ಕಳೆದ ಬುಧವಾರ ಎಕೆಜಿ ನಗರದ ಗೋಪಾಲ್ ಮಿಸ್ತ್ರಿ ಚಾಲ್‌ನಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಸುರೇಶ್ ವಿಶ್ವಕರ್ಮ ಎಂದು ಗುರುತಿಸಲಾಗಿದೆ. ಕೃತ್ಯವನ್ನು ಆರೋಪಿ ಒಪ್ಪಿಕೊಂಡಿರುವುದರಿಂದ ಆತನನ್ನು ಪೊಲೀಸರು ಬಂಧಿಸಿದ್ದಾರೆ.
2/ 8
ಬುಧವಾರ ರಾತ್ರಿ 11 ಗಂಟೆಯ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಬಂದಾಗ ಆತನ ಮೂರು ವರ್ಷದ ಮಗು ಅಳುತ್ತಿತ್ತು. ಆದರೆ ಪತ್ನಿ ಮಗುವಿನೆಡೆಗೆ ಗಮನ ಕೊಡದೆ ಮೊಬೈಲ್‌ನಲ್ಲಿ ಚಾಟ್‌ನಲ್ಲಿ ಬ್ಯುಸಿಯಾಗಿದ್ದನ್ನು ಕಂಡು ಆತನಿಗೆ ಸಿಟ್ಟು ಬಂದಿದೆ.
3/ 8
ಈ ವೇಳೆ ಆತ ಹೆಂಡತಿಯ ಜೊತೆ ವಾದಕ್ಕಿಳಿದಿದ್ದು, ಮೊಬೈಲ್ ಸೈಡ್‌ಗಿಟ್ಟು ಮಗುವನ್ನು ಸಮಾಧಾನ ಮಾಡೋಕೆ ಆಗಲ್ವಾ ಎಂದೆಲ್ಲ ಬೈದಿದ್ದಾನೆ. ಆಗ ಇಬ್ಬರ ನಡುವೆ ಜಗಳ ತಾರಕಕ್ಕೇರಿದೆ.
4/ 8
ಜಗಳ ಜೋರಾದಾಗ ತಾಳ್ಮೆ ಕಳೆದುಕೊಂಡ ಸುರೇಶ್ ತನ್ನ ಕೈಲಿದ್ದ ಕೆಲಸದ ಕತ್ತರಿಯಿಂದ ಆಕೆಯ ಕುತ್ತಿಗೆಗೆ ತಿವಿದಿದ್ದಾನೆ. ಆಗ ಆಕೆ ಅಲ್ಲೇ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದಾಳೆ.
5/ 8
ಕೂಡಲೇ ಆತ ನೆರೆಹೊರೆಯವರನ್ನು ಕರೆದಿದ್ದು, ತನ್ನ ಹೆಂಡತಿಗೆ ಆಕೆಯ ಗೆಳೆಯ ಕುತ್ತಿಗೆಗೆ ತಿವಿದು ಪರಾರಿಯಾಗಿದ್ದಾನೆ ಎಂದು ಕಥೆ ಕಟ್ಟಿದ್ದಾನೆ. ಬಳಿಕ ಸ್ಥಳೀಯರೆಲ್ಲ ಸೇರಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಆಕೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ.
6/ 8
ಸುರೇಶ್ ಬಡಗಿ ಕೆಲಸ ಮಾಡ್ತಿರೋದ್ರಿಂದ ಪ್ರತಿದಿನ ತಡವಾಗಿ ರಾತ್ರಿ ಮನೆಗೆ ಬರುತ್ತಾನೆ. ಅವನು ಮನೆಯಲ್ಲಿ ಇಲ್ಲದ ವೇಳೆ ಆತನ ಸ್ನೇಹಿತ ಮನೆಗೆ ಬಂದು ಪತ್ನಿಯನ್ನು ಭೇಟಿಯಾಗಿ ಹೋಗುತ್ತಿದ್ದ ಎಂದು ನೆರೆಹೊರೆಯವರು ಆತನಿಗೆ ಈ ಹಿಂದೆಯೇ ಹಲವಾರು ಬಾರಿ ಹೇಳಿದ್ದರು.
7/ 8
ಮೊನ್ನೆಯೂ ಕೂಡ ಸುರೇಶ್ ಮನೆಗೆ ಬಂದಾಗ ಪತ್ನಿ ಫೋನ್‌ನಲ್ಲಿ ಬ್ಯುಸಿಯಾಗಿದ್ದನ್ನು ಕಂಡು ಫೋನ್ ಕಿತ್ತುಕೊಂಡಿದ್ದಾನೆ. ಆಗ ಆಕೆ ಗೆಳೆಯನ ಜೊತೆಯೇ ಮಾತನಾಡುತ್ತಿರುವುದು ತಿಳಿದು ಆತನಿಗೆ ಸಿಟ್ಟು ನೆತ್ತಿಗೇರಿದೆ.
8/ 8
ಘಟನೆ ಸಂಬಂಧ ಶಾಹುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾದ ಆಕೆಯ ಸ್ನೇಹಿತನನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಇತ್ತ ಪತ್ನಿಯನ್ನು ಕೊಂದಾತನನ್ನು ಬಂಧಿಸಲಾಗಿದೆ.
First published:
18
Crime News: ಗಂಡ ಮನೆಯಲ್ಲಿ ಇಲ್ಲದ ವೇಳೆ ಗೆಳೆಯನ ಜೊತೆ ಸರಸ ಸಲ್ಲಾಪ; ತಡರಾತ್ರಿ ಮನೆಗೆ ಬಂದ ಪತಿ ಮಾಡಿದ್ದೇ ಬೇರೆ!