ಅಷ್ಟೇ ಅಲ್ಲದೆ ಮದುವೆಯಲ್ಲಿ ತಮ್ಮ ಮಗಳಿಗೂ ಎಂಟು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಇತರೆ ವಸ್ತುಗಳನ್ನು ಕೊಟ್ಟು ಕಳುಹಿಸಲಾಗಿತ್ತು. ಆದ್ರೆ ದುರಾಸೆಯ ವರನ ಕುಟುಂಬಸ್ಥರು ಸೊಸೆ ಮನೆಗೆ ಬಂದಾಗ ಇನ್ನೂ 25 ಲಕ್ಷ ರೂಪಾಯಿ ತರುವಂತೆ ಪೀಡಿಸತೊಡಗಿದ್ದಾರೆ. ತನ್ನ ಅಮ್ಮನ ಜೊತೆ ಸೇರಿದ ಪತಿ ಕೂಡ ಸಂತ್ರಸ್ತೆಗೆ ಮೊದಲ ರಾತ್ರಿಯಿಂದಲೇ ಹಣ ತರುವಂತೆ ಬೇಡಿಕೆ ಇಟ್ಟಿದ್ದಾನೆ. ಅಲ್ಲದೆ ಪತಿ ತನ್ನಿಂದ ಮದುವೆಯಾದ ದಿನದಿಂದಲೂ ದೂರ ವಾಸಿಸುತ್ತಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾರೆ.