Howdy Modi; ಒಂದೇ ವೇದಿಕೆಯಲ್ಲಿ ಟ್ರಂಪ್​-ಮೋದಿ: ಇಲ್ಲಿವೆ 'ಹೌಡಿ ಮೋದಿ' ಕಾರ್ಯಕ್ರಮದ ಕ್ಷಣಗಳು

ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ 7 ದಿನಗಳ ಕಾಲ ಪ್ರವಾಸಕ್ಕೆ ತೆರಳಿದ್ದು, ನಿನ್ನೆ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಮೆರಿಕಾದ ಹೂಸ್ಟನ್​ನಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಒಂದೇ ವೇದಿಕೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್-ಭಾರತದ ಪ್ರಧಾನಿ ನರೇಂದ್ರ ಮೋದಿ ಮುಖಾಮುಖಿಯಾದರು. ಇದು ಬಹುನೀರಿಕ್ಷಿತ ಕಾರ್ಯಕ್ರಮವಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಅನಿವಾಸಿ ಭಾರತೀಯರು ನೆರೆದಿದ್ದರು. ಪ್ರಧಾನಿ ಮೋದಿ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳ ಬಗ್ಗೆ ಹಾಗೂ ಭಾರತ ಬದಲಾಗುತ್ತಿರುವ ಬಗ್ಗೆ ತಮ್ಮ ಭಾಷಣದಲ್ಲಿ ಮಾತನಾಡಿದರು. ಈ ಬಾರಿ ಟ್ರಂಪ್​ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಘೋಷಿಸಿದರು. ಇದೇ ವೇಳೆ ಭಾಷಣದ ಮಧ್ಯೆ ಪ್ರಧಾನಿ ಮೋದಿ ಕನ್ನಡ ಮಾತನಾಡಿ ಕನ್ನಡ ಭಾಷೆಯ ಕಂಪನ್ನು ಅಮೆರಿಕಾ ನೆಲದಲ್ಲಿ ಪಸರಿಸಿದರು.

First published: