ಆಂಧ್ರಪ್ರದೇಶದ ತಿರುಪತಿಯ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಕಾಲ್ತುಳಿತ ಸಂಭವಿಸಿದೆ. ಈ ಘಟನೆಯಲ್ಲಿ ಕನಿಷ್ಠ ಮೂವರು ಗಾಯಗೊಂಡಿದ್ದಾರೆ.
2/ 8
ಸರ್ವದರ್ಶನ ಟಿಕೆಟ್ ಪಡೆಯಲು ದೇಗುಲದ ಟಿಕೆಟ್ ಕೌಂಟರ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಸದ್ಯ ಪೊಲೀಸರು ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ
3/ 8
ತಿರುಮಲ ಶ್ರೀವಾರಿ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಬ್ರಹ್ಮೋತ್ಸವ ಹಿನ್ನಲೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಜೊತೆಗೆ ಸರ್ವಪಕ್ಷ ಟೋಕನ್‌ಗಾಗಿ ಭಕ್ತರು ಮುಗಿಬಿದ್ದರು.
4/ 8
ಭಕ್ತರು ಕಿಕ್ಕಿರಿದು ಒಬ್ಬರಿಗೊಬ್ಬರು ಮೇಲೆ ಬಿದ್ದಿರುವ ದೃಶ್ಯಗಳು ಕಂಡು ಬಂದಿದೆ. ಸಣ್ಣ ಮಕ್ಕಳು, ದೊಡ್ಡವರು ಅಳುತ್ತಿದ್ದ ದೃಶ್ಯ ಕಂಡು ಬಂತು. ಪೊಲೀಸರು ಜನಸಂದಣಿಯನ್ನು ನಿಯಂತ್ರಣಕ್ಕೆ ಹರಸಾಹಸ ನಡೆಸಿದ್ದಾರೆ.
5/ 8
ಮುಂದಿನ ಎರಡು ದಿನಗಳ ಕಾಲ ಭಾನುವಾರ ಮತ್ತು ಸೋಮವಾರದಂದು ಟೋಕನ್ ನೀಡುವುದನ್ನು ಟಿಟಿಡಿ ಸ್ಥಗಿತಗೊಳಿಸಿದೆ. ಟೋಕನ್ ತೆಗೆದುಕೊಂಡ ಭಕ್ತರು ಎರಡು ದಿನ ತಿರುಪತಿಯಲ್ಲಿ ಕಾಯಬೇಕಾಯಿತು. ಮತ್ತೊಂದೆಡೆ ದೂರದ ಊರುಗಳಿಂದ ಬಂದಿದ್ದ ಭಕ್ತರು ಸರ್ವದರ್ಶನ ಟೋಕನ್‌ಗಾಗಿ ಎರಡು ದಿನ ಕಾಯಬೇಕಾಯಿತು..
6/ 8
ಇದೇ 13ರ ಟೋಕನ್ ವಿತರಣೆ ನಡೆಯಲಿರುವ ಹಿನ್ನಲೆ ಈ ಗೊಂದಲಕ್ಕೆ ಕಾರಣವಾಗಿದೆ. ಈ ಹಿನ್ನಲೆ ಈ ಹಿಂದೆ ಕೋವಿಡ್ ಹೊರಡಿಸಿದ ನೀತಿಯನ್ನು ಟಿಟಿಡಿ ಜಾರಿಗೆ ತರಬೇಕೆಂದು ಭಕ್ತರು ಆಗ್ರಹಿಸಿದ್ದಾರೆ.
7/ 8
ಘಟನೆಯ ಹಿನ್ನೆಲೆಯಲ್ಲಿ, ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಸಿದ್ಧ ಯಾತ್ರಾ ಸ್ಥಳದಿಂದ ಹಣ ಮಾಡುವ ಬಗ್ಗೆ ಮಾತ್ರ ಕಾಳಜಿ ವಹಿಸುತ್ತದೆ ಎಂದು ಹೇಳಿದರು.
8/ 8
ಅಲಿಪಿರಿಯಿಂದ ದರ್ಶನಕ್ಕೆ ಟೋಕನ್ ಇಲ್ಲದೆ ಭಕ್ತರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಎರಡು ವರ್ಷಗಳ ನಂತರ ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ಗೆ ಭಕ್ತರನ್ನು ಅನುಮತಿಸಲಾಗುತ್ತಿದೆ