಿದಾಗ 3ನೇ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಹೈದರಾಬಾದ್‌ನ ಪಂಚವಟಿ ಕಾಲೋನಿಯಲ್ಲಿರುವ ಶ್ರೀನಿಧಿ ಹೈಟ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಡೆಲಿವರಿ ಬಾಯ್ ಮೂರನೇ ಮಹಡಿಗೆ ಆರ್ಡರ್ ಮಾಡಿದ್ದ ಹಾಸಿಗೆ ನೀಡಲು ಹೋದಾಗ ಡಾಬರ್‌ಮೆನ್ ನಾಯಿ ಅಟ್ಟಾಡಿಸಿಕೊಂಡು ಬಂದಿದೆ.
2/ 7
ಹೀಗಾಗಿ ಮೊದಲೇ ಬೃಹತ್ ಗಾತ್ರದ ನಾಯಿಯ ಅಟ್ಟಹಾಸ ಕಂಡು ಭೀತಿಗೊಂಡ ಡೆಲಿವರಿ ಬಾಯ್ ಭಯದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಕಟ್ಟಡದ ಮೂರನೇ ಮಹಡಿಯಿಂದ ಜಿಗಿದಿದ್ದಾರೆ.
3/ 7
ಪೋಲೀಸರು ಹೇಳುವ ಪ್ರಕಾರ, ಡೆಲಿವರಿ ಬಾಯ್ ಇಲ್ಯಾಸ್ (30 ವರ್ಷ) ಹಾಸಿಗೆ ವಿತರಿಸಲು ಮನೆಗೆ ಹೋದಾಗ ಗ್ರಾಹಕರ ಮನೆಯ ನಾಯಿ ಬಾಗಿಲ ಬಳಿ ಬೊಗಳಲು ಆರಂಭಿಸಿದೆ.
4/ 7
ಬಾಗಿಲು ಅದಾಗಲೇ ಅರ್ಧ ತೆರೆದಿದ್ದರಿಂದ ನಾಯಿ ಇಲ್ಯಾಸ್‌ನನ್ನು ಅಟ್ಟಾಡಿಸಿಕೊಂಡು ಬಂದಿದ್ದು, ಅದರಿಂದ ಪಾರಾಗಲು ಓಡಿ ಬಂದ ಇಲ್ಯಾಸ್ ಕಾಲು ಜಾರಿ ಕಟ್ಟಡದಿಂದ ಬಿದ್ದು ಗಂಭೀರ ಗಾಯಕ್ಕೊಳಗಾಗಿದ್ದಾರೆ.
5/ 7
ಡೆಲಿವರಿ ಬಾಯ್ ಇಲ್ಯಾಸ್ ಕಟ್ಟಡದಿಂದ ಕೆಳಗೆ ಬಿದ್ದ ತಕ್ಷಣ ಮನೆಯ ಯಜಮಾನ ಮತ್ತು ನೆರೆಹೊರೆಯವರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
6/ 7
ಘಟನೆ ಸಂಬಂಧ ರಾಯದುರ್ಗಂ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 289 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
7/ 7
ಪ್ರಕರಣ ಸಂಬಂಧ ಸ್ಥಳೀಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಅತ್ತ ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್ (ಟಿಜಿಪಿಡಬ್ಲ್ಯುಯು) ಪ್ರಕಟಣೆಯಲ್ಲಿ ನಾಯಿ ಮಾಲೀಕರು ಡೆಲಿವರಿ ಬಾಯ್‌ನ ಚಿಕಿತ್ಸೆಯ ವೆಚ್ಚವನ್ನು ಭರಿಸಬೇಕೆಂದು ಒತ್ತಾಯಿಸಿದ್ದಾರೆ.
First published:
17