ಆರೋಪಿ ವಿಟೊ ಕ್ಯಾಂಗಿನಿ ಪತ್ನಿಯನ್ನು ಕೊಂದು ಮರುದಿನ ಬೆಳಿಗ್ಗೆ ಉಪಾಹಾರವನ್ನು ಸೇವಿಸಿದ್ದಾನೆ, ನಂತರ ನಾಯಿಯನ್ನು ವಾಕ್ ಕರೆದುಕೊಂಡು ಹೋಗಿದ್ದಾನೆ. ಇದಾದ ನಂತರ ಮಧ್ಯಾಹ್ನ ಮತ್ತೆ ತನ್ನ ನಾಯಿಯನ್ನು ವಾಕಿಂಗ್ಗೆ ಕರೆದುಕೊಂಡು ಹೋಗಿದ್ದಾಗ ಪಕ್ಕದ ಮನೆಯವರಿಗೆ ಕೊಲೆಗೈದ ವಿಷಯ ತಿಳಿಸಿದ್ದಾನೆ. ಮಾತ್ರವಲ್ಲದೆ ಪೊಲೀಸರಿಗೆ ಈ ವಿಷಯ ತಿಳಿಸುವಂತೆ ನೆರೆಹೊರೆಯವರನ್ನು ಕೇಳಿದ್ದಾನೆ. ಆದರೆ, ನೆರೆಹೊರೆಯವರು ಘಟನೆಯಲ್ಲಿ ಭಾಗಿಯಾಗಲು ಬಯಸುವುದಿಲ್ಲ ಎಂದು ಆತನ ಬಳಿಯೇ ಪೊಲೀದರಿಗೆ ಕರೆ ಮಾಡುವಂತೆ ಹೇಳಿದ್ದಾರೆ.
ಕೊನೆಗೆ ಆರೋಪಿ ವಿಟೊ ಕ್ಯಾಂಗಿನಿ ಹೆಂಡತಿ ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್ಗೆ ಕರೆ ಮಾಡಿ, ಮತ್ತೆ ಆಕೆಯನ್ನು ನೀವು ನೋಡುವುದಿಲ್ಲ ಎಂದು ಮಾಲೀಕನಿಗೆ ತಿಳಿಸುತ್ತಾನೆ. ನಂತರ ರೆಸ್ಟೋರೆಂಟ್ ಮಾಲೀಕ ಪೊಲೀಸರಿಗೆ ಕರೆ ಮಾಡುತ್ತಾನೆ. ಮಾಲೀಕ ಮಾಹಿತಿ ಮೇರೆಗೆ ಅಧಿಕಾರಿಗಳು ಶಂಕಿತನ ಮನೆಗೆ ಭೇಟಿ ನೀಡುತ್ತಾರೆ. ಈ ವೇಳೆ ಪತ್ನಿಯ ಶವದೊಂದಿಗೆ ಆರೋಪಿ ವಿಟೊ ಕ್ಯಾಂಗಿನಿ ಇದ್ದನು. ಪೊಲೀಸರು ಆತನನ್ನು ಬಂಧಿಸುತ್ತಾರೆ.